ಬೆಳಗಾವಿ: ಅನ್ನ – ನೀರು ನೀಡದೆ ಕಾಲಿಗೆ ಕಬ್ಬಿಣದ ಸರಪಳಿ ಕಟ್ಟಿ ಕೋಳ ತೊಡಿಸಿ ಹೊಟೇಲ್ ಕಾರ್ಮಿಕರಿಗೆ (labourers) ಪ್ರತಿನಿತ್ಯ ಚಿತ್ರಹಿಂಸೆ ನೀಡುತ್ತಿದ್ದ ಅಮಾನವೀಯ ಘಟನೆ ಬೆಳಗಾವಿಯಲ್ಲಿ ಕಂಡುಬಂದಿದೆ. ಈ ದೃಶ್ಯಗಳನ್ನು ನೋಡಿದರೆ ಜೀತ ಪದ್ಧತಿ ಇನ್ನೂ ಜೀವಂತವಿದೆಯೇ ಎಂಬುದಕ್ಕೆ ಈ ವರದಿ ಪುಷ್ಟಿ ನೀಡಿತ್ತು. ಈ ಕುರಿತು ʻಪಬ್ಲಿಕ್ ಟಿವಿʼ (Public TV) ವರದಿ ಪ್ರಸಾರ ಮಾಡಿದ ಕೆಲವೇ ಸಮಯದಲ್ಲಿ ಚಿತ್ರಹಿಂಸೆ ಅನುಭವಿಸುತ್ತಿದ್ದ ಕಾರ್ಮಿಕರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.
ಬೆಳಗಾವಿ (Belagavi) ಜಿಲ್ಲೆಯ ಕಿತ್ತೂರು ಹಾಗೂ ಧಾರವಾಡ ತಾಲೂಕಿನ ತೇಗೂರು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ-4ರಲ್ಲಿರುವ ಖಾಸಗಿ ಢಾಬಾಗೆ ಗ್ರಾಮೀಣ ಸಿಪಿಐ ಸಮೀರ ಮುಲ್ಲಾ ಭೇಟಿ ನೀಡಿದ್ದಾರೆ. ತಹಶೀಲ್ದಾರ್ ಸಹ ಭೇಟಿ ನೀಡಿದ್ದು, ಢಾಬಾ ಮಾಲಿಕ ಹಾಗೂ ಕೆಲಸಗಾರರಿಂದ ಮಾಹಿತಿ ಕಲೆಹಾಕುತ್ತಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ 5 ವರ್ಷ ಅಧಿಕಾರದಲ್ಲಿ ಇರ್ತಾರೋ ಇರಲ್ವೋ ಗೊತ್ತಿಲ್ಲ: ಸಿಎಂ ಆಪ್ತ ಸಲಹೆಗಾರ ಬಿಆರ್ ಪಾಟೀಲ್ ಹೊಸ ಬಾಂಬ್
ಹೊಟೇಲ್ ಕೆಲಸಕ್ಕೆ ಉತ್ತರ ಭಾರತದ ಯುವಕರನ್ನು ಕರೆತಂದು ಪುಡಿಗಾಸು ಮುಂಗಡವಾಗಿ ನೀಡಿ ಅವರಿಗೆ ಚಿತ್ರಹಿಂಸೆ ಕೊಟ್ಟು ಕಾಲಿಗೆ ಬೇಡಿ ಹಾಕಿ ಕಬ್ಬಿಣದ ಸರಪಳಿಯಿಂದ ಕಟ್ಟಿ ಥಳಿಸುವ ದೃಶ್ಯಗಳು ಕಂಡುಬಂದಿದ್ದವು. ಇದನ್ನೂ ಓದಿ: ಚಾಮರಾಜನಗರ| ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಉಚಿತ ಸಿ.ಟಿ ಸ್ಕ್ಯಾನ್ ಸೌಲಭ್ಯವಿದ್ರೂ ರೋಗಿಗಳ ಪರದಾಟ
ಮಾಲಿಕನ ಕುಕೃತ್ಯಕ್ಕೆ ರೋಸಿಹೋದ ಹೊಟೇಲ್ ಕೂಲಿ ಕಾರ್ಮಿಕರು ಬಿಡುಗಡೆ ಭಾಗ್ಯ ಯಾವಾಗ ಎಂಬುದನ್ನು ಕಾದು ನೋಡುತ್ತಿದ್ದರು. ಉತ್ತರ ಭಾರತದಿಂದ ಬಂದ ಯುವಕರಿಗೆ ಇಲ್ಲಿಯ ಭಾಷೆ ಬರುವುದಿಲ್ಲ. ಕಾಲಿಗೆ ಕೋಳ ತೊಟ್ಟುಕೊಂಡೇ ರೊಟ್ಟಿ ತಟ್ಟಿ ಜನರ ಹೊಟ್ಟೆ ತುಂಬಿಸುತ್ತಿದ್ದುದ್ದಂತು ವಿಷಾಧನಿಯ.
ಇದೀಗ ʻಪಬ್ಲಿಕ್ ಟಿವಿʼ ವರದಿ ಬೆನ್ನಲ್ಲೇ ಎಚ್ಚೆತ್ತ ಪೊಲೀಸ್ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳು ಕಾರ್ಮಿಕರನ್ನು ರಕ್ಷಿಸುವ ಕೆಲಸ ಮಾಡಿದ್ದಾರೆ. ಈ ಸಂಬಂಧ ಮಾತನಾಡಿರುವ ಕಾರ್ಮಿಕ ಇಲಾಖೆ ಅಧಿಕಾರಿಗಳು, ಇಷ್ಟೊಂದು ಕಾಯ್ದೆ ಕಾನೂನುಗಳು ಪ್ರಬಲವಾಗಿದ್ದರೂ ಇಂಥ ಅಮಾನವೀಯ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಜೀತ ಪದ್ದತಿ ಸಂಪೂರ್ಣ ಹೊಗಲಾಡಿಸಲು ಕಠಿಣ ಕಾನೂನುಗಳಿದ್ದು ಹೋಟೆಲ್ ಮಾಲಿಕರಿಗೆ ಶಿಕ್ಷೆಯಾಗುತ್ತದೆ ಮತ್ತು ದಂಡ ವಿಧಿಸಲಾಗುತ್ತದೆ ತಿಳಿಸಿದ್ದಾರೆ.