ಕಾರವಾರ: ಮನೆ ಬಾಗಿಲಲ್ಲಿ ಮಲಗಿದ್ದ ನಾಯಿಯನ್ನ (Dog) ಚಿರತೆ ಹೊತ್ತೊಯ್ದ ಘಟನೆ ಸಿದ್ದಾಪುರದ (Siddapur) ಅರಸಿನಗೂಡು ಎಂಬಲ್ಲಿ ನಡೆದಿದೆ. ನಾಯಿಯನ್ನು ಹೊತ್ತೊಯ್ಯುವ ಭಯಾನಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಜನರಲ್ಲಿ ಆತಂಕ ಮೂಡಿಸಿದೆ.
ಗ್ರಾಮದ ಪ್ರಕಾಶ ಹೆಗಡೆ ಎಂಬವರು ಸಾಕಿದ್ದ ನಾಯಿಯನ್ನು ಚಿರತೆ (Leopard) ಹೊತ್ತೊಯ್ದಿದೆ. ಒಂದು ವಾರದಿಂದ ಚಿರತೆ ಅರಸಿನಗೂಡ ಗ್ರಾಮದ ಸುತ್ತಮುತ್ತ ಓಡಾಡುತ್ತಿದೆ. ಇದನ್ನೂ ಓದಿ: ಅಂಧ ಜೋಡಿಗೆ ಬೆಳಕಾದ 400 ಆಟೋ ಚಾಲಕರು
ಉತ್ತರ ಕನ್ನಡದ (Uttara Kannada) ಹೊನ್ನಾವರದ (Honnavar) ಗ್ರಾಮಗಳಲ್ಲಿ ವಾರದ ಹಿಂದೆ ಚಿರತೆ ದಾಳಿ ನಡೆಸಿ ಆರು ದನಕರುಗಳನ್ನು ತಿಂದು ಹಾಕಿತ್ತು. ಈ ಹಿಂದೆ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ (Forest Department) ಬೋನ್ ಇರಿಸಿ ಒಂದು ತಿಂಗಳು ಕಾರ್ಯಾಚರಣೆ ನಡೆಸಿತ್ತು. ಆದರೆ ಚಿರತೆ ಬೋನ್‍ಗೆ ಸಿಗದ ಕಾರಣ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಮತ್ತೆ ಚಿರತೆಯ ಉಪಟಳ ಗ್ರಾಮೀಣ ಭಾಗಗಳಲ್ಲಿ ಹೆಚ್ಚುತ್ತಿದ್ದು ಗ್ರಾಮಸ್ಥರು ಚಿರತೆಯನ್ನು ಸೆರೆಹಿಡಿಯುವಂತೆ ಅರಣ್ಯ ಇಲಾಖೆಯನ್ನು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಭದ್ರತಾ ಪಡೆಯಿಂದ ಉಗ್ರರ ಮೇಲೆ ಗುಂಡಿನ ದಾಳಿ