ದಿಸ್ಪುರ್: ಅಸ್ಸಾಂನಲ್ಲಿ (Assam) ಚಿರತೆಯೊಂದು (Leopard) ಬೇಲಿಯನ್ನು ಹಾರಿ ಸಿಕ್ಕ ಸಿಕ್ಕ ಜನರ ಮೇಲೆ ದಾಳಿ ಮಾಡಿದೆ. ಚಿರತೆ ದಾಳಿಗೆ ಅರಣ್ಯಾಧಿಕಾರಿಗಳು ಸೇರಿ 15 ಜನರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಸ್ಸಾಂನ ಜೋರ್ಹತ್‌ನಲ್ಲಿ (Jorhat) ಕಳೆದ 24 ಗಂಟೆಗಳಿಂದ ಚಿರತೆ ಅರಣ್ಯಾಧಿಕಾರಿಗಳು, ಮಕ್ಕಳು, ಮಹಿಳೆಯರು ಸೇರಿದಂತೆ ಸ್ಥಳೀಯ ನಿವಾಸಿಗಳ ಮೇಲೆ ದಾಳಿ ಮಾಡಿದೆ. ಅರಣ್ಯಾಧಿಕಾರಿಗಳು ಚಿರತೆಯನ್ನು ಹಿಡಿಯುವ ಪ್ರಯತ್ನದ ವೇಳೆ ವೀಡಿಯೋವೊಂದನ್ನು ಸೆರೆಹಿಡಿದಿದ್ದಾರೆ. ಅದರಲ್ಲಿ ಚಿರತೆ ದೊಡ್ಡ ಮುಳ್ಳುತಂತಿ ಬೇಲಿಯಿದ್ದ ಗೋಡೆಯನ್ನು ಹಾರಿ ವಾಹನಗಳ ಮೇಲೆ ದಾಳಿ ಮಾಡುವುದು ಕಂಡುಬಂದಿದೆ. ಇದನ್ನೂ ಓದಿ: ICUನಲ್ಲಿ ನೆರವೇರಿದ ಕೊನೆ ಆಸೆ- ಮಗಳ ಮದುವೆ ನೋಡಿ ಕೊನೆಯುಸಿರೆಳೆದ ತಾಯಿ
Advertisement
A leopard has jumped into a car in the presence of people in Jorhat Assam. What a huge leap the leopard has made! The passenger barely survived as the windows of the car were closed. He is still wandering around in fear of people. pic.twitter.com/I4o9apw5jj
— Nandan Pratim Sharma Bordoloi (@NANDANPRATIM) December 26, 2022
Advertisement
ಆರ್‌ಎಫ್‌ಆರ್‌ಐ ಜೋರ್ಹತ್‌ನ ಹೊರವಲಯದಲ್ಲಿ ಕಾಡುಗಳಿದ್ದು, ಅಲ್ಲಿಂದ ಚಿರತೆ ಜನವಸತಿ ಪ್ರದೇಶಕ್ಕೆ ಬಂದಿದೆ ಎನ್ನಲಾಗಿದೆ. ಚಿರತೆಯನ್ನು ಹಿಡಿಯಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದು, ನಿವಾಸಿಗಳಿಗೆ ಮನೆಯೊಳಗೆ ಇರುವಂತೆ ಎಚ್ಚರಿಕೆ ನೀಡಲಾಗಿದೆ.
Advertisement
ಚಿರತೆ ದಾಳಿಯಿಂದಾಗಿ ಗಾಯಗೊಂಡವರನ್ನು ಆಸ್ಪತ್ರೆ ದಾಖಲಿಸಲಾಗಿದೆ. ಸದ್ಯ ಇಲ್ಲಿಯವರೆಗೂ ಯಾರಿಗೂ ಪ್ರಾಣಾಪಾಯವಾಗಿರುವ ಬಗ್ಗೆ ವರದಿಯಾಗಿಲ್ಲ. ಇದನ್ನೂ ಓದಿ: ಪೆರೋಲ್ ಪಡೆದು ಪರಾರಿಯಾದಾತ ತನ್ನದೇ ಸಾವಿನ ಕತೆ ಕಟ್ಟಿದ – 15 ವರ್ಷಗಳ ಬಳಿಕ ಮತ್ತೆ ಅಂದರ್