
ಶಿವಮೊಗ್ಗ: ಕಳೆದೊಂದು ವಾರದಿಂದ ಶಿವಮೊಗ್ಗ ತಾಲೂಕಿನ ಕ್ಯಾತಿನಕೊಪ್ಪದ ತೋಟ ಹಾಗೂ ಮನೆಗಳ ಬಳಿ ಕಾಣಿಸಿಕೊಳ್ಳುತ್ತಿದ್ದ ಚಿರತೆ ಬೋನಿಗೆ ಬಿದ್ದಿದ್ದು, ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.
Advertisements
ಗ್ರಾಮದ ಸಮೀಪದಲ್ಲಿರುವ ತೋಟದ ಮನೆಯಲ್ಲಿ ಮಂಜುನಾಥ್ ಎಂಬವರ ಕುಟುಂಬ ವಾಸವಿದೆ. ಕಳೆದ ನಾಲ್ಕೈದು ದಿನದ ಹಿಂದೆ ಮಂಜುನಾಥ್ ಅವರ ಸಾಕು ನಾಯಿಯನ್ನು ಚಿರತೆ ಬೇಟೆ ಆಡಿದ್ದನ್ನು ಗಮನಿಸಿದ್ದರು. ಈ ಬಗ್ಗೆ ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಇದನ್ನೂ ಓದಿ: ನಮ್ಮ ಪರಿವಾರಕ್ಕೆ ಹೊಸ ಸದಸ್ಯನ ಆಗಮನವಾಗಿದೆ: ಎಚ್‍ಡಿಕೆ
Advertisements
ಕಳೆದ ಐದು ದಿನದಿಂದ ಅರಣ್ಯ ಇಲಾಖೆ ಸಿಬ್ಬಂದಿ ಮಂಜುನಾಥ್ ಅವರ ತೋಟದ ಮನೆ ಬಳಿ ಬೋನ್ ಇಟ್ಟಿದ್ದರು. ಗುರುವಾರ ರಾತ್ರಿ ಮತ್ತೆ ಬೇಟೆಗೆಂದು ಬಂದಿದ್ದ ಚಿರತೆ ಬೋನಿಗೆ ಬಿದ್ದಿದೆ. ಬೋನಿಗೆ ಬಿದ್ದ ಚಿರತೆಯನ್ನು ಅರಣ್ಯ ಸಿಬ್ಬಂದಿ ಲಯನ್ ಸಫಾರಿಗೆ ಸ್ಥಳಾಂತರಿಸಿದ್ದಾರೆ.
Advertisements