– ಸ್ನೇಹಿತೆ ಮತ್ತು ಆಕೆಯ ತಾಯಿಯಿಂದಲೇ ಕೃತ್ಯ
ಲಕ್ನೋ: ಲಿಂಗ ಬದಲಾವಣೆ (Gender Change) ನೆಪದಲ್ಲಿ ತಂತ್ರಿಯೋರ್ವ (Tantri) ಸಲಿಂಗಕಾಮಿಯ (Lesbian) ಹತ್ಯೆಗೈದಿರುವ ಘಟನೆ ಉತ್ತರಪ್ರದೇಶದಲ್ಲಿ (Uttara Pradesh) ನಡೆದಿದೆ.
ಆರ್‌ಸಿ ಮಿಷನ್ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಪ್ರಿಯಾ (30) ಹತ್ಯೆಯಾದ ಮಹಿಳೆ. ಈಕೆ ಪುವಾಯನ್ ನಿವಾಸಿಯಾದ ಪ್ರೀತಿ (24) ಎಂಬವಳೊಂದಿಗೆ ಸ್ನೇಹ ಬೆಳೆಸಿದ್ದು, ಅವರಿಬ್ಬರ ಸ್ನೇಹ ಸಲಿಂಗ ಸಂಬಂಧವಾಗಿ ಪರಿವರ್ತನೆಯಾಗಿತ್ತು. ಅಲ್ಲದೇ ಪ್ರಿಯಾ ಜೊತೆಗಿನ ಸಂಬಂಧ ಬೆಳಕಿಗೆ ಬಂದ ಬಳಿಕ ಪ್ರೀತಿಗೆ ಬೇರೆಯವರನ್ನು ಮದುವೆಯಾಗಲು ಸಾಧ್ಯವಾಗುತ್ತಿರಲಿಲ್ಲ ಎಂದು ಪೊಲೀಸ್ ವರಿಷ್ಠಾಧಿಕಾರಿ ಎಸ್ ಆನಂದ್ ತಿಳಿಸಿದ್ದಾರೆ. ಇದನ್ನೂ ಓದಿ: ಅನಾಥ ಬಾಲಕಿ ಮೇಲೆ ಆಶ್ರಮದಲ್ಲೇ ತಿಂಗಳುಗಳಿಂದ ಅತ್ಯಾಚಾರ – ಆಂಧ್ರದ ಸ್ವಾಮೀಜಿ ಅರೆಸ್ಟ್
ಈ ಹಿನ್ನೆಲೆ ಪ್ರೀತಿ ಮತ್ತು ಆಕೆಯ ತಾಯಿ ಊರ್ಮಿಳ ಮೊಹಮ್ಮದಿ ಪ್ರದೇಶದ ನಿವಾಸಿಯಾದ ರಾಮನಿವಾಸ್ ಎಂಬ ತಂತ್ರಿಯನ್ನು ಭೇಟಿ ಮಾಡಿ ಪ್ರಿಯಾಳನ್ನು ಕೊಲ್ಲಲು (Murder) ಯೋಜನೆ ರೂಪಿಸಿದ್ದರು ಎನ್ನಲಾಗಿದೆ. ಅಲ್ಲದೇ ಪ್ರಿಯಾ ತನ್ನ ಲಿಂಗವನ್ನು ಬದಲಾಯಿಸಿಕೊಂಡು ಪುರುಷನಾಗಿ ಬದಲಾಗಲು ಬಯಸಿದ್ದಳು. ಇದರ ಲಾಭ ಪಡೆದ ಪ್ರೀತಿಯ ತಾಯಿ ಪ್ರಿಯಾಳನ್ನು ಕೊಲ್ಲುವ ಸಲುವಾಗಿ ತಂತ್ರಿಗೆ 1.5 ಲಕ್ಷ ರೂ. ನೀಡುವುದಾಗಿ ಆಮಿಷವೊಡ್ಡಿದ್ದಳು. ಇದನ್ನೂ ಓದಿ: 17,500 ರೂ. ಕೊಟ್ಟು ಫೇಶಿಯಲ್ ಮಸಾಜ್ ಮಾಡಿಸಿಕೊಂಡ ಯುವತಿ- ಮುಂದೇನಾಯ್ತು..?
