ಬೆಂಗಳೂರು: ಕಳೆದ 3 ದಿನಗಳಿಂದ ಬೆಂಗಳೂರಿನ (Bengaluru) ಜನರಲ್ಲಿ ಆತಂಕ ಮೂಡಿಸಿದ್ದ ಚಿರತೆಯನ್ನು (Leopard) ಅರಣ್ಯ ಇಲಾಖೆ ಅಧಿಕಾರಿಗಳು ಸತತ ಕಾರ್ಯಾಚರಣೆ ನಂತರ ಇಂದು (ಬುಧವಾರ) ಸೆರೆಹಿಡಿದಿದ್ದಾರೆ. ಆದರೆ ಸೆರೆ ಸಿಕ್ಕ ಚಿರತೆ ಇದೀಗ ಮೃತಪಟ್ಟಿದೆ.
ಚಿರತೆಯನ್ನು ಸೆರೆಹಿಡಿಯುವ ಕಾರ್ಯಾಚರಣೆ ವೇಳೆ ಅದು ಅಧಿಕಾರಿಗಳ ಮೇಲೆ ದಾಳಿಗೆ ಯತ್ನಿಸಿದ್ದು, ಈ ಹಿನ್ನೆಲೆ ಅಧಿಕಾರಿಗಳು ಗುಂಡಿನ ದಾಳಿ ನಡೆಸಿದ್ದರು. ಹೀಗಾಗಿ ಚಿರತೆ ಸಾವನ್ನಪ್ಪಿದೆ. ಇದನ್ನೂ ಓದಿ: Operation Leopard: ಬೆಂಗಳೂರಿನಲ್ಲಿ ಚಿರತೆ ಕಾರ್ಯಾಚರಣೆ ಯಶಸ್ವಿ – ಕೊನೆಗೂ ಸೆರೆಹಿಡಿದ ಸಿಬ್ಬಂದಿ
Advertisement
Advertisement
ಚಿರತೆಯನ್ನು ಅರವಳಿಕೆ ಚುಚ್ಚುಮದ್ದು ನೀಡಿ ಸೆರೆಹಿಡಿಯಲಾಗಿತ್ತು. ಅರವಳಿಕೆ ಮದ್ದು ನೀಡಿದ ನಂತರವೂ ಅರೆಪ್ರಜ್ಞಾವಸ್ಥೆಯಲ್ಲಿದ್ದ ಚಿರತೆ ಪಶುವೈದ್ಯರ ಮೇಲೂ ದಾಳಿ ನಡೆಸಿತ್ತು. ಕೊನೆಗೂ ಹರಸಾಹಸಪಟ್ಟು ಚಿರತೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು. ಬಳಿಕ ಅರವಳಿಕೆ ತಜ್ಞ ಕಿರಣ್ ಅವರನ್ನು ಅರಣ್ಯಾಧಿಕಾರಿಗಳು ಆಸ್ಪತ್ರೆಗೆ ಕರೆದೊಯ್ದರು. ನಂತರ ಲೆಪರ್ಡ್ಸ್ ಟಾಸ್ಕ್ಫೋರ್ಸ್ ವಾಹನಕ್ಕೆ ಚಿರತೆಯನ್ನು ಶಿಫ್ಟ್ ಮಾಡಿ ಕರೆದೊಯ್ಯಲಾಯಿತು. ಇದನ್ನೂ ಓದಿ: ವನ್ಯಜೀವಿಗಳ ವಸ್ತುಗಳನ್ನಿಟ್ಟುಕೊಂಡವರು 2-3 ತಿಂಗಳಲ್ಲಿ ವಾಪಸ್ ಮಾಡಬೇಕು: ಡೆಡ್‌ಲೈನ್ ನೀಡಿದ ಖಂಡ್ರೆ
Advertisement
Web Stories