ಬೆಂಗಳೂರು: ನಗರದ ಹೊರವಲಯದಲ್ಲಿ ಮತ್ತೆ ಚಿರತೆ (Leopard) ಆತಂಕ ಶುರುವಾಗಿದೆ. ರಾತ್ರಿ ಹೊತ್ತು ಆಗಾಗ್ಗೆ ಕಾಣಿಸಿಕೊಳ್ಳುತ್ತಿರುವ ಚಿರತೆ. ಯಲಹಂಕ ವಿಮಾನ ನಿಲ್ದಾಣದ (Airport) ಸುತ್ತಾ ಮುತ್ತಾ ಇರುವ ಜನರಲ್ಲಿ ಭಯ ಹುಟ್ಟಿಸಿದೆ.
ಹೌದು. ಅದು ಅಕ್ಟೋಬರ್ 29ರ ಸಂಜೆ 7 ಗಂಟೆಯ ಸಮಯ.. ಯಲಹಂಕ (Yalahanka) ತಾಲೂಕಿನ ನೆಲ್ಲುಕುಂಟೆ ಗ್ರಾಮದಲ್ಲಿರೊ ಇದೇ ಗೋಡೆಯ ಮೇಲೆ ಚಿರತೆ ಹೆಜ್ಜೆ ಹಾಕಿತ್ತು. ಅದೇ ಚಿರತೆಯ ದೃಶ್ಯ ಪಕ್ಕದಲ್ಲೇ ನಿರ್ಮಾಣ ಆಗ್ತಿರೊ ಕಟ್ಟಡದಲ್ಲಿ ಕೆಲಸ ಮಾಡ್ತಿದ್ದ ಕಾರ್ಮಿಕರ ಮೊಬೈಲ್ ನಲ್ಲಿ ಸೆರೆ ಹಿಡಿಯಲಾಗಿದೆ. ಆ ದೃಶ್ಯ ವೈರಲ್ ಆಗುತ್ತಿದ್ದಂತೆ ಸ್ಥಳೀಯರಲ್ಲಿ ಆತಂಕ ಹುಟ್ಟು ಹಾಕಿದೆ. ಏರ್ಪೋರ್ಟ್ ರಸ್ತೆಯ ಹುಣಸೆಮಾರನಹಳ್ಳಿ, ನೆಲ್ಲುಕುಂಟೆ, ಗಂಡಿಗೆನಹಳ್ಳಿ ಜನರು ಘಟನೆಯಿಂದ ತಲ್ಲಣಗೊಂಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ಕ್ಷೇತ್ರಗಳಿಗೆ ಅನುದಾನ ಹಂಚಿಕೆಯಲ್ಲೂ ರಾಜಕೀಯ – ಜಯನಗರಕ್ಕಿಲ್ಲ ಫಂಡ್; ಆಕ್ರೋಶ
ಇನ್ನೂ ಚಿರತೆ ಕಾಣಿಸಿಕೊಂಡಿರೋದು ಇದೇ ಮೊದಲೇನಲ್ಲ. ಕಳೆದ ಭಾನುವಾರ ಕೂಡ ಇದೇ ಜಾಗದಲ್ಲಿ ಚಿರತೆ ಕಾಣಿಸಿಕೊಂಡಿತ್ತಂತೆ. ಆದ್ರೆ ಅದರ ವೀಡಿಯೋ ಸಿಕ್ಕಿರಲಿಲ್ಲ. ಯಾವಾಗಾ ಮಂಗಳವಾರ (ಅ.29) ಚಿರತೆ ಕಾಣಿಸಿಕೊಳ್ತೊ.. ಅದರ ವೀಡಿಯೊ ಸೆರೆ ಹಿಡಿಯಲಾಗಿದೆ. ಇದು ಸ್ಥಳೀಯರಲ್ಲಿ ಭಯ ಹುಟ್ಟಿಸಿದೆ. ತಕ್ಷಣ ಅಲರ್ಟ್ ಆದ ಸ್ಥಳೀಯರು, ಯಲಹಂಕ ವಲಯ ಅರಣ್ಯಾಧಿಕಾರಿಗಳಿಗೆ ವಿಚಾರ ತಿಳಿಸಿದ್ದು, ಇಂದಿನಿಂದ ಚಿರತೆ ಸೆರೆಹಿಡಿಯೊ ಕಾರ್ಯಾಚರಣೆಯ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಬಿಜೆಪಿಯಿಂದ 8 ಶಾಸಕರು ಕಾಂಗ್ರೆಸ್ ಸೇರ್ತಾರೆ: ಎಸ್.ಟಿ.ಸೋಮಶೇಖರ್ ಹೇಳಿಕೆಗೆ ಶಿವರಾಮ್ ಹೆಬ್ಬಾರ್ ಸಹಮತ
ಇನ್ನೂ ಬೆಂಗಳೂರಲ್ಲಿ ಪದೇ ಪದೇ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಜನ ಭಯಭೀತರಾಗಿದ್ದಾರೆ. ಆದಷ್ಟು ಬೇಗ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆ ಹಿಡಿದು ಜನರಲ್ಲಿನ ಆತಂಕ ದೂರ ಮಾಡಬೇಕಿದೆ. ಇದನ್ನೂ ಓದಿ: ಯಶ್ ‘ಟಾಕ್ಸಿಕ್’ ಸಿನಿಮಾಗಾಗಿ ಮರ ಕಡಿದ ಆರೋಪ – ಸಚಿವರ ಆರೋಪಕ್ಕೆ ಚಿತ್ರತಂಡದ ಸ್ಪಷ್ಟನೆ ಏನು?