Connect with us

Latest

ಜಿಂಕೆಯನ್ನು ಬಾಯಲ್ಲಿ ಕಚ್ಚಿಕೊಂಡು ಸರಸರನೇ ಮರವೇರಿದ ಚಿರತೆ- ವಿಡಿಯೋ

Published

on

– ತನ್ನ ತೂಕದ ಮೂರು ಪಟ್ಟು ತೂಕಹೊತ್ತು ಮರವೇರಬಲ್ಲ ಚೀತಾ

ನವದೆಹಲಿ: ದೊಡ್ಡ ಜಿಂಕೆಯನ್ನು ಬಾಯಲ್ಲಿ ಕಚ್ಚಿಕೊಂಡು ಚಿರತೆಯೊಂದು ಕ್ಷಣಮಾತ್ರದಲ್ಲಿ ಸರಸರನೇ ಮರವೇರಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಸ್ ಆಗುತಿದೆ.

ಸದಾ ತಮ್ಮ ಟ್ವಿಟ್ಟರ್ ಹಿಂಬಾಲಕರಿಗಾಗಿ ಅರಣ್ಯದಲ್ಲಿ ನಡೆಯುವ ಚಿತ್ರವಿಚಿತ್ರ ಮತ್ತು ಪ್ರಾಣಿಗಳ ಕುರಿತು ಫೋಟೋ ಹಾಗೂ ವಿಡಿಯೋ ಹಾಕುವ ಅರಣ್ಯಾಧಿಕಾರಿ ಪರ್ವೀನ್ ಕಸ್ವಾಲ್ ಅವರು ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಟ್ವಿಟ್ಟರ್ ನಲ್ಲಿ ಈ ವಿಡಿಯೋ ನೋಡಿದ ನೆಟ್ಟಿಗರು, ಚಿರತೆಯ ವೇಗ ಮತ್ತು ಶಕ್ತಿಯನ್ನು ನೋಡಿ ಅಚ್ಚರಿಗೊಂಡಿದ್ದಾರೆ.

ಚಿರತೆಯ ವಿಡಿಯೋವನ್ನು ಶೇರ್ ಮಾಡಿರುವ ಕಸ್ವಾಲ್ ಅವರು, ನಂಬಲಾಗದ ರೀತಿಯಲ್ಲಿ ಇದೇ ಈ ದೃಶ್ಯ, ಚಿರತೆ ತನ್ನ ಮೂರು ಪಟ್ಟು ಭಾರವಾದ ಬೇಟೆಯನ್ನು ಹೊತ್ತುಕೊಂಡು ನೇರವಾಗಿ ಇರುವ ಮರವನ್ನು ಯಾವುದೇ ಅಡತಡೆಯಿಲ್ಲದೇ ಹತ್ತುತ್ತದೆ. ನಾವು ಚಿರತೆ ಕೆಲವು ಬಾರಿ ಮರದಮೇಲೆ ವಾಸಿಸುವುದನ್ನು ನೋಡಿದ್ದೇವೆ. ಬಹಳ ಹತ್ತಿರದಿಂದ ಈ ವಿಡಿಯೋವನ್ನು ಸೆರೆಹಿಡಿಯಲಾಗಿದೆ. ಇದನ್ನು ನನ್ನ ಸ್ನೇಹಿತರು ಕಳುಹಿಸಿದ್ದರು ಎಂದು ಬರೆದುಕೊಂಡಿದ್ದಾರೆ.

ಕಸ್ವಾಲ್ ಅವರು ಪೋಸ್ಟ್ ಮಾಡಿರುವ 1.31 ಸೆಕೆಂಡ್ ಇರುವ ಈ ವಿಡಿಯೋದಲ್ಲಿ ಒಂದು ದೊಡ್ಡ ಚಿರತೆಯನ್ನು ಏಕಾಂಗಿಯಾಗಿ ಬೇಟಿಯಾಡಿರುವ ಚಿರತೆ, ಅದನ್ನು ಒಂದು ಮರದ ಬಳಿ ತೆಗೆದುಕೊಂಡು ಬಂದಿರುತ್ತದೆ. ಈ ವೇಳೆ ಅಲ್ಲಿ ನಿಂತಿದ್ದ ಪ್ರವಾಸಿಗರ ಮುಂದೆಯೇ ರಾಜರೋಷವಾಗಿ ಅದನ್ನು ಕಚ್ಚಿಕೊಂಡು ಒಂದು ಉದ್ದನೇಯ ಮರಕ್ಕೆ ಶ್ರಮಪಡೆದೆ ಹತ್ತಿಕೊಂಡು ಹೋಗುತ್ತದೆ.

ಈ ವಿಡಿಯೋವನ್ನು ಸ್ಥಳದಲ್ಲಿ ಇದ್ದ ಪ್ರವಾಸಿಗರು ಶೂಟ್ ಮಾಡಿದ್ದಾರೆ. ಈ ವಿಡಿಯೋವನ್ನು ಟ್ವಿಟ್ಟರ್ ನಲ್ಲೇ ಒಂದೂವರೆ ಲಕ್ಷಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. ಜೊತೆಗೆ ಒಂದು ಲಕ್ಷಕ್ಕೂ ಹೆಚ್ಚಿನ ಜನರು ಲೈಕ್ ಮಾಡಿದ್ದಾರೆ. ಇನ್ನೂ ಕೆಲವರು ಚಿರತೆಯ ದೈಹಿಕ ಸಾಮರ್ಥ್ಯ ನೋಡಿ ಫಿದಾ ಆಗಿ ಕಮೆಂಟ್ ಕೂಡ ಮಾಡಿದ್ದಾರೆ.

Click to comment

Leave a Reply

Your email address will not be published. Required fields are marked *