ಲಕ್ನೋ: ದಿನೇ ದಿನೇ ನಿಂಬೆ ಹಣ್ಣಿನ ಬೆಲೆ ಗಗನಕ್ಕೇರುತ್ತಿದೆ. ಗಾಜಿಯಾಬಾದ್‍ನ ಸಗಟು ತರಕಾರಿ ಮಾರುಕಟ್ಟೆಯಲ್ಲಿ ಕಳೆದ ಒಂದು ವಾರದಲ್ಲಿ ಕೆಜಿಗೆ ನಿಂಬೆ ಹಣ್ಣಿನ ಬೆಲೆ 350ರೂ.ಗೆ ಏರಿಕೆಯಾಗಿದೆ. ಇದರಿಂದಾಗಿ ವ್ಯಾಪಾರಿಗಳು ಕೂಡ ಆಶ್ಚರ್ಯಗೊಂಡಿದ್ದಾರೆ.
Advertisement
ಹೈದರಾಬಾದ್‍ನಲ್ಲಿ ಒಂದು ಕೆಜಿ ನಿಂಬೆ ಹಣ್ಣು 10 ರೂಪಾಯಿಗೆ ಮಾರಾಟವಾಗುತ್ತಿದೆ. ಆದರೆ ಗುಜರಾತ್‍ನಲ್ಲಿ ಒಂದು ಕೆಜಿ ನಿಂಬೆ ಹಣ್ಣು 200 ರೂಪಾಯಿಗೆ ಮಾರಾಟವಾಗುತ್ತಿದೆ. ಈ ವಿಚಾರವಾಗಿ ಪ್ರತಿಕ್ರಿಯಿಸಿದ ವ್ಯಾಪಾರಿಯೊಬ್ಬರು, ಬೆಲೆಗಳು ಏರಿಕೆಯಾಗುತ್ತಿದೆ. ನಾವು ಮೊದಲು 700ರೂ.ಗೆ ಒಂದು ಗೋಣಿ ಚೀಲ ತುಂಬಾ ನಿಂಬೆಹಣ್ಣನ್ನು ಖರೀಸುತ್ತಿದ್ದೇವು. ಆದರೀಗ 3,500ರೂ. ಆಗಿದೆ. ನಾವು ಒಂದು ನಿಂಬೆ ಹಣ್ಣನ್ನು 10ರೂ.ಗೆ ಮಾರಾಟ ಮಾಡುತ್ತಿದ್ದೇವೆ. ಆದರೂ ನಿಂಬೆ ಹಣ್ಣನ್ನು ಖರೀದಿಸಲು ಯಾರು ಸಿದ್ಧರಿಲ್ಲ ಮತ್ತು ಅದನ್ನು ಒಪ್ಪಿಕೊಳ್ಳಲು ಕೂಡ ಯಾರು ತಯಾರಿಲ್ಲ. ಇದರಿಂದಾಗಿ ನಿಂಬೆಹಣ್ಣು ಕೊಳೆತು ಹಾಳಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಮುಖಾಮುಖಿ ಭೇಟಿಯಾದ ನಂತರವಷ್ಟೇ ಈಶ್ವರಪ್ಪ ರಾಜೀನಾಮೆ ನಿರ್ಧಾರ: ಬೊಮ್ಮಾಯಿ
Advertisement
Advertisement
ಮತ್ತೋರ್ವ ವ್ಯಾಪಾರಿ ನನ್ನ 30 ವರ್ಷಗಳ ವೃತ್ತಿ ಜೀವನದಲ್ಲಿ ನಿಂಬೆಹಣ್ಣಿನ ಬೆಲೆ ಗರಿಷ್ಠವೆಂದರೆ 150ರೂ.ಗೆ ಮಾರಾಟವಾಗಿದ್ದರೂ, 300ರೂ. ಅಷ್ಟು ಆಗಿರಲಿಲ್ಲ. ಆದರೆ ಡೀಸೆಲ್ ಬೆಲೆ ಏರಿಯಿಂದ ಟ್ರಕ್ ಸಾಗಾಟನೆ ವೆಚ್ಚ 24,000ರೂ. ಆಗಿದೆ. ಹದಿನೈದು ದಿನಗಳ ಹಿಂದೆಯಷ್ಟೇ ನಿಂಬೆಹಣ್ಣು ಕೆ.ಜಿ.ಗೆ 50 ರಿಂದ 100ರೂ.ಗೆ ಮಾರಾಟವಾಗುತ್ತಿತ್ತು ಎಂದು ತಿಳಿಸಿದ್ದಾರೆ. ನಿಂಬೆ ಹಣ್ಣಿನ ಜೊತೆಗೆ ಹಸಿ ಮೆಣಸಿನಕಾಯಿ, ಹಾಗಲಕಾಯಿ ಸೇರಿದಂತೆ ಇತರೆ ತರಕಾರಿಗಳ ಬೆಲೆ ಎರಡು ವಾರಗಳಲ್ಲಿ ದುಪ್ಪಟ್ಟಾಗಿದೆ. ಇದನ್ನೂ ಓದಿ: ಜಲಿಯನ್ ವಾಲಾಬಾಗ್ ಹತ್ಯಾಕಾಂಡದಲ್ಲಿ ಹುತಾತ್ಮರಾದವರ ತ್ಯಾಗ ಮುಂದಿನ ಪೀಳಿಗೆಗೆ ಪ್ರೇರಣೆ: ಮೋದಿ
Advertisement