ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೆಂಗನಹಳ್ಳಿ ಗ್ರಾಮದ ಹೊರವಲಯದಲ್ಲಿನ ಬೆಟ್ಟದಲ್ಲಿ (Chikkaballapur Hill) ಚಿರತೆ ಪ್ರತ್ಯಕ್ಷವಾಗಿದೆ.
ರೈತರು ಜಮೀನುಗಳಿಗೆ ತೆರಳುತ್ತಿದ್ದ ವೇಳೆ ಚಿರತೆ (Leopold) ಕಾಣಿಸಿಕೊಂಡಿದ್ದು ಕೆಂಗನಹಳ್ಳಿ ಸೇರಿದಂತೆ ಗುನನ್ಹಳ್ಳಿ ಗ್ರಾಮದ ಜನ ಆತಂಕಗೊಂಡಿದ್ದಾರೆ. ಇದನ್ನೂ ಓದಿ: ಸ್ವಿಮ್ಮಿಂಗ್‌ಪೂಲ್‌ನಲ್ಲಿ ಮುಳುಗಿ ಮೂವರು ಯುವತಿಯರ ದುರ್ಮರಣ; ರೆಸಾರ್ಟ್ ಸೀಲ್‌ಡೌನ್, ಮಾಲೀಕ ವಶಕ್ಕೆ
Advertisement
Advertisement
ಇದರಿಂದ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಮುನಿಸ್ವಾಮಿ ಎಂಬಾತ ಡ್ರೋನ್ ಕ್ಯಾಮೆರಾ ತರಿಸಿ ಚಿರತೆಯ ಚಲನವಲನಗಳನ್ನು ಸೆರೆ ಮಾಡಿಸಿದ್ದಾರೆ. ಕೆಂಗನಹಳ್ಳಿ ಬೆಟ್ಟದಲ್ಲಿ ಚಿರತೆ ಇರೋದು ದೃಢವಾಗಿದ್ದು ಡ್ರೋನ್ ಕ್ಯಾಮೆರಾದಲ್ಲಿ ಚಿರತೆ ಸೆರೆಯಾಗಿದೆ. ಇದನ್ನೂ ಓದಿ: ವಕ್ಫ್ ಆಸ್ತಿ ವಿವಾದ – ಮಂತ್ರಾಲಯದ ಜಾಗ ಆದೊನಿ ನವಾಬರು ಕೊಟ್ಟಿದ್ದು: ಸಿಎಂ ಇಬ್ರಾಹಿಂ
Advertisement
Advertisement
ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಸರ್ಕಾರದ ಮೇಲಿನ ಹೊರೆ ತಪ್ಪಿಸಲು 11 ಲಕ್ಷ ಬಿಪಿಎಲ್ ಕಾರ್ಡ್‌ಗಳು ಎಪಿಎಲ್‌ಗೆ ಶಿಫ್ಟ್: ಹೆಚ್‌ಡಿಕೆ ಬಾಂಬ್