ಗಾಂಧೀನಗರ: ಗುಜರಾತ್‍ನ ರಾಜ್‍ಕೋಟ್‍ನಲ್ಲಿ ನಿಂಬೆ ಹಣ್ಣಿಗೆ ಬೇಡಿಕೆ ಹೆಚ್ಚಾಗಿದ್ದು, ನಿಂಬೆಹಣ್ಣಿನ ಬೆಲೆ ಕೂಡ ಏರಿಕೆಯಾಗಿದೆ. ಪ್ರತಿ ಕೆಜಿಗೆ 50-60ರೂ. ಇದ್ದ ನಿಂಬೆಹಣ್ಣು ಇದೀಗ 200 ರೂ.ಗೆ ಮಾರಾಟವಾಗುತ್ತಿದೆ.
ಈ ಕುರಿತಂತೆ ಪ್ರತಿಕ್ರಿಯಿಸಿದ ಗ್ರಾಹಕರೊಬ್ಬರು, ನಿಂಬೆ ಹಣ್ಣಿನ ಬೆಲೆ ಕೆಜಿಗೆ 200 ತಲುಪುತ್ತಿದೆ. ಮೊದಲು ನಿಂಬೆ ಹಣ್ಣಿನ ಬೆಲೆ ಕೆಜಿಗೆ 50-60 ರೂ. ಇತ್ತು. ನಾವು ಎಲ್ಲವನ್ನೂ ಬಜೆಟ್‍ಗೆ ಹೊಂದಿಸಬೇಕು. ಆದರೆ ಈ ಬೆಲೆ ಏರಿಕೆ ನಮ್ಮ ಮೇಲೆ ಪರಿಣಾಮ ಬೀರುತ್ತಿದೆ. ಬೆಲೆಗಳು ಯಾವಾಗ ಕಡಿಮೆಯಾಗುತ್ತವೆ ಯಾವಾಗ ಹೆಚ್ಚಗುತ್ತದೆ ಎಂಬುವುದೇ ನಮಗೆ ತಿಳಿಯುತ್ತಿಲ್ಲ ಎಂದಿದ್ದಾರೆ.
ಬೇಸಿಗೆ ಸಂದರ್ಭದಲ್ಲಿ ಉಷ್ಣತೆ ಹೆಚ್ಚಾಗುವುದರಿಂದ ಜನರು ತಮ್ಮ ಆಹಾರದಲ್ಲಿ ನಿಂಬೆ ಹಣ್ಣನ ರಸವನ್ನು ಬಳಸಲು ಬಯಸುತ್ತಾರೆ. ಏಕೆಂದರೆ ಅವುಗಳಲ್ಲಿ ವಿಟಮಿನ್ ಸಿ ಇರುವುದರಿಂದ ಜೀರ್ಣಕ್ರಿಯೆ ಸುಲಭವಾಗಿ ಆಗುತ್ತದೆ. ಹೀಗಾಗಿ ಜನ ನಿಂಬೆಹಣ್ಣನ್ನು ಹೆಚ್ಚಾಗಿ ಬಳಸುತ್ತಿರುವುದರಿಂದ ನಿಂಬೆಹಣ್ಣಿನ ಬೆಲೆ ಗಗನಕ್ಕೇರಿದೆ.
ಬಹುತೇಕ ತರಕಾರಿಗಳ ಬೆಲೆ ಹೆಚ್ಚಾಗಿದ್ದು, ಮಧ್ಯಮ ವರ್ಗದ ಜನರು ಬೆಲೆಬಾಳುವ ತರಕಾರಿಗಳನ್ನು ಖರೀದಿಸಲು ಕಷ್ಟ ಆಗುತ್ತಿದೆ. ಇದೀಗ ಮೊದಲು ನಾವು ಖರೀದಿಸುತ್ತಿದಷ್ಟು ನಿಂಬೆಹಣ್ಣುಗಳನ್ನು ಹೆಚ್ಚಾಗಿ ಖರೀದಿಸಲು ಸಾಧ್ಯವಾಗುತ್ತಿಲ್ಲ. ಕಳೆದ ವರ್ಷ ಮಾರ್ಚ್‍ನಲ್ಲಿ ಬೆಲೆಗಿಂತ ಈ ಬಾರಿ ನಿಂಬೆ ಹಣ್ಣಿನ ಬೆಲೆ ದ್ವಿಗುಣವಾಗಿದೆ. ಏಪ್ರಿಲ್-ಮೇನಲ್ಲಿ ಏನಾಗುತ್ತೋ ಗೊತ್ತಿಲ್ಲ ಎಂದು ಮತ್ತೊಬ್ಬ ಗ್ರಾಹಕರು ಬೇಸರ ವ್ಯಕ್ತಪಡಿಸಿದ್ದಾರೆ.