ಕೀವ್: ʻಟೈಟಾನಿಕ್ʼ ಸಿನಿಮಾ ಖ್ಯಾತಿಯ ಹೀರೋ, ಹಾಲಿವುಡ್ ನಟ ಲಿಯೊನಾರ್ಡೊ ಡಿಕ್ಯಾಪ್ರಿಯೊ ತನ್ನ ಅಜ್ಜಿ ತವರು ಉಕ್ರೇನ್‌ಗೆ 77.07 ಕೋಟಿ (10 ಮಿಲಿಯನ್ ಡಾಲರ್) ನೆರವು ನೀಡಿದ್ದಾರೆ.
ಲಿಯೊನಾರ್ಡೊ ಅಜ್ಜಿ ಹೆಲೆನ್ ಇಂಡೆನ್‌ಬಿರ್ಕೆನ್ ಅವರು ಉಕ್ರೇನ್ ಮೂಲದವರು. ಉಕ್ರೇನ್‌ನ ಒಡೆಸ್ಸಾದಲ್ಲಿ ಜನಿಸಿದ್ದ ಅವರು 1917ರಲ್ಲಿ ತನ್ನ ಪೋಷಕರೊಂದಿಗೆ ಜರ್ಮನಿಗೆ ವಲಸೆ ಹೋಗಿದ್ದರು. ಇದನ್ನೂ ಓದಿ: ನಿರ್ಬಂಧಕ್ಕೆ ಒಳಪಟ್ಟ ದೇಶಗಳ್ಯಾವುವು? ಕಾರಣ ಏನು? ಪಟ್ಟಿಯಲ್ಲಿ ರಷ್ಯಾ ನಂ.1
Advertisement
Advertisement
ಹೆಲೆನ್ 1943ರಲ್ಲಿ ಜರ್ಮನಿಯಲ್ಲಿ ಲಿಯೊನಾರ್ಡೊ ತಾಯಿ ಇರ್ಮೆಲಿನ್‌ಗೆ ಜನ್ಮ ನೀಡಿದರು. ಇರ್ಮೆಲಿನ್ ಅವರು ಲಿಯೊನಾರ್ಡೊ ತಂದೆ ಜಾರ್ಜ್ ಡಿಕ್ಯಾಪ್ರಿಯೊ ಅವರಿಂದ ವಿಚ್ಛೇದನ ಪಡೆದರು. ನಂತರ ಲಿಯೊನಾರ್ಡೊ ತನ್ನ ಅಜ್ಜಿ ಹೆಲೆನ್ ಅವರೊಟ್ಟಿಗೆ ಬೆಳೆದರು. ಲಿಯೊನಾರ್ಡೊ ಅವರ ನಟನಾ ಪ್ರತಿಭೆಯನ್ನು ಅಜ್ಜಿ ಪೋಷಿಸಿದರಲ್ಲದೇ, ಅವರ ನಟನಾ ವೃತ್ತಿಯನ್ನು ಬೆಂಬಲಿಸಿದರು. 2008ರಲ್ಲಿ ತಮ್ಮ 93ನೇ ವಯಸ್ಸಿನಲ್ಲಿ ಹೆಲೆನ್ ಅವರು ನಿಧನರಾದರು.
Advertisement
ಲಿಯೊನಾರ್ಡೊ ಅವರ ತವರು ಉಕ್ರೇನ್‌ಗೆ ಇಂಟರ್‌ನ್ಯಾಷನಲ್ ವಿಸೆಗ್ರಾಡ್ ಫಂಡ್ ಮೂಲಕ ಘೋಷಿಸಲಾಗಿದೆ. ಪೂರ್ವ ಯೂರೋಪ್ ಅಭಿವೃದ್ಧಿಯನ್ನು ಉತ್ತೇಜಿಸುವ ಅಂತಾರಾಷ್ಟ್ರೀಯ ಉಪಕ್ರಮಗಳಿಗೆ ಹಣಕಾಸಿನ ನೆರವು ನೀಡುವ ಗುರಿಯನ್ನು ವಿಸೆಗ್ರಾಡ್ ಗ್ರೂಪ್ ಯೋಜನೆ ಹೊಂದಿದೆ. ಇದನ್ನೂ ಓದಿ: ನಾನು ಅಡಗಿಕೊಂಡಿಲ್ಲ, ಯಾರಿಗೂ ಹೆದರುವುದಿಲ್ಲ, ನಮ್ಮ ದೇಶಭಕ್ತಿ ಗೆಲ್ಲುತ್ತೆ: ಝೆಲೆನ್ಸ್ಕಿ
Advertisement
ಲಿಯೊನಾರ್ಡೊ ಬೆನ್ನಲ್ಲೇ ಅನೇಕ ನಟ-ನಟಿಯರು, ನಿರ್ದೇಶಕರು ಸಹ ಉಕ್ರೇನ್‌ಗೆ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದ್ದಾರೆ. ರಿಯಾನ್ ರೆನಾಲ್ಡ್ಸ್ ಮತ್ತು ಬ್ಲೇಕ್ ಲೈವ್ಲಿ ಅವರು ಹಣಕಾಸಿನ ನೆರವು ನೀಡುವುದಾಗಿ ತಿಳಿಸಿದ್ದಾರೆ. ಮಿಲಾ ಕುನಿಸ್ ಮತ್ತು ಆಷ್ಟನ್ ಕಚ್ಚರ್ ಅವರು ಉಕ್ರೇನ್‌ನಲ್ಲಿ ಮಾನವೀಯ ಚಟುವಟಿಕೆಗಳು ಹಾಗೂ ಉಕ್ರೇನಿಯನ್ ನಿರಾಶ್ರಿತರ ಪುನರ್ವಸತಿಗಾಗಿ 23.09 ಕೋಟಿ (3 ಮಿಲಿಯನ್ ಡಾಲರ್) ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ.