ಚಿತ್ರದುರ್ಗ: ಇತ್ತೀಚೆಗೆ ಮಾಜಿ ಸಿಎಂ ಕುಮಾರಸ್ವಾಮಿಗೆ ಪಾಕ್ ಮೇಲೆ ಪ್ರೀತಿ ಬೆಳೆದಿದೆ. ಹೀಗಾಗಿ ಪಾಕ್ ಮೇಲೆ ಪ್ರೀತಿಯಿರುವ ಕುಮಾರಸ್ವಾಮಿ ದೇಶ ಬಿಟ್ಟು ತೊಲಗಲಿ ಎಂದು ಆರೋಗ್ಯ ಸಚಿವ ಶ್ರೀರಾಮುಲು ವಾಗ್ದಾಳಿ ನಡೆಸಿದ್ದಾರೆ.
ಚಿತ್ರದುರ್ಗದ ಭೋವಿ ಗುರುಪೀಠದಲ್ಲಿ ಸಿದ್ದಾರಾಮೇಶ್ವರ ಸ್ವಾಮೀಜಿಯವರನ್ನು ಭೇಟಿಯಾದ ಬಳಿಕ ಮಾತನಾಡಿದ ಅವರು, ಭಾರತ ಭೂಪಟದಲ್ಲಿ ಪಾಕ್ ಇಲ್ಲವಾಗಿದ್ದರೆ ಬಿಜೆಪಿ ಮತ ಗಳಿಸದು ಎಂಬ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು.
Advertisement
Advertisement
ಮಾಜಿ ಪ್ರಧಾನಿ ಪುತ್ರ, ಮಾಜಿ ಸಿಎಂ ಆಗಿ ಕುಮಾರಸ್ವಾಮಿ ಅವರು ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ. ಅಷ್ಟೊಂದು ಪಾಕ್ ಮೇಲೆ ಭಾರತ ದೇಶ ಅವಲಂಬಿತವಾಗಿಲ್ಲ. ಇದು ಹಿಂದೂ ರಾಷ್ಟ್ರ. ಇಲ್ಲಿ ಎಲ್ಲರೂ ಸಮಾನರಾಗಿ ಬಾಳ್ವೆ ಮಾಡಬೇಕು. ಹೀಗಾಗಿ ದೇಶ ಒಡೆಯುವ ಷಡ್ಯಂತ್ರಕ್ಕಾಗಿ ಇಲ್ಲಸಲ್ಲದ ಮಾತು ಸರಿಯಲ್ಲ ಎಂದರು.
Advertisement
ಇದೇ ವೇಳೆ ರಾಜ್ಯ ಸರ್ಕಾರ ಟೇಕ್ ಆಫ್ ಆಗಿಲ್ಲ ಎಂದ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೂ ಶ್ರೀರಾಮುಲು ಪ್ರತಿಕ್ರಿಯಿಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಇಂಗ್ಲಿಷ್ ಪದ ಬಳಸಿ ಟೀಕಿಸುತ್ತಾರೆ. ಆದರೆ ಇತ್ತೀಚಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಎಲ್ಲಿಯೂ ಕಾಣಿಸುತ್ತಿಲ್ಲ, ಯಾರಿಗೂ ಬೇಡವಾದ ವ್ಯಕ್ತಿ ಆಗಿದ್ದಾರೆ. ಅಲ್ಲದೆ ಕಾಂಗ್ರೆಸ್‍ನಲ್ಲಿ ವಿಪಕ್ಷ ಸ್ಥಾನ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಲಾಬಿ ನಡೆಯುತ್ತಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷ ಡೆತ್ ಆಗಿರುವ ಪಾರ್ಟಿ ಆಗಿದೆ ಎಂದು ಕುಟುಕಿದರು.