ಗದಗ: ಎದುರಿಗೆ ಬಂದ ಚಿರತೆಯನ್ನು (Leopard) ಕಂಡು ವಾಹನ ಸವಾರರು ಆತಂಕಕ್ಕೆ ಒಳಗಾದ ಘಟನೆ ಗದಗ (Gadag) ಜಿಲ್ಲೆಯಲ್ಲಿ ನಡೆದಿದೆ.
ಗದಗ ಜಿಲ್ಲೆಯ ಮುಂಡರಗಿ (Mundaragi) ತಾಲೂಕಿನ ಡೋಣಿ ಗ್ರಾಮದ ಬಳಿಯ ಕಪ್ಪತ್ತಗುಡ್ಡದಲ್ಲಿ (Kappatagudda) ಚಿರತೆಯೊಂದು ಪ್ರತ್ಯಕ್ಷವಾಗಿದೆ. ಕಪ್ಪತ್ತಗುಡ್ಡದ ಗಾಳಿಗುಂಡಿ ಬಸವಣ್ಣ ದೇವಸ್ಥಾನದ ಬಳಿ ಸ್ಕಾರ್ಪಿಯೋ ವಾಹನದಲ್ಲಿ ಹೋಗುತ್ತಿದ್ದ ಸಂದರ್ಭ ಚಿರತೆ ಕಂಡುಬಂದಿದೆ. ರಸ್ತೆಮಧ್ಯ ಚಿರತೆ ಅಲ್ಲಾಡದಂತೆ ಗಾಂಭೀರ್ಯವಾಗಿ ನಿಂತುಕೊಂಡಿದ್ದರಿಂದ ಒಂದು ಕ್ಷಣ ವಾಹನ ಸವಾರರು ಭಯಭೀತರಾಗಿದ್ದಾರೆ. ಈ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯಲಾಗಿದೆ. ಇದನ್ನೂ ಓದಿ: ಯುಗಾದಿ ಹಬ್ಬದಂದು ಮತ್ತೆ ಮುನ್ನೆಲೆಗೆ ಬಂತು ಹಲಾಲ್ ಬಾಯ್ಕಾಟ್ ಅಭಿಯಾನ
Advertisement
Advertisement
ಘಟನೆಯಿಂದ ಕಪ್ಪತ್ತಗುಡ್ಡ ಸೆರಗಿನ ಗ್ರಾಮಗಳಲ್ಲಿ ಆತಂಕ ಹೆಚ್ಚಿದೆ. ಕಪ್ಪತ್ತಗುಡ್ಡಕ್ಕೆ ಬರುವ ಜನರಿಗೆ ಚಿರತೆ ನೋಡಿದ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ. ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ (Forest Department) ಸ್ಥಳೀಯರು ಆಗ್ರಹಿಸಿದ್ದಾರೆ. ಈ ಹಿಂದೆಯೂ ಕಪ್ಪತ್ತ ಮಲ್ಲೇಶ್ವರ ದೇವಸ್ಥಾನದ ಬಳಿ, ಕಡಕೋಳ ಭಾಗ ಹಾಗೂ ಮೈನಿಂಗ್ ಪ್ರದೇಶಲ್ಲಿ ಚಿರತೆ ಸೆರೆಹಿಡಿಯಲಾಗಿದೆ. ಗಾಳಿಗುಂಡಿ ಬಸವಣ್ಣ ಬಳಿ ಪ್ರತ್ಯಕ್ಷವಾದ ಚಿರತೆ ವೀಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಶೋಧ ಕಾರ್ಯಕ್ಕೆ ಮುಂದಾಗಿದ್ದಾರೆ. ಇದನ್ನೂ ಓದಿ: ಒಂಟಿ ಮನೆಗೆ ನುಗ್ಗಿ ಡಕಾಯಿತಿ ಮಾಡಿದ್ದ ರೌಡಿ ಗ್ಯಾಂಗ್ ಅರೆಸ್ಟ್
Advertisement