ಮೈಸೂರು: ಟಿ ನರಸೀಪುರ (T Narasipura) ತಾಲೂಕಿನಲ್ಲಿ ಚಿರತೆ (Leopard) ದಾಳಿಗೆ ಎರಡನೇ ಬಲಿಯಾದ ಬೆನ್ನಲ್ಲೇ ಚಿರತೆಗೆ ಕಂಡಲ್ಲಿ ಗುಂಡು ಹಾರಿಸಲು ಅರಣ್ಯ ಇಲಾಖೆಯ ಸೂಚನೆ ನೀಡಿದೆ.
Advertisement
ಮೈಸೂರಿನಲ್ಲಿ ಕಳೆದ ಕೆಲ ತಿಂಗಳಿಂದ ಸಾರ್ವಜನಿಕರ ನಿದ್ದೆಗೆಡಿಸಿದ್ದ ಚಿರತೆ ಇದೀಗ ಎರಡನೇ ಬಲಿ ಪಡೆದಿದೆ. ನಿನ್ನೆ ಸಂಜೆ ಟಿ.ನರಸೀಪುರ ತಾಲೂಕಿನಲ್ಲಿ ಕಾಲೇಜು ಯುವತಿ ಮೇಲೆ ಚಿರತೆ ದಾಳಿ ನಡೆಸಿ ಗಂಭೀರ ಗಾಯಗೊಳಿಸಿತು. ಬಳಿಕ ಚಿಕಿತ್ಸೆ ಪಡೆಯುತ್ತಿದ್ದ ಯುವತಿ ಮೃತಪಟ್ಟಿದ್ದಾಳೆ. ಈ ಹಿಂದೆ ಕಳೆದ ತಿಂಗಳು ಯುವಕನೋರ್ವನನ್ನು ಚಿರತೆ ದಾಳಿ ನಡೆಸಿ ಕೊಂದು ಹಾಕಿತ್ತು. ಹಾಗಾಗಿ ಸಾರ್ವಜನಿಕರಿಂದ ತೀವ್ರ ಆಕ್ಷೇಪ ಕೇಳಿ ಬಂದ ಹಿನ್ನೆಲೆ ಅರಣ್ಯ ಇಲಾಖೆ ಚಿರತೆಗೆ ಕಂಡಲ್ಲಿ ಗುಂಡು ಹಾರಿಸಲು ಸೂಚಿಸಿದೆ. ಇದನ್ನೂ ಓದಿ: ಪಾರಿವಾಳ ಹಿಡಿಯಲು ಹೋಗಿ ಮಕ್ಕಳಿಬ್ಬರಿಗೆ ಕರೆಂಟ್ ಶಾಕ್ – ಸ್ಥಿತಿ ಚಿಂತಾಜನಕ
Advertisement
Advertisement
ಚಿರತೆ ಕಂಡು ಬಂದಲ್ಲಿ ಗುಂಡು ಹಾರಿಸಲು ಡಿಸಿಎಫ್ ಕಮಲ ಕರಿಕಾಲನ್ ಸೂಚನೆ ಹೊರಡಿಸಿದ್ದಾರೆ. ಜೊತೆಗೆ ಚಿರತೆ ದಾಳಿಯಿಂದ ಮೃತಪಟ್ಟ ಯುವತಿಯ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ, ಕುಟುಂಬಕ್ಕೆ 5 ವರ್ಷಗಳ ಕಾಲ 2 ಸಾವಿರ ರೂ. ಮಾಸಾಶನ. ಕುಟುಂಬದ ಒಬ್ಬ ಸದಸ್ಯರಿಗೆ ಹೊರ ಗುತ್ತಿಗೆ ಆಧಾರದಡಿ ಕೆಲಸ ನೀಡಲು ಅರಣ್ಯ ಇಲಾಖೆ ಮುಂದಾಗಿದೆ. ಅಲ್ಲದೇ ಟಿ. ನರಸೀಪುರ ಎಫ್‍ಆರ್‌ಓಗೆ ಕಡ್ಡಾಯ ರಜೆ ನೀಡಿ ಈ ಬಗ್ಗೆ ತನಿಖೆ ನಡೆಸಲು ಆದೇಶ ಹೊರಡಿಸಿದ್ದು, ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಇದನ್ನೂ ಓದಿ: ಕತ್ತು ಕೊಯ್ದು ವೃದ್ಧ ದಂಪತಿಯ ಬರ್ಬರ ಹತ್ಯೆ