ಮುಂಬೈ: ವಿಶ್ವ ಕ್ರಿಕೆಟ್‍ನಲ್ಲಿ ಮೆರೆದು ನಿವೃತ್ತಿಯಾದ ಆಟಗಾರರು ಮತ್ತೆ ಮೈದಾನಕ್ಕಿಳಿದು ಆಡಿದ ಲೆಜೆಂಡ್ಸ್ ಕ್ರಿಕೆಟ್ ಲೀಗ್‍ನಲ್ಲಿ ಮಹಿಳಾ ಅಂಪೈರ್‌ಗಳು ಗಮನಸೆಳೆದಿದ್ದಾರೆ.
Advertisement
ನಿವೃತ್ತಿ ಬಳಿಕ ಇದೀಗ ಹಿರಿಯ ಆಟಗಾರರು ಮತ್ತೆ ಕ್ರಿಕೆಟ್ ಆಡಿ ಸಂಭ್ರಮಿಸಿದ್ದಾರೆ. ದಿಗ್ಗಜ ಆಟಗಾರರು ಮೂರು ತಂಡಗಳ ಪರ ಲೆಜೆಂಡ್ಸ್ ಕ್ರಿಕೆಟ್ ಲೀಗ್ ಟೂರ್ನಿಯನ್ನು ಜನವರಿ 20ರಂದು ಆರಂಭಗೊಂಡು ಇದೀಗ ಫೈನಲ್ ಹಂತಕ್ಕೆ ತಲುಪಿದೆ. ಈ ಟೂರ್ನಿಯಲ್ಲಿ ಹಿರಿಯ ಆಟಗಾರರು ಈಗಿರುವ ಯುವ ಆಟಗಾರರು ನಾಚುವಂತೆ ಪ್ರದರ್ಶನವನ್ನು ನೀಡಿ ಕ್ರಿಕೆಟ್ ಪ್ರಿಯರ ಮನಗೆದ್ದಿದ್ದಾರೆ. ಈ ಟೂರ್ನಿಯ ಇನ್ನೊಂದು ವಿಶೇಷವೆಂದರೆ ಈ ಟೂರ್ನಿಯಲ್ಲಿ ಮಹಿಳಾ ಅಂಪೈರ್‌ಗಳು ಕಾರ್ಯ ನಿರ್ವಹಿಸಿದ್ದಾರೆ. ಉತ್ತಮವಾಗಿ ಅಂಪೈರಿಂಗ್ ಮಾಡಿರುವ ಕಾರಣ ಎಲ್ಲೆಡೆಯಿಂದ ಈ ಮಹಿಳಾ ಅಂಪೈರ್‌ಗಳಿಗೆ ಶ್ಲಾಘನೆ ಕೇಳಿಬರುತ್ತಿದೆ. ಇದನ್ನೂ ಓದಿ: ಪತ್ನಿಯ ಹುಟ್ಟುಹಬ್ಬಕ್ಕೆ ಬುರ್ಜ್ ಖಲಿಫಾದಲ್ಲಿ ಫೋಟೋ ಹಾಕಿ ಶುಭ ಕೋರಿದ ರೊನಾಲ್ಡೊ
Advertisement
Advertisement
ಲೆಜೆಂಡ್ಸ್ ಲೀಗ್‍ನಲ್ಲಿ ಇಂಡಿಯಾ ಮಹಾರಾಜಾಸ್, ಏಷ್ಯಾ ಲಯನ್ಸ್ ಮತ್ತು ವರ್ಲ್ಡ್ ಜೈಂಟ್ಸ್ ತಂಡಗಳು ಆಡಿದ್ದವು ಇದರಲ್ಲಿ ಇಂಡಿಯಾ ಮಹಾರಾಜಾಸ್ ತಂಡ ಭಾರತೀಯ ಆಟಗಾರರನ್ನು ಒಳಗೊಂಡ ತಂಡವಾದಗಿದ್ದರೆ, ಏಷ್ಯಾ ಲಯನ್ಸ್ ಭಾರತವನ್ನು ಹೊರತು ಪಡಿಸಿ ಉಪಖಂಡದ ಉಳಿದ ದೇಶಗಳ ಆಟಗಾರನ್ನು ಒಳಗೊಂಡ ದಂಡವಾಗಿದೆ, ವರ್ಲ್ಡ್ ಜೈಂಟ್ಸ್ ತಂಡ ವಿಶ್ವದ ಇತರ ದೇಶಗಳ ದಿಗ್ಗಜ ಕ್ರಿಕೆಟಿಗರ ತಂಡವಾಗಿದೆ. ಇದೀಗ ಟೂರ್ನಿ ಫೈನಲ್ ಹಂತಕ್ಕೆ ತಲುಪಿದ್ದು, ವರ್ಲ್ಡ್ ಜೈಂಟ್ಸ್ ಮತ್ತು ಏಷ್ಯಾ ಲಯನ್ಸ್ ತಂಡಗಳು ಫೈನಲ್ ಹಣಾಹಣಿಗೆ ತಯಾರಾಗಿದೆ. ಇದನ್ನೂ ಓದಿ: ಮಾಜಿ ಆರ್‌ಸಿಬಿ ಆಟಗಾರನ ಮೇಲೆ ದೆಹಲಿ ಪೊಲೀಸರಿಂದ ಹಲ್ಲೆ
Advertisement
Are you ready for the battle that will end this legendary war?
7:30 PM IST | Sony Sports Network
Who will claim the ultimate victory?#GameOfGOATs #Howzat #LegendsLeagueCricket #LLCT20 #T20Cricket #Cricket22 pic.twitter.com/yi5N95j8ka
— Legends League Cricket (@llct20) January 29, 2022
ಕ್ರಿಕೆಟ್ ಅಭಿಮಾನಿಗಳ ನೆಚ್ಚಿನ ಹಳೆಯ ಸ್ಟಾರ್‌ಗಳ ಕ್ರಿಕೆಟ್ ಆಟವನ್ನು ನೋಡಿ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ಸೂಚಿಸಿದ್ದಾರೆ. ಇದರೊಂದಿಗೆ ಈ ಮಹಿಳಾ ಅಂಪೈರ್‌ಗಳನ್ನು ಐಪಿಎಲ್‍ನಲ್ಲಿ ಕಾಣಲು ಬಯಸಿದ್ದೇವೆ ಎಂಬ ಅಭಿಪ್ರಾಯ ನೆಟ್ಟಿಗರಿಂದ ಕೇಳಿ ಬರುತ್ತಿದೆ.