ಕೋಲ್ಕತ್ತಾ: ಹಿರಿಯ ಗಾಯಕಿ ಸಂಧ್ಯಾ ಮುಖೋಪಾಧ್ಯಾಯ ಎಂದೇ ಚಿರಪರಿಚಿತರಾಗಿರುವ, ಲೆಜೆಂಡರಿ ಬೆಂಗಾಲಿ ಗಾಯಕಿ ಸಂಧ್ಯಾ ಮುಖರ್ಜಿ ನಿಧನರಾಗಿದ್ದಾರೆ. ಸಂಧ್ಯಾ ಮುಖರ್ಜಿ ಇಂದು ಸಂಜೆ ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ ಎಂದು ಅವರು ದಾಖಲಾಗಿದ್ದ ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement
ಕೆಲವು ದಿನಗಳ ಹಿಂದೆ ಕೋವಿಡ್ -19 ಪಾಸಿಟಿವ್ ಬಂದಿತ್ತು. ನಂತರ ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಅವರಿಗೆ ಹೃದಯದ ಕಾಯಿಲೆ, ಬಹು-ಅಂಗಾಂಗಗಳ ವೈಫಲ್ಯ ಮೂಳೆಯಲ್ಲಿ ಮುರಿತವಾಗಿತ್ತು. ಹೀಗಾಗಿ ಅವರು ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಇದನ್ನೂ ಓದಿ: ಕೈ, ಕಾಲು ಕಟ್ಟಿ ಹಾಕಿ ಸಿನಿಮೀಯ ರೀತಿಯಲ್ಲಿ ಮನೆಗಳ ದರೋಡೆ
Advertisement
Advertisement
ಮುಖರ್ಜಿ ಅವರಿಗೆ 90 ವರ್ಷ ವಯಸ್ಸಾಗಿದ್ದು, ಅನಾರೋಗ್ಯದ ಕಾರಣ ಮುಖರ್ಜಿ ಜನವರಿ ಕೊನೆಯ ವಾರದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ರಾತ್ರಿ 7.30ರ ಸುಮಾರಿಗೆ ತೀವ್ರ ಹೃದಯಾಘಾತಕ್ಕೆ ಒಳಗಾದರು, ನಂತರ ಅವರು ನಿಧನರಾದರು ಎಂದು ಆಸ್ಪತ್ರೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಹಿಜಬ್ ವಿವಾದ – ಅಪ್ರಾಪ್ತ ಬಾಲಕಿಯರ ವೈಯಕ್ತಿಕ ವಿವರ ಟ್ವೀಟ್ ಮಾಡ್ತಿದೆ ಬಿಜೆಪಿ: ಶಿವಸೇನಾ ಸಂಸದೆ ತರಾಟೆ
Advertisement
ಸಂಧ್ಯಾ ಮುಖರ್ಜಿಯವರು 2022-23ರ ಪದ್ಮಶ್ರೀ ಪ್ರಶಸ್ತಿಯನ್ನು ನಿರಾಕರಿಸಿದ್ದರು. ಇದು ಕಿರಿಯ ಕಲಾವಿದರಿಗೆ ಹೆಚ್ಚು ಅರ್ಹವಾಗಿದೆ ಮತ್ತು ತಮ್ಮಂತವರಿಗೆ ಅಲ್ಲ ಎಂದು ಹೇಳಿದ್ದರು. ದೇಶದ ನಾಗರಿಕ ನೀಡುವ ಅತ್ಯುನ್ನತ ಗೌರವವನ್ನು ನಿರಾಕರಿಸಿದ ಪಶ್ಚಿಮ ಬಂಗಾಳದ ಎರಡನೇ ವ್ಯಕ್ತಿಯಾಗಿದ್ದಾರೆ. ತನ್ನ ತಾಯಿ ಪದ್ಮಶ್ರೀ ಪುರಸ್ಕøತೆ ಎಂದು ಹೆಸರಿಸಲು ಇಚ್ಛಿಸುವುದಿಲ್ಲ ಮತ್ತು ತನ್ನ ವಯಸ್ಸಿನಲ್ಲಿ ಪ್ರಶಸ್ತಿಯನ್ನು ನೀಡಿದ್ದಕ್ಕಾಗಿ ಅವಮಾನ ಅನುಭವಿಸಿದೆ ಎಂದು ಮುಖರ್ಜಿ ಅವರ ಪುತ್ರಿ ಸೌಮಿ ಸೆನ್‍ಗುಪ್ತಾ ಅಧಿಕಾರಿಯೊಬ್ಬರಿಗೆ ಕರೆ ಮಾಡಿ ಹೇಳಿದ್ದರು.