ನವದೆಹಲಿ: ತೈಲ ಸ್ವಾವಲಂಬಿ ದೇಶಗಳು ರಷ್ಯಾದೊಂದಿಗಿನ ಇಂಧನ ವ್ಯವಹಾರಗಳನ್ನು ಟೀಕಿಸುವ ಅಗತ್ಯವಿಲ್ಲ, ನಮ್ಮ ಕಾನೂನು ಬದ್ಧ ಇಂಧನ ವಹಿವಾಟುಗಳನ್ನು ರಾಜಕೀಯಗೊಳಿಸಬಾರದು ಎಂದು ಭಾರತ ತಿರುಗೇಟು ನೀಡಿದೆ.
ದೇಶದ ಅತಿದೊಡ್ಡ ತೈಲ ಸಂಸ್ಥೆ ಇಂಡಿಯನ್ ಆಯಿಲ್ ಕಾರ್ಪೊರೇಶನ್ ಚಾಲ್ತಿಯಲ್ಲಿರುವ ಅಂತರಾಷ್ಟ್ರೀಯ ಮಾರುಕಟ್ಟೆಯ ಬೆಲೆಯಲ್ಲಿ ರಷ್ಯಾದಿಂದ ಮೂರು ಮಿಲಿಯನ್ ಬ್ಯಾರಲ್ ಕಚ್ಚಾತೈಲ ಖರೀದಿಸಿದ ಬೆನ್ನಲ್ಲೆ ಭಾರತ ಸರ್ಕಾರ ಇಂತದೊಂದು ತೀಕ್ಷ್ಣ ಹೇಳಿಕೆ ಬಿಡುಗಡೆ ಮಾಡಿದೆ. ಇದನ್ನೂ ಓದಿ: ಮಂಗಳೂರಿಗೆ ಬರಲಿದೆ ರಷ್ಯಾದ ಅಗ್ಗದ ಕಚ್ಚಾ ತೈಲ
Advertisement
Advertisement
ರಷ್ಯಾ ಈ ನಡುವೆ ಭಾರತಕ್ಕೆ ಇಂಧನ ರಫ್ತು ಹೆಚ್ಚಿಸಿದೆ. ಭಾರತ ಪ್ರತಿದಿನ 3,60,000 ಬ್ಯಾರಲ್ ಕಚ್ಚಾತೈಲ ಆಮದು ಮಾಡಿಕೊಳ್ಳುತ್ತಿದೆ. ಇದು 2021ರ ಸರಾಸರಿಗೆ ಹೋಲಿಸಿದ್ರೆ ನಾಲ್ಕು ಪಟ್ಟು ಹೆಚ್ಚು ಎನ್ನಲಾಗಿದೆ. ಇದನ್ನೂ ಓದಿ: ಅಗ್ಗದ ದರದಲ್ಲಿ ರಷ್ಯಾದ ಕಚ್ಚಾ ತೈಲ ಖರೀದಿಗೆ ಮುಂದಾದ ಭಾರತ- ಅಮೆರಿಕ ಹೇಳಿದ್ದೇನು?
Advertisement
ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಘೋಷಣೆ ಹಿನ್ನೆಲೆ ರಷ್ಯಾ ವಿರುದ್ಧ ಯುರೋಪಿಯನ್ ದೇಶಗಳು ಆರ್ಥಿಕ ನಿರ್ಬಂಧ ಹೇರಿವೆ. ಯಾವುದೇ ದೇಶಗಳು ರಷ್ಯಾ ಜೊತೆಗೆ ಆರ್ಥಿಕ ಸಂಬಂಧ ಹೊಂದದಂತೆ ಒತ್ತಡ ಹೇರುವ ಪ್ರಯತ್ನವೂ ಮಾಡುತ್ತಿವೆ. ಈ ಒತ್ತಡದ ನಡುವೆ ಭಾರತ ಶೇಕಡಾ 20-25% ರಿಯಾಯಿತಿ ಯಲ್ಲಿ ಕಚ್ಚಾತೈಲ ಖರೀದಿಸಿರುವುದು ಟೀಕೆಗೆ ಕಾರಣವಾಗಿತ್ತು.
Advertisement
ಈ ಟೀಕೆಗೆ ಉತ್ತರ ನೀಡಿರುವ ಭಾರತ, ಅಮೆರಿಕ ಸೇರಿದಂತೆ ಹಲವು ದೇಶಗಳಿಗೆ ತಿರುಗೇಟು ನೀಡಿದೆ. ಭಾರತ ಕಚ್ಚಾತೈಲ ಆಮದಿನ ಮೇಲೆ 85% ರಷ್ಟು ಅವಲಂಬನೆಯಾಗಿದೆ. ಪ್ರತಿದಿನ 5 ಮಿಲಿಯನ್ ಬ್ಯಾರಲ್ ಆಮದು ಮಾಡಿಕೊಳ್ಳುವ ಅಗತ್ಯವಿದೆ. ಹೀಗಾಗಿ ನಾವು ವಹಿವಾಟು ನಡೆಸುತ್ತಿದ್ದೇವೆ ಎಂದು ಹೇಳಿದೆ. ಇದನ್ನೂ ಓದಿ: ರಷ್ಯಾದ ಆಕ್ರಮಣ ಪ್ರತಿಭಟಿಸಲು ಕಚ್ಚಾ ತೈಲ, ಅನಿಲ ಖರೀದಿಯನ್ನು ನಿಲ್ಲಿಸಬೇಕು: ಇಂಗ್ಲೆಂಡ್ ಪ್ರಧಾನಿ
ಸದ್ಯ ಭಾರತ ಹೆಚ್ಚಿನ ಆಮದುಗಳು ಪಶ್ಚಿಮ ಏಷ್ಯಾದ ಇರಾಕ್ 23%, ಸೌದಿ ಅರೇಬಿಯಾ 18%, ಯುಎಇ 11% ಆಮದಾಗುತ್ತಿದೆ. ಅಮೆರಿಕ ಈಗ ಭಾರತಕ್ಕೆ 7.3% ಪ್ರಮುಖ ಕಚ್ಚಾ ತೈಲ ರಫ್ತು ಮಾಡುತ್ತಿದೆ. ಪ್ರಸ್ತುತ ವರ್ಷದಲ್ಲಿ ಅಮೇರಿಕಾದಿಂದ ರಫ್ತು ಗಣನೀಯವಾಗಿ ಹೆಚ್ಚಾಗುವ ನಿರೀಕ್ಷೆಯಿದೆ, ಬಹುಶಃ ಸುಮಾರು 11% ರಷ್ಟು ಏರಬಹುದು.