(ಸಾಂದರ್ಭಿಕ ಚಿತ್ರ)
ಮುಂಬೈ: ಸೊಳ್ಳೆ ಪರದೆಯ ಅಡಿ ನಿದ್ದೆ ಮಾಡುತ್ತಿದ್ದ ಇಬ್ಬರು ಮಕ್ಕಳ ಬಳಿ ಚಿರತೆ ಮರಿಯನ್ನು ಕಂಡು ತಾಯಿ ಬೆಚ್ಚಿಬಿದ್ದ ಘಟನೆ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.
Advertisement
ಇಬ್ಬರು ಮಕ್ಕಳು ಎಂದಿನಂತೆ ಸೊಳ್ಳೆ ಪರದೆ ಅಡಿಯಲ್ಲಿ ಹಾಸಿಗೆಯಲ್ಲಿ ನಿದ್ದೆ ಮಾಡುತ್ತಿದ್ದರು. ಬೆಳಗ್ಗಿನ ಜಾವ ತಾಯಿ ಮೂತ್ರ ವಿಸರ್ಜನೆ ಮಾಡಲು ಎದ್ದಾಗ ಮಕ್ಕಳ ಬಳಿ ಮಲಗಿರುವ ಪ್ರಾಣಿಯನ್ನು ಕಂಡು ಬೆಕ್ಕು ಇರಬಹುದು ಎಂದು ಭಾವಿಸಿದ್ದಳು. ಆದರೆ ಬೆಕ್ಕು ಹೀಗೆ ಇರುವುದಿಲ್ಲ ಎಂದು ತಿಳಿದು ಮತ್ತೆ ಆ ಪ್ರಾಣಿಯನ್ನು ನೋಡಿದಾಗ ನಿದ್ದೆ ಮಾಡುತ್ತಿರುವುದು ಚಿರತೆ ಮರಿ ಎನ್ನುವುದು ಗೊತ್ತಾಗಿದೆ.
Advertisement
ಈ ದೃಶ್ಯವನ್ನು ಕಂಡು ಹೌಹಾರಿದ ತಾಯಿ ಮಕ್ಕಳನ್ನು ಅಲ್ಲಿಂದ ಮೆಲ್ಲನೆ ಸರಿಸಿ ಬಳಿಕ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾಳೆ. ನಂತರ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ 3 ತಿಂಗಳ ಚಿರತೆ ಮರಿಯನ್ನು ರಕ್ಷಿಸಿದ್ದಾರೆ.
Advertisement
ಅರಣ್ಯಾಧಿಕಾರಿಗಳು ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದು, ತಾಯಿ ಬೆಳಗ್ಗೆ ಮುಖ್ಯ ಬಾಗಿಲನ್ನು ತೆರೆದಿದ್ದರಿಂದ ಚಿರತೆ ಮರಿ ಮನೆ ಪ್ರವೇಶಿಸಿ ಮಕ್ಕಳ ಜೊತೆ ನಿದ್ದೆ ಮಾಡಿದೆ. 5 ಗಂಟೆಗೆ ಈ ವಿಚಾರ ನಮಗೆ ಗೊತ್ತಾಗಿ 6 ಗಂಟೆಗೆ ಚಿರತೆ ಮರಿಯನ್ನು ರಕ್ಷಿಸಿದ್ದೇವೆ. ಮರಿ ಯಾರಿಗೂ ತೊಂದರೆ ನೀಡಿಲ್ಲ. ರಕ್ಷಣೆ ಮಾಡಿದ್ದ ಮರಿಯನ್ನು ನಾವು ಸ್ಥಳೀಯ ಅರಣ್ಯ ಇಲಾಖೆಯ ಕಚೇರಿಯಲ್ಲಿ ಬಿಟ್ಟಿದ್ದೇವೆ ಎಂದು ತಿಳಿಸಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv