ಚಿಕ್ಕಮಗಳೂರು: ಮನೆ ಮುಂದೆ ನಿಂತಿದ್ದ ಬಾಲಕನ ಮೇಲೆ ಚಿರತೆ (Leopard) ದಾಳಿ ನಡೆಸಿದ ಘಟನೆ ತರೀಕೆರೆ (Tarikere) ತಾಲೂಕಿನ ಬೈರಾಪುರ ಗ್ರಾಮದಲ್ಲಿ ನಡೆದಿದೆ.
ಹೃದಯ್ (11) ಚಿರತೆ ದಾಳಿಯಿಂದ ಗಾಯಗೊಂಡ ಬಾಲಕ. ಮನೆಯ ಬಳಿ ನಿಂತಿದ್ದ ವೇಳೆ ಬಾಲಕನ ಮೇಲೆ ಚಿರತೆ ದಾಳಿ ನಡೆಸಿದೆ. ಗಂಭೀರ ಗಾಯಗೊಂಡ ಬಾಲಕನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ. ಇದನ್ನೂ ಓದಿ: ಬಾಲಕಿಯನ್ನು ಪೋಷಕರ ಎದುರೇ ಹೊತ್ತೊಯ್ದ ಚಿರತೆ – ಕಾಡಂಚಲ್ಲಿ ಶವ ಪತ್ತೆ
ಲಿಂಗದಹಳ್ಳಿ ಅರಣ್ಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ವಾರದ ಹಿಂದಷ್ಟೆ 5 ವರ್ಷದ ಬಾಲಕಿ ಚಿರತೆ ದಾಳಿಗೆ ಬಲಿಯಾಗಿದ್ದಳು. ಆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಕಡೆ ಚಿರತೆ ದಾಳಿ ಪ್ರಕರಣ ನಡೆದಿದೆ.
ಅರಣ್ಯ ಇಲಾಖೆ (Forest Department ) ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದು, ಚಿರತೆಯನ್ನು ಸೆರೆಹಿಡಿಯುವಂತೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಚಿಕ್ಕಮಗಳೂರು | ಜೀಪ್ ಅಟ್ಟಾಡಿಸಿದ ಕಾಡಾನೆ – ಸಫಾರಿಗೆ ತೆರಳಿದ್ದವರು ಜಸ್ಟ್ ಮಿಸ್!

