ಬೆಂಗಳೂರು: ಬೆಂಗಳೂರಿಗೆ (Bengaluru) ಮೋದಿ ಸರ್ಕಾರ ಕೊಟ್ಟಿರುವ ಕೊಡುಗೆಗಳು, ಅನುದಾನವನ್ನು ಅಶೋಕ್ (R Ashok) ಮಹಾರಾಜರು ಬಿಡುಗಡೆ ಮಾಡಲಿ ಎಂದು ಸಂಸದ ಡಿಕೆ ಸುರೇಶ್ (DK Suresh) ಸವಾಲ್ ಹಾಕಿದ್ದಾರೆ.
ಬೆಂಗಳೂರನ್ನು ಬಾಂಬ್ ಬೆಂಗಳೂರು ಮಾಡಬೇಡಿ ಎಂಬ ವಿಪಕ್ಷ ನಾಯಕ ಅಶೋಕ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ವಿರೋಧ ಪಕ್ಷಗಳು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ದೇಶಭಕ್ತಿ ಹೆಸರು ಹೇಳಿಕೊಂಡು ಬೆಂಗಳೂರಿನ ಭದ್ರತೆ ಹಾಳು ಮಾಡಲು ಕೆಲಸ ಮಾಡುತ್ತಿವೆ. ಬಿಜೆಪಿ (BJP) ಅವರಿಂದ ಬೆಂಗಳೂರಿಗೆ ಇರುವ ಕೀರ್ತಿ ಹಾಳು ಮಾಡುವ ಕೆಲಸ ಆಗುತ್ತಿದೆ. ಯಾರೇ ಬಾಂಬ್ ಹಾಕಿದ್ರೂ ಸರ್ಕಾರ ಅವರ ವಿರುದ್ಧ ಕ್ರಮ ತೆಗೆದುಕೊಂಡಿದೆ. ಅಶೋಕ್ ಅವರು ಬಾಂಬ್ ಬೆಂಗಳೂರು ಅಂದಿದ್ದು ಸರಿನಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಬೇರೆ ರಾಜ್ಯಗಳಲ್ಲಿ ಬಿಜೆಪಿ ಎಷ್ಟೆಷ್ಟು ಇನ್ವೆಸ್ಟ್‌ಮೆಂಟ್ ಮಾಡಿದೆ ಎಂಬುದನ್ನು ಬಹಿರಂಗ ಪಡಿಸಲಿ – ಸ್ವಪಕ್ಷಕ್ಕೆ ಹೆಬ್ಬಾರ್ ಸವಾಲು
Advertisement
Advertisement
ಬೆಂಗಳೂರನ್ನು ಗಾರ್ಬೇಜ್ ಸಿಟಿ ಮಾಡಿದ್ದು ಬಿಜೆಪಿ. 40% ಮಾಡಿದ್ದು ಇದೇ ಬಿಜೆಪಿ. ಹಸಿರು ಬೆಂಗಳೂರು ಹಾಳು ಮಾಡಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ. ಈಗ ಇಂತಹ ಕೇವಲ ಮಾತುಗಳನ್ನಾಡೋದು ಬಿಟ್ಟು ಅಭಿವೃದ್ಧಿ ಬಗ್ಗೆ ಮಾತಾಡಿ. ವಿಪಕ್ಷ ನಾಯಕ ಅಶೋಕ್ ಕೇಂದ್ರ ಬಿಜೆಪಿ 10 ವರ್ಷಗಳಲ್ಲಿ ಬೆಂಗಳೂರಿಗೆ ಎಷ್ಟು ಅನುದಾನ ಕೊಟ್ಟಿದೆ ಅದರ ಮಾಹಿತಿ ಮೊದಲು ಬಿಡುಗಡೆ ಮಾಡಿ. ಆಮೇಲೆ ಅಶೋಕ್ ಮಾತಿಗೆ ಉತ್ತರ ಕೊಡುತ್ತೇನೆ ಎಂದರು. ಇದನ್ನೂ ಓದಿ: ರಾಜ್ಯ ಸರ್ಕಾರ ರಾಜೀನಾಮೆ ಕೊಟ್ಟರೆ ಮಾತ್ರ ಜನತೆಗೆ ಶಾಂತಿ, ನೆಮ್ಮದಿಯ ಭರವಸೆ: ಆರ್.ಅಶೋಕ್
Advertisement
Advertisement
ಭದ್ರತೆ, ಸಾರ್ವಜನಿಕರ ರಕ್ಷಣೆ ನಮಗೂ ಮುಖ್ಯನೇ. ಈ ಕೇಸ್ ಅನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಕೇಂದ್ರದ ಜವಾಬ್ದಾರಿಯೂ ಇದರಲ್ಲಿ ಇದೆ. ಎರಡೂ ಸರ್ಕಾರಗಳು ಒಟ್ಟಾಗಿ ಈ ಪ್ರಕರಣದಲ್ಲಿ ಕೆಲಸ ಮಾಡುತ್ತಿವೆ. ಬೆಂಗಳೂರಿಗೆ 10 ವರ್ಷಗಳಲ್ಲಿ ಮೋದಿ ಸರ್ಕಾರ ಏನು ಅನುದಾನ ಕೊಟ್ಟಿದೆ ಎಂದು ಅಶೋಕ್ ಮಹಾರಾಜರು ಬಿಡುಗಡೆ ಮಾಡಬೇಕು. ಬೆಂಗಳೂರಿಗೆ ಕೇಂದ್ರ ಸರ್ಕಾರ ಎಷ್ಟು ಅನುದಾನ ಕೊಟ್ಟಿದೆ ಎಂದು ವಿತ್ತ ಸಚಿವೆ ಬಳಿ ಆದರೂ ಮಾಹಿತಿ ಪಡೆಯಲಿ. ಪ್ರಧಾನಿ ಕಚೇರಿಯಿಂದಾದರೂ ಮಾಹಿತಿ ತಿಳಿದುಕೊಂಡು ಹೇಳಲಿ. ಆಮೇಲೆ ಉಳಿದಿದ್ದಕ್ಕೆ ನಾನು ಉತ್ತರ ಕೊಡುತ್ತೇನೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಪಾಕ್ ಪರ ಘೋಷಣೆ – FSL ವರದಿ ಇನ್ನೂ ಬಂದಿಲ್ಲ, ಬಂದ ನಂತರ ಕ್ರಮ : ಪರಮೇಶ್ವರ್