ಬೆಂಗಳೂರು: ವಿಧಾನ ಪರಿಷತ್ (Legislative Council) ಕಲಾಪ ಇಂದು ಕೂಡಾ ಆಡಳಿತ-ವಿಪಕ್ಷಗಳ ಪ್ರತಿಷ್ಠೆಗೆ ಬಲಿಯಾಗಿದೆ. ಬಿಜೆಪಿ (BJP) ಸದಸ್ಯ ಸಿಟಿ ರವಿ (CT Ravi) ವಿಷಾದ ವ್ಯಕ್ತಪಡಿಸಬೇಕು ಎಂಬ ವಿಚಾರ ಇಂದು ಕಲಾಪದಲ್ಲಿ ಸದ್ದು ಮಾಡಿತು. ಆಡಳಿತ-ವಿಪಕ್ಷಗಳ ನಡುವೆ ಗಲಾಟೆ ಆಗಿ ಕಲಾಪ ಮುಂದೂಡುವ ಪರಿಸ್ಥಿತಿ ಬಂತು.
ಇಂದು ಬೆಳಗ್ಗೆ ಕಲಾಪ ಪ್ರಾರಂಭ ಆದ ಕೂಡಲೇ ಶೂನ್ಯ ವೇಳೆ ಕಲಾಪಗಳು ನಡೆದವು. ಶೂನ್ಯ ವೇಳೆ ಮುಗಿದ ಕೂಡಲೇ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹಮದ್ ಮಾತಾಡಿ, ನಿನ್ನೆ ನಮ್ಮ ಸದಸ್ಯರು ಪ್ರಧಾನಿ ಮೋದಿ ಅವರ ಬಗ್ಗೆ ಮಾತಾಡಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ. ಅದರಂತೆ ಸಿಟಿ ರವಿ ಪಾಕಿಸ್ತಾನದ ನಾಲಿಗೆ ಅಂದಿದ್ದಕ್ಕೆ ವಿಷಾದ ವ್ಯಕ್ತಪಡಿಸಬೇಕು ಅಂತ ಆಗ್ರಹಿಸಿದರು. ಸಭಾಪತಿಗಳ ಪೀಠ ಮನವಿ ಮಾಡಿದ್ರು ವಿಷಾದ ವ್ಯಕ್ತಪಡಿಸಿಲ್ಲ ಅಂತ ಕಿಡಿಕಾರಿದರು. ಸಲೀಂ ಅಹಮದ್ ಮಾತಿಗೆ ಸಚಿವ ಹೆಚ್.ಕೆ.ಪಾಟೀಲ್ ಸೇರಿ ಕಾಂಗ್ರೆಸ್ ಸದಸ್ಯರು ಧ್ವನಿಗೂಡಿಸಿದರು. ಸಿಟಿ ರವಿ ವಿಷಾದ ವ್ಯಕ್ತಪಡಿಸಬೇಕು. ಇಲ್ಲ ಅಂದರೆ ಸದನದಿಂದ ಹೊರಗೆ ಹಾಕಬೇಕು ಅಂತ ಅಡಳಿತ ಪಕ್ಷದ ಸದಸ್ಯರು ಒತ್ತಾಯ ಮಾಡಿದರು. ಇದನ್ನೂ ಓದಿ: ರಾಜ್ಯಕ್ಕೆ ಇನ್ನೊಂದು ಹೈ-ಸ್ಪೀಡ್ ರೈಲ್ವೆ ಕಾರಿಡಾರ್; ರೈಲ್ವೆ ಸಚಿವರನ್ನು ಭೇಟಿಯಾದ ಹೆಚ್‌ಡಿಕೆ
ಇದಕ್ಕೆ ಕೌಂಟರ್ ಕೊಟ್ಟ ವಿಪಕ್ಷ ಸದಸ್ಯರು ಸಿಟಿ ರವಿ ಪರ ಬ್ಯಾಟಿಂಗ್ ಮಾಡಿದರು. ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತಾಡಿ, ಸಿಟಿ ರವಿ ಯಾರ ಹೆಸರು ಉಲ್ಲೇಖ ಮಾಡಿಲ್ಲ. ಸಿಟಿ ರವಿ ಯಾವುದೇ ತಪ್ಪು ಮಾಡಿಲ್ಲ. ಅವರು ಕ್ಷಮೆ ಕೇಳೋ ಅವಶ್ಯಕತೆ ಇಲ್ಲ. ಕೇಳೋದು ಇಲ್ಲ ಅಂತ ತಿಳಿಸಿದರು. ಛಲವಾದಿ ನಾರಾಯಣಸ್ವಾಮಿ ಮಾತಿಗೆ ಬಿಜೆಪಿ-ಜೆಡಿಎಸ್ ಸದಸ್ಯರು ಧ್ವನಿಗೂಡಿಸಿದರು. ಈ ವೇಳೆ ಮಾತಾಡಿದ ಆಡಳಿತ-ವಿಪಕ್ಷಗಳ ನಡುವೆ ವಿಷಾದದ ಪಟ್ಟು ಜೋರಾಗಿ ನಡೆದು, ಮಾತಿನ ಸಮರಗಳು ನಡೆಯಿತು. ಸಭಾಪತಿ ಪೀಠವೂ ಯಾವುದೇ ನಿರ್ಧಾರ ಮಾಡಲು ಆಗದೇ ಕಲಾಪವನ್ನು ಊಟಕ್ಕೆ ಮುಂದೂಡಿಕೆ ಮಾಡಿದರು. ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಗುಂಡಿನ ಚಕಮಕಿ – ಇಬ್ಬರು ಜೈಶ್ ಉಗ್ರರು ಬಲಿ

