ಮಡಿಕೇರಿ: ಚಿರತೆ ಮರಿಯನ್ನೇ ಹೋಲುವ ಅಪರೂಪದ ವನ್ಯಜೀವಿ ಪೆರ್ಪಣ ಅಥವಾ ಲಿಪರ್ಡ್ ಕ್ಯಾಟ್ ಅನ್ನು ಕಂಡು ಚಿರತೆ ಎಂದು ಭಾವಿಸಿ ಗ್ರಾಮಸ್ಥರು ಬೆಚ್ಚಿ ಬಿದ್ದ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಚೆರಿಯಪರಂಬು ಗ್ರಾಮದ ಪರವಂಡ ಶಂಶು ಮನೆಯ ಹಿತ್ತಲ ತೋಟದಲ್ಲಿ 2 ಲಿಪರ್ಡ್ ಕ್ಯಾಟ್ ಮರಿಗಳು ಪತ್ತೆಯಾಗಿವೆ. ಚಿರತೆ ಮರಿಯಂತೆಯೇ ಇರುವ ಲಿಪರ್ಡ್ ಕ್ಯಾಟ್ ಚಿರತೆಯೇ ಎಂದು ಭಾವಿಸಿದ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದರು. ಅಲ್ಲದೇ ಅವುಗಳ ವಿಡಿಯೋ ಮಾಡಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ನೀಡಿದ್ದರು.
Advertisement
ವಿಡಿಯೋ ಪರಿಶೀಲಿಸಿದ ಅರಣ್ಯ ಇಲಾಖೆ ಅವು ಲಿಪರ್ಡ್ ಕ್ಯಾಟ್ ಗಳು ಎಂದು ದೃಢಪಡಿಸಿದ್ದರು. ಬಳಿಕ ಗ್ರಾಮಸ್ಥರು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಇಂದು ಕೂಡ ಲಿಪರ್ಡ್ ಕ್ಯಾಟ್ ಕಂಡುಬಂದ ಹಿನ್ನೆಲೆಯಲ್ಲಿ ಗ್ರಾಮಸ್ಥರೆಲ್ಲಾ ಸೇರಿ ಆ 2 ಲಿಪರ್ಡ್ ಕ್ಯಾಟ್ ಗಳನ್ನು ಸೆರೆ ಹಿಡಿದು ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದಾರೆ. ಸದ್ಯ ಅರಣ್ಯ ಇಲಾಖೆ ಅವುಗಳನ್ನು ಸಮೀಪದ ರಕ್ಷಿತಾರಣ್ಯಕ್ಕೆ ಬಿಟ್ಟಿದೆ.
Advertisement