ಬೆಳಗಾವಿ: ಕಾರ್ಯಾಗಾರ ಕೇವಲ ಶೋಷಿತರಿಗೆ ಕಾನೂನಿನ ಅರಿವು ಮೂಡಿಸಲು ಮಾತ್ರ ಸೀಮಿತವಾಗದೇ ಅವರನ್ನು ಶೋಷಿಸುವ ಹಾಗೂ ಪ್ರೇರೇಪಿಸುವ ವರ್ಗಗಳಿಗೂ ಕಾನೂನಿನ ಅರಿವು ಮೂಡಿಸುವ ಸಾಮಾನ್ಯ ಸಭೆಯಾಗಿ ಹೊರ ಹೊಮ್ಮಬೇಕು ಎಂದು ಎಸ್.ಪಿ ಭೀಮಾ ಶಂಕರ್ ಗುಳೇದ (Bhimashankar Guled) ಹೇಳಿದ್ದಾರೆ.
ಬೆಳಗಾವಿ (Belagavi) ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಮೇಲಿನ ದೌರ್ಜನ್ಯ ನಿಯಂತ್ರಣ ಕಾಯ್ದೆ ಕುರಿತು ಅನುಷ್ಠಾನ ಅಧಿಕಾರಿಗಳಿಗೆ ಅರಿವು ಮೂಡಿಸಲು ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಕಾರ್ಯಾಗಾರ ಜರುಗಿತು. ಇದನ್ನೂ ಓದಿ: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಅ.4 ಕ್ಕೆ ಮುಂದೂಡಿಕೆ
ಸಮಾಜ ಕಲ್ಯಾಣ ಇಲಾಖೆಯ ಎಸ್‌ಸಿಎಸ್‌ಪಿ ಹಾಗೂ ಟಿಎಸ್‌ಪಿ ಸಲಹೆಗಾರರಾದ ನಿವೃತ್ತ ಐಎಎಸ್‌ಅಧಿಕಾರಿ ಇ.ವೆಂಕಟಯ್ಯ, ಎಸ್.ಪಿ ಭೀಮಾ ಶಂಕರ್ ಗುಳೇದ್, ಪೊಲೀಸ್ ಆಯುಕ ಯಡಾ ಮಾರ್ಟಿನ ಕಾರ್ಯಾಗಾರಕ್ಕೆ ಚಾಲನೆ ನೀಡಿದರು. ಇದನ್ನೂ ಓದಿ: ವಾಯುಪಡೆ ನೂತನ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ ಏರ್ ಮಾರ್ಷಲ್ ಎಪಿ ಸಿಂಗ್
ಭೀಮಾ ಶಂಕರ್ ಗುಳೇದ ಮಾತನಾಡಿ, ಬೆಳಗಾವಿ ಜಿಲ್ಲೆಯಲ್ಲಿ 2022 ರಿಂದ 24ರ ವರಗೆ ಮೂರು ವರ್ಷಗಳಲ್ಲಿ ದೌರ್ಜನ್ಯ ತಡೆ ಕಾಯಿದೆಯ ಪ್ರಕರಣಗಳು ಹೆಚ್ಚುತ್ತಿವೆ ಹಾಗೂ ಅಪರಾಧಿಗಳ ವಿರುದ್ಧ ಶಿಕ್ಷೆ ಆಗುತ್ತಿಲ್ಲ ಇದೂ ಬೇಸರದ ಸಂಗತಿಯಾಗಿದೆ. ತನಿಖಾಧಿಕಾರಿಗಳ ತೆಗದುಕೊಳ್ಳುವ ಕ್ರಮದಲ್ಲಿ ವ್ಯತ್ಯಾಸ ಕಂಡು ಬಂದರೆ ಸಹಿಕೊಳ್ಳಲು ಆಗುವುದಿಲ್ಲ ಎಂದು ಹೇಳಿದರು.
ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಜಿಪಂ ಸಿಇಓ ರಾಹುಲ್ ಶಿಂಧೆ, ಎಸ್.ಪಿ ಡಾ.ಭೀಮಾಶಂಕರ ಗುಳೇದ, ಪಾಲಿಕೆ ಆಯುಕ್ತ, ಅಶೋಕ ದುಡಗುಂಟಿ ಸೇರಿ ಹಲವು ಅಧಿಕಾರಿಗಳು ಇದ್ದರು.