ರಾಯಚೂರಿನಲ್ಲೊಂದು ‘ರುದ್ರಪ್ರಯಾಗ’ದ ಥ್ರಿಲ್ಲರ್ ಸ್ಟೋರಿ – ಒಂದೂವರೆ ತಿಂಗಳ ಬಳಿಕ ಚಿರತೆ ಸೆರೆ, ನಿಟ್ಟುಸಿರು ಬಿಟ್ಟ ಜನ

Public TV
2 Min Read
Raichur Leopard

ರಾಯಚೂರು: ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಅನುವಾದ ಕೃತಿ `ರುದ್ರಪ್ರಯಾಗದ ಭಯಾನಕ ನರಭಕ್ಷಕ’ದಲ್ಲಿ ಬರುವಂತೆ ರಾಯಚೂರಿನಲ್ಲೊಂದು (Raichur) ಚಿರತೆ ಕಳೆದ ಒಂದೂವರೆ ತಿಂಗಳಿನಿಂದಲೂ ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಟಿಸಿತ್ತು. ತೇಜಸ್ವಿ ಅವರ ಕೃತಿಯಲ್ಲಿ ಬರುವ ಆ ಚಿರತೆ ಹತ್ತಾರು ಜನರನ್ನು ಕೊಂದಿತ್ತು. ಇದರಿಂದ ಇಡೀ ರುದ್ರಪ್ರಯಾಗದ ಜನ ಸಂಜೆ 6 ಗಂಟೆಯ ನಂತರ ಹೊರಗೆ ಕಾಲಿಡುವುದಕ್ಕೂ ಹೆದರುತ್ತಿದ್ದರು. ಇದೇ ಪರಿಸ್ಥಿತಿ ರಾಯಚೂರು ತಾಲೂಕಿನ ಡಿ.ರಾಂಪೂರ ಇತ್ತು. ಸದ್ಯ ಒಂದೂವರೆ ತಿಂಗಳ ಬಳಿಕ ಚಿರತೆ (Leopard) ಸೆರೆ ಸಿಕ್ಕಿದ್ದು, ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.

ಹೌದು. ಕಳೆದ ಒಂದೂವರೆ ತಿಂಗಳಿಂದ ರಾಯಚೂರು ತಾಲೂಕಿನ ಡಿ.ರಾಂಪೂರದ ಪರಮೇಶ್ವರ ಬೆಟ್ಟದಲ್ಲಿ ಸೇರಿಕೊಂಡಿದ್ದ ಚಿರತೆ ಕೊನೆಗೂ ಬೋನಿಗೆ ಬಿದ್ದಿದೆ. ಮನೆಯಿಂದ ಹೊರಬರಲು ಸಹ ಜೀವ ಭಯದಲ್ಲಿದ್ದ ಗ್ರಾಮದ ಜನತೆ ಕೊನೆಗೂ ನಿಟ್ಟುಸಿರು ಬಿಟ್ಟಿದ್ದಾರೆ. ಇದನ್ನೂ ಓದಿ: ಪಾರ್ಟಿ, ಪಬ್‌ಗೆ ಹೋಗಿ ಸಮಯವಲ್ಲದ ಸಮಯಕ್ಕೆ ಮನೆಗೆ ಬರ್ತಿದ್ಳು: ಕಿರುತೆರೆ ನಟಿ ಶ್ರುತಿ ಪತಿಯ ಆರೋಪ

Raichur Leopard 3

ಸುಮಾರು 3 ವರ್ಷದ ಗಂಡು ಚಿರತೆಯನ್ನ ಅಧಿಕಾರಿಗಳು ನಾನಾ ತಂತ್ರ ಬಳಸಿ ಬೋನಿಗೆ ಬೀಳಿಸಿದ್ದಾರೆ. ಬೋನಿನ ಸುತ್ತ ಹೆಣ್ಣು ಚಿರತೆಯ ಮಲ, ಮೂತ್ರ ಸಿಂಪಡಿಸಿ ಗಂಡು ಚಿರತೆಯನ್ನ ಆಕರ್ಷಿಸಲು ಯತ್ನಿಸಿದ್ದಾರೆ. ಕೋಳಿ, ನಾಯಿಗಳನ್ನ ಬೋನಿನ ಬಳಿ ಬಿಟ್ಟು ಚಿರತೆಯನ್ನ ಕೊನೆಗೂ ಅಧಿಕಾರಿಗಳು ಹಿಡಿದಿದ್ದಾರೆ. ಚಿರತೆ ಸೆರೆಗೆ ಎರಡು ಬೋನುಗಳನ್ನ ಅಳವಡಿಸಲಾಗಿತ್ತು ಆದ್ರೆ ಒಂದುವರೆ ತಿಂಗಳಿಂದ ಸುಮಾರು ನವಿಲು, ನಾಯಿಗಳನ್ನ ಕೊಂದು ತಿನ್ನುತ್ತಿದ್ದ ಚಿರತೆ, ಇತ್ತೀಚೆಗಷ್ಟೇ ರೈತನೊರ್ವನ ಗುಡಿಸಲಿಗೆ ನುಗ್ಗಿ ಕುರಿಯೊಂದನ್ನ ಹೊತ್ತೊಯ್ದಿತ್ತು. ಇದನ್ನೂ ಓದಿ: ಕುಡಿದ ಅಮಲಿನಲ್ಲಿ ಫುಟ್‌ಪಾತ್‌ನಲ್ಲಿ ಮಲಗಿದ್ದವರ ಮೇಲೆ ಹರಿದ ಆಡಿ ಕಾರು – ಐವರಿಗೆ ಗಾಯ

Raichur Leopard 2

ಗ್ರಾಮದ ಬೆಟ್ಟದ ಪರಮೇಶ್ವರ ಅರಣ್ಯ ಪ್ರದೇಶದಲ್ಲಿ‌ ಸೇರಿ ಕೊಂಡಿದ್ದ ಚಿರತೆ ಬೆಟ್ಟದ ಕೆಳಗಿನ ಮನೆಗಳ ಹತ್ತಿರ ಓಡಾಡಿಕೊಂಡಿದ್ದರಿಂದ ಜೀವ ಭಯದಲ್ಲಿದ್ದ ಗ್ರಾಮಸ್ಥರು ಈಗ ನಿರಾಳರಾಗಿದ್ದಾರೆ. ಬೋನಿಗೆ ಬಿದ್ದ ಚಿರತೆ ಬೋನಿನಿಂದ ಹೊರಬರಲು ಯತ್ನಿಸಿ ಮುಖಕ್ಕೆ ಗಾಯಮಾಡಿಕೊಂಡಿದೆ. ಇದನ್ನೂ ಓದಿ: ಲೈಂಗಿಕ ಬಯಕೆ ತೀರಿಸುವಂತೆ ಕಾಲೇಜು HODಯಿಂದ ಕಿರುಕುಳ – ಬೆಂಕಿ ಹಚ್ಚಿಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ

Share This Article