ಚೆನ್ನೈ: ತಮಿಳುನಾಡು ಯುವಜನ ಮತ್ತು ಕ್ರೀಡಾ ವ್ಯವಹಾರಗಳ ಸಚಿವ ಹಾಗೂ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಪುತ್ರ ಉದಯ್‌ನಿಧಿ ಸ್ಟಾಲಿನ್ (Udhayanidhi Stalin) ಸನಾತನ ಧರ್ಮದ ಕುರಿತಾಗಿ ದ್ವೇಷಪೂರಿತ ಭಾಷಣ ಮಾಡಿದ್ದಕ್ಕಾಗಿ ಕಾನೂನು ಹಕ್ಕುಗಳ ವೀಕ್ಷಣಾಲಯ (Legal Rights Observatory) ಸ್ವಯಂ ಪ್ರೇರಿತ ಎಫ್‌ಐಆರ್ ದಾಖಲಿಸಿಕೊಳ್ಳುವಂತೆ ಸೋಮವಾರ ಚೆನ್ನೈನ ಪೊಲೀಸ್ (Chennai Police) ಕಮಿಷನರ್‌ಗೆ ಲೀಗಲ್ ನೋಟಿಸ್ ಕಳುಹಿಸಿದೆ.
ಕೆಲವು ವಿಷಯಗಳನ್ನು ವಿರೋಧಿಸಲಾಗುವುದಿಲ್ಲ, ಅವುಗಳನ್ನು ರದ್ದುಗೊಳಿಸಬೇಕು. ನಾವು ಡೆಂಗ್ಯೂ, ಸೊಳ್ಳೆಗಳು, ಮಲೇರಿಯಾ ಅಥವಾ ಕೊರೊನಾವನ್ನು ವಿರೋಧಿಸಲು ಸಾಧ್ಯವಿಲ್ಲ, ನಾವು ಅವುಗಳನ್ನು ನಿರ್ಮೂಲನೆ ಮಾಡಬೇಕು. ಅದೇ ರೀತಿ ನಾವು ಸನಾತನ ಧರ್ಮವನ್ನು ವಿರೋಧಿಸುವ ಬದಲು ನಿರ್ಮೂಲನೆ ಮಾಡಬೇಕಾಗಿದೆ ಎಂದು ಉದಯ್ ಸ್ಟಾಲಿನ್ ಶನಿವಾರ ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು.
Advertisement
Advertisement
ಉದಯ್‌ನಿಧಿ ಸ್ಟಾಲಿನ್ ಅವರ ಈ ಹೇಳಿಕೆ ದ್ವೇಷ ಭಾಷಣದ ಒಂದು ಭಾಗವಾಗಿದೆ. ಅವರ ಹೇಳಿಕೆ ಧರ್ಮದ ನೆಲೆಯಲ್ಲಿ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಅವರು ಕಾರ್ಯಕ್ರಮದಲ್ಲಿ ಇಂತಹ ದ್ವೇಷದ ಭಾಷಣವನ್ನು ಮಾಡಿದ್ದು ಮಾತ್ರವಲ್ಲದೆ ಎಕ್ಸ್‌ನಲ್ಲಿಯೂ (Twitter) ಬರೆಯುವ ಮೂಲಕ ಪುನರುಚ್ಚರಿಸಿದ್ದಾರೆ ಎಂದು ಎಲ್‌ಆರ್‌ಒ ಚೆನ್ನೈ ಪೊಲೀಸರಿಗೆ ಲೀಗಲ್ ನೋಟಿಸ್‌ನಲ್ಲಿ ತಿಳಿಸಿದೆ. ಇದನ್ನೂ ಓದಿ: ಉದಯ್ ಸ್ಟಾಲಿನ್‌ದು ಹಿಟ್ಲರ್ ಮನಸ್ಥಿತಿ: ಬೊಮ್ಮಾಯಿ ವಾಗ್ದಾಳಿ
Advertisement
ಉದಯ್‌ನಿಧಿ ಸ್ಟಾಲಿನ್ ತನ್ನ ದ್ವೇಷ ಭಾಷಣದ ಮೂಲಕ ಭಾರತೀಯ ದಂಡಸಂಹಿತೆಯ ಸೆಕ್ಷನ್ 153 ಎ ಮತ್ತು ಬಿ, 295 ಎ, 298 ಮತ್ತು 505 ರ ಅಡಿಯಲ್ಲಿ ಅಪರಾಧಗಳನ್ನು ಎಸಗಿದ್ದಾರೆ. ಇದು ಅತ್ಯಂತ ಗಂಭೀರ ಸ್ವಭಾವದ್ದಾಗಿದೆ ಎಂದು ಹೇಳಿದೆ.
Advertisement
ದ್ವೇಷ ಭಾಷಣದ ಪ್ರಕರಣದಲ್ಲಿ ಆರೋಪಿಯ ಸ್ಥಿತಿಯನ್ನು ಲೆಕ್ಕಿಸದೇ ಪೊಲೀಸರು ಸ್ವಯಂ ದೂರು ದಾಖಲಿಸಿಕೊಳ್ಳಬಹುದು. ಹಾಗೂ ಯಾವುದೇ ದೂರಿಗೆ ಕಾಯುವ ಅಗತ್ಯವಿಲ್ಲ. ಸುಪ್ರೀಂ ಕೋರ್ಟ್‌ನ ಈ ನಿರ್ದೇಶನದಂತೆ ದ್ವೇಷಪೂರಿತ ಭಾಷಣ ಮಾಡಿದ ಆರೋಪಿ ಉದಯ್‌ನಿಧಿ ಸ್ಟಾಲಿನ್ ವಿರುದ್ಧ ತ್ವರಿತವಾಗಿ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಚೆನ್ನೈ ಪೊಲೀಸ್ ಆಯುಕ್ತರಿಗೆ ಲೀಗಲ್ ನೋಟಿಸ್‌ನಲ್ಲಿ ತಿಳಿಸಲಾಗಿದೆ. ಮಾತ್ರವಲ್ಲದೇ ಒಂದು ವಾರದೊಳಗಾಗಿ ಉದಯ್ ಸ್ಟಾಲಿನ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ. ಇದನ್ನೂ ಓದಿ: ನಿಮಗೆ ತಾಕತ್, ಧಮ್ ಇದ್ರೆ ಇಸ್ಲಾಂ ಧರ್ಮದ ಬಗ್ಗೆ ಮಾತಾಡಿ: ಆಂದೋಲ ಶ್ರೀ
Web Stories