ಮೈಸೂರು: ಇಲ್ಲಿನ ಇನ್ಫೋಸಿಸ್ (Infosys) ಕ್ಯಾಂಪಸ್ನಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಸಿಬ್ಬಂದಿಗೆ ವರ್ಕ್ ಫ್ರಮ್ ಹೋಮ್ ಘೋಷಣೆ ಮಾಡಲಾಗಿದೆ.
ಕ್ಯಾಂಪಸ್ನಲ್ಲಿ ಚಿರತೆ ಓಡಾಟ ಹಿನ್ನೆಲೆ ಸುರಕ್ಷತೆ ದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಇನ್ಫೋಸಿಸ್ ಹ್ಯೂಮನ್ ರಿಸೊರ್ಸ್ ವಿಭಾಗದಿಂದ ಮನೆಯಲ್ಲೇ ಕೆಲಸ ನಿರ್ವಹಿಸುವಂತೆ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ ದೇಶದಲ್ಲೇ 3ನೇ ಶ್ರೀಮಂತ ಸಿಎಂ – ನಂಬರ್ ಒನ್ ಯಾರು?
Advertisement
Advertisement
ಇಂದು ಬೆಳಗ್ಗೆ ಕ್ಯಾಂಪಸ್ನಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಚಿರತೆಯ ಚಲನವಲನ ಕ್ಯಾಂಪಸ್ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಯಾವುದೇ ಸಿಬ್ಬಂದಿಯನ್ನು ಕ್ಯಾಂಪಸ್ ಒಳಗಡೆ ಬಿಡಲಾಗುವುದಿಲ್ಲ ಎಂದು ಸಂಸ್ಥೆಯಿಂದ ಆದೇಶ ಹೊರಡಿಸಲಾಗಿದೆ.