ಬೆಂಗಳೂರು: ಕಳೆದ ಎರಡು ದಿನಗಳಿಂದ ಗದ್ದಲ ಗಲಾಟೆಗೆ ಕಾರಣವಾಗಿದ್ದ ಈಶ್ವರಪ್ಪ ರಾಜೀನಾಮೆ ಪ್ರಕರಣ, ಇವತ್ತು ವಿಧಾನ ಪರಿಷತ್‍ನಲ್ಲಿ ಸದ್ದು ಮಾಡಿದೆ. ಇಂದಿನ ಕಲಾಪದಲ್ಲೂ ವಿಪಕ್ಷ ಕಾಂಗ್ರೆಸ್ ಈಶ್ವರಪ್ಪರನ್ನ ವಜಾ ಮಾಡಬೇಕು ಅಂತ ಪಟ್ಟು ಹಿಡಿದರು.
ಕಲಾಪ ಆರಂಭವಾಗುತ್ತಿದ್ದಂತೆ, ವಿಪಕ್ಷ ನಾಯಕ ಹರಿಪ್ರಸಾದ್ ಈಶ್ವರಪ್ಪರನ್ನು ಬಂಧನ ಮಾಡಬೇಕು. ಅವರನ್ನ ಸಂಪುಟದಿಂದ ವಜಾ ಮಾಡಬೇಕು. ಅವರ ವಿರುದ್ಧ ದೇಶ ದ್ರೋಹದ ಕೇಸ್ ದಾಖಲಿಸಬೇಕು ಅಂತ ಒತ್ತಾಯ ಮಾಡಿದರು. ಹರಿಪ್ರಸಾದ್ ಮಾತಿಗೆ ಸಲೀಂ ಅಹಮದ್ ಧ್ವನಿಗೂಡಿಸಿದರು. ಇದನ್ನೂ ಓದಿ: ಯತ್ನಾಳ್ ಸತ್ತಿದ್ದಾರೆ, ಅದಕ್ಕಾಗಿ ಶವಯಾತ್ರೆ ಮಾಡ್ತಿದ್ದೇವೆ: ಮೊಹಮ್ಮದ್ ನಲಪಾಡ್
Advertisement
Advertisement
ಕಾಂಗ್ರೆಸ್ ಬೇಡಿಕೆ ತಿರಸ್ಕಾರ ಮಾಡಿದ ಸಭಾಪತಿಗಳು ಪ್ರಶ್ನೋತ್ತರಕ್ಕೆ ಅವಕಾಶ ಕೊಟ್ಟರು. ಕೂಡಲೇ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಹೋರಾಟ ಮಾಡಿದರು. ಈ ವೇಳೆ ಬಿಜೆಪಿಯ ನಾರಾಯಣಸ್ವಾಮಿ ಜಮೀರ್ ವಿರುದ್ಧ ಕೇಸ್ ದಾಖಲಿಸಿ ಅರೆಸ್ಟ್ ಮಾಡಬೇಕು ಎಂದು ಒತ್ತಾಯ ಮಾಡಿದರು. ಬಿಜೆಪಿ, ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದಿದೆ. ಇದನ್ನೂ ಓದಿ: ಕೃಷ್ಣ ನದಿ ನೀರು ವಿವಾದ – ಪ್ರಕರಣದ ವಿಚಾರಣೆಗೆ ಪೀಠ ರಚಿಸಲು ರಾಜ್ಯದ ಮನವಿ
Advertisement
Advertisement
ಕಾಂಗ್ರೆಸ್ ಪ್ರತಿಭಟನೆಗೆ ಬಿಜೆಪಿ ಸದಸ್ಯರು ಕೂಡಾ ಕೌಂಟರ್ ಅಟ್ಯಾಕ್ ಮಾಡಿದರು. ಹಿಂದು ವಿರೋಧ ಕಾಂಗ್ರೆಸ್ ಅಂತ ಕಾಂಗ್ರೆಸ್‍ಗೆ ಧಿಕ್ಕಾರ ಕೂಗಿದರು. ಈ ವೇಳೆ ಕಾಂಗ್ರೆಸ್ ಬಿಜೆಪಿಗೆ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿತು. ಇದಕ್ಕೆ ಸುಮ್ಮನೆ ಆಗದ ಬಿಜೆಪಿ ಸದಸ್ಯರು ಜೈ ಶ್ರೀರಾಮ್, ಜೈ ಜೈ ಶ್ರೀರಾಮ್, ಭಾರತ್ ಮಾತಾಕೀ ಜೈ ಅಂತ ಘೋಷಣೆ ಕೂಗಿದರು. ಪರಸ್ಪರ ಗದ್ದಲ ಗಲಾಟೆ ಹಿನ್ನಲೆ ಪರಿಷತ್ ಕಲಾಪವನ್ನ ಸಭಾಪತಿಗಳು ಮುಂದೂಡಿಕೆ ಮಾಡಿದರು.