ನಂತರ ಪ್ರೀತಿ ಪ್ರಿಯಾಳಿಗೆ ಕರೆ ಮಾಡಿ ತಂತ್ರಿ ಆಕೆಯ ಲಿಂಗವನ್ನು ಬದಲಾಯಿಸುವುದಾಗಿ ಹೇಳಿ ನಂಬಿಸಿದ್ದಾಳೆ. ಇದನ್ನು ನಂಬಿದ ಪ್ರಿಯಾ ತನ್ನ ಮನೆಯಿಂದ ಹೊರಟು ನಾಪತ್ತೆಯಾಗಿದ್ದಳು. ಪ್ರಿಯಾ ನಾಪತ್ತೆಯಾದ ಹಿನ್ನೆಲೆ ಆಕೆಯ ಮನೆಯವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಆರಂಭಿಸಿದ್ದರು. ಇದನ್ನೂ ಓದಿ: ನಾಯಿ ರೀತಿ ಬೊಗಳು: ಹಿಂದೂ ಯುವಕನಿಗೆ ಅವಹೇಳನ ಮಾಡಿದ ಮೂವರು ಅರೆಸ್ಟ್ – ಮನೆ ಧ್ವಂಸ
ಮಾಹಿತಿ ಆಧಾರದ ಮೇಲೆ ತಂತ್ರಿ ರಾಮನಿವಾಸ್‌ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ನಿಜಾಂಶ ಒಪ್ಪಿಕೊಂಡಿದ್ದಾನೆ. ಪುರುಷನನ್ನಾಗಿ ಪರಿವರ್ತಿಸುವ ನೆಪದಲ್ಲಿ ಪ್ರಿಯಾಳನ್ನು ಕಾಡಿಗೆ ಕರೆದೊಯ್ದು ನದಿಯ ದಡದಲ್ಲಿ ಕಣ್ಣುಮುಚ್ಚಿ ಮಲಗುವಂತೆ ತಂತ್ರಿ ಹೇಳಿದ್ದಾನೆ. ಆಕೆ ಆತನ ಮಾತನ್ನು ಒಪ್ಪಿ ಕಣ್ಣುಮುಚ್ಚಿ ಮಲಗಿದ್ದ ವೇಳೆ ಸುತ್ತಿಗೆ (Hammer) ಸಹಾಯದಿಂದ ಆಕೆಯ ಕುತ್ತಿಗೆ ಸೀಳಿ ಹತ್ಯೆ ಮಾಡಿದ್ದಾನೆ. ಇದನ್ನೂ ಓದಿ: ಫೋನ್‍ನಲ್ಲಿ ಮಾತನಾಡುತ್ತಾ ಬಸ್ ಓಡಿಸಿದ ಚಾಲಕ- 26 ಮಂದಿಗೆ ಗಾಯ, ಇಬ್ಬರು ಗಂಭೀರ
ಆರೋಪಿ ತಂತ್ರಿ ನೀಡಿದ ಮಾಹಿತಿಯ ಮೇರೆಗೆ ಮೃತ ಪ್ರಿಯಾಳ ಸ್ನೇಹಿತೆ ಪ್ರೀತಿಯನ್ನು ಮಂಗಳವಾರ ಬಂಧಿಸಿದ್ದು, ಇಬ್ಬರನ್ನೂ ಜೈಲಿಗೆ ಕಳುಹಿಸಲಾಗಿದೆ. ಅಲ್ಲದೇ ಹತ್ಯೆಗೆ ಬಳಸಿದ್ದ ಸುತ್ತಿಗೆಯನ್ನು ತಂತ್ರಿಯ ಮನೆಯಿಂದ ವಶಪಡಿಸಿಕೊಳ್ಳಲಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಕಿಡ್ನಾಪ್ ಕಥೆ ಕಟ್ಟಿ ಸ್ನೆಹಿತನೊಂದಿಗೆ ಅಪ್ರಾಪ್ತೆ ಪರಾರಿ