ಹಾಸನ: ನಾಯಿ, ಹಸು, ಕರುಗಳನ್ನು ಹೊತ್ತೊಯ್ದು ಚಿರತೆಯೊಂದು ತಿಂದು ಹಾಕುತ್ತಿದೆ. ಈ ಘಟನೆಗಳು ಮಿತಿಮೀರಿ ನಡೆಯುತ್ತಿರುವುದರಿಂದ ಕಾರ್ಮಿಕರು ಜೀವ ಭಯಪಟ್ಟು ಕಾಫಿ ತೋಟದ ಕೆಲಸಕ್ಕೆ ಬರುತ್ತಿಲ್ಲ.
ಹಾಸನ ಜಿಲ್ಲೆ, ಆಲೂರು ತಾಲೂಕಿನ ಅಡಿಬೈಲು ಗ್ರಾಮದಲ್ಲಿ ಲಿಂಗರಾಜು ಅವರಿಗೆ ಸೇರಿದ ಹಸು ಮೇಯುತ್ತಿದ್ದ ವೇಳೆ ಚಿರತೆ ದಾಳಿ ಮಾಡಿ, ಹೊತ್ತೊಯ್ದು ತಿಂದು ಹಾಕಿದೆ. ಕಳೆದ ಒಂದು ತಿಂಗಳಿನಿಂದ ಈ ಭಾಗದಲ್ಲಿ ನಾಯಿ, ಕರು, ಹಸುಗಳನ್ನು ಹೊಯ್ಯೊಯ್ದು ತಿಂದು ಹಾಕುತ್ತಿದೆ ಎಂದು ಜನರು ಆತಂಕ ವ್ತಕ್ತಪಡಿಸುತ್ತಿದೆ. ಈ ಹಿನ್ನೆಲೆ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಒಂದೇ ಸಿರಿಂಜ್‍ನಿಂದ 39 ವಿದ್ಯಾರ್ಥಿಗಳಿಗೆ ಲಸಿಕೆ – ನರ್ಸಿಂಗ್ ವಿದ್ಯಾರ್ಥಿ ಅರೆಸ್ಟ್
Advertisement
Advertisement
ಅಡಿಬೈಲು ಗ್ರಾಮದ ಸುತ್ತಮುತ್ತ ಹಗಲು ವೇಳೆಯಲ್ಲಿಯೇ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಚಿರತೆ ದಾಳಿ ಮಾಡುವ ಭಯದಿಂದ ಕಾಫಿ ತೋಟದ ಕೆಲಸಕ್ಕೆ ಕಾರ್ಮಿಕರು ಬಾರದಂತಾಗಿದೆ. ಇದರಿಂದ ಕಾಫಿ ತೋಟದ ಮಾಲೀಕರಿಗೆ ತೀವ್ರ ತೊಂದರೆಯುಂಟಾಗಿದೆ.
Advertisement
Advertisement
ಚಿರತೆ ಹಾವಳಿ ಬಗ್ಗೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ದೂರು ನೀಡಿದ್ದು, ಶೀಘ್ರವೇ ಚಿರತೆ ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ.