ಬೆಂಗಳೂರು: ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಯಾದ ನಂತರ 1,329 ಕೇಸು ದಾಖಲಿಸಿದ್ದು, 10 ಸಾವಿರ ಹಸು (Cow) ಗಳ ರಕ್ಷಣೆ ಮಾಡಲಾಗಿದೆ. ಗೋವಾಗೆ ದನದ ಮಾಂಸ ಕಳಿಸುತ್ತಿರುವ ಆರೋಪದ ಕುರಿತು ಪರಿಶೀಲನೆ ನಡೆಸಿ ದನದ ಮಾಂಸ ಸಾಗಾಣಿಕೆ ಮಾಡುತ್ತಿರುವುದು ಕಂಡು ಬಂದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ (Prabhu Chauhan) ತಿಳಿಸಿದ್ದಾರೆ.
ವಿಧಾನ ಪರಿಷತ್ (Vidhana Parishad) ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಹರೀಶ್ ಕುಮಾರ್ ಪ್ರಶ್ನೆ ಕೇಳಿದರು. ಕರ್ನಾಟಕ ರಾಜ್ಯದ ಪ್ರತಿ ಜಿಲ್ಲೆಯಿಂದ ಗೋವಾಕ್ಕೆ ಪ್ರತಿದಿನ ರಫ್ತು ಮಾಡಲಾಗುವ ದನ ಮತ್ತು ಎಮ್ಮೆ ಮಾಂಸದ ಪ್ರಮಾಣದ ಕುರಿತು ಪ್ರಶ್ನೆ ಕೇಳಿದರು. ಇದನ್ನೂ ಓದಿ: ಮೀನೂಟ ಸವಿದು ದೇವರ ದರ್ಶನ ಮಾಡಿದ ಸಿ.ಟಿ ರವಿ ಫೋಟೋ ವೈರಲ್
ಇದಕ್ಕೆ ಉತ್ತರಿಸಿದ ಸಚಿವ ಪ್ರಭು ಚೌಹಾಣ್, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಲ್ಲೂ ಜಾನುವಾರುಗಳ ಮಾಂಸದ ರಫ್ತು ಮಾಡುವ ಅಂಕಿ-ಅಂಶಗಳ ಮಾಹಿತಿಯನ್ನು ಇಲಾಖೆ ನಿರ್ವಹಿಸುವುದಿಲ್ಲ. ಇದು ನಮ್ಮ ಇಲಾಖೆ ವ್ಯಾಪ್ತಿಗೆ ಬರಲ್ಲ. ಆದರೂ ನಗರಾಭಿವೃದ್ಧಿ ಇಲಾಖೆ, ವಾಣಿಜ್ಯ ಇಲಾಖೆ ಮತ್ತು ಕೈಗಾರಿಕಾ ಇಲಾಖೆ ಮತ್ತು ಆರ್ಥಿಕ ಇಲಾಖೆ (ಜಿಎಸ್‌ಟಿ ವಿಭಾಗ) ಗಳಿಂದ ಮಾಹಿತಿ ಕೋರಲಾಗಿತ್ತು.
ನಗರಾಭಿವೃದ್ಧಿ ಇಲಾಖೆಯು ಈ ಪ್ರಶ್ನೆ ಅನ್ವಯವಾಗಲ್ಲ ಎಂದು ಉತ್ತರಿಸಿದೆ. ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯು ಸದರಿ ಪ್ರಶ್ನೆಯು ಕರ್ನಾಟಕ ರಾಜ್ಯದಿಂದ ಗೋವಾಕ್ಕೆ ಕಳುಹಿಸಲಾಗುತ್ತಿರುವ ಮಾಂಸದ ಬಗ್ಗೆ ಇದ್ದು, ರಫ್ತಿಗೆ ಸಂಬಂಧಿಸಿರುವುದಿಲ್ಲ ಎಂದು ವರದಿ ನೀಡಿದೆ. ಗೋವಾಕ್ಕೆ ದನ ಮತ್ತು ಎಮ್ಮೆ ಮಾಂಸ ರಫ್ತು ಮಾಹಿತಿಯು ಶೂನ್ಯ ಎಂದು ಆರ್ಥಿಕ ಇಲಾಖೆಯು ವರದಿ ನೀಡಿದೆ ಎಂದು ತಿಳಿಸಿದರು. ಇದನ್ನೂ ಓದಿ: ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಬೇಕು, ಶೀಘ್ರವೇ ಪ್ರಕರಣದ ವಿಚಾರಣೆ ನಡೆಸಿ- ಸುಪ್ರೀಂಗೆ ವಕೀಲರ ಮನವಿ
ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ದನದ ಮಾಂಸ ಸಾಗಾಣಿಕೆ ಅಕ್ರಮವಾಗಲಿದೆ. ಎಲ್ಲಿಯೂ ಸಾಗಾಣಿಕೆ ಮಾಡುತ್ತಿಲ್ಲ. ಒಂದು ವೇಳೆ ಗೋವಾಕ್ಕೆ ನಮ್ಮ ರಾಜ್ಯದಿಂದ ದನದ ಮಾಂಸ ಸಾಗಾಣಿಕೆ ಮಾಡುತ್ತಿರುವುದು ಕಂಡುಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k