ಎಸ್ಎಲ್ ಭೈರಪ್ಪ (S. L.Bhyrappa) ಅವರು ಹೇಳುವುದನ್ನು ನೇರವಾಗಿಯೇ ಹೇಳುತ್ತಿದ್ದರು. ತಾನೊಬ್ಬ ದೊಡ್ಡ ಸಾಹಿತಿ, ತನ್ನ ಮಾತಿಗೆ ಟೀಕೆ ವ್ಯಕ್ತವಾಗಬಹುದು ಎಂಬ ಅರಿವಿದ್ದರೂ ಯಾವುದೇ ಮುಲಾಜಿಲ್ಲದೇ ಬಹಿರಂಗವಾಗಿಯೇ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದರು.
ಸಾಧಾರಣವಾಗಿ ಸಾಹಿತಿಗಳು ಕ್ಯಾಪಿಟಲಿಸಂ ಧೋರಣೆಯನ್ನು ವಿರೋಧಿಸುತ್ತಾರೆ. ಆದರೆ ಎಸ್‌ಎಲ್ ಭೈರಪ್ಪನವರು ಕ್ಯಾಪಿಟಲಿಸಂ ಒಪ್ಪಿಕೊಂಡಿದ್ದರು. ಒಂದು ದೇಶ ಬೆಳೆಯಬೇಕಾದರೆ ಕ್ಯಾಪಿಟಲಿಸಂ (Capitlaism) ಅಗತ್ಯ ಎಂದು ಪ್ರತಿಪಾದಿಸಿದ್ದರು. ಇದನ್ನೂ ಓದಿ: ತಿಂಗಳಿಗೆ 5 ರೂ. ಸಂಬಳಕ್ಕೆ ಸಿನಿಮಾ ಟಾಕೀಸ್‌ನಲ್ಲಿ ಗೇಟ್ ಕೀಪರ್ ಆಗಿದ್ರು ಭೈರಪ್ಪ
ಕಾರ್ಯಕ್ರಮಗಳಲ್ಲಿ ಮಾತನಾಡುತ್ತಿದ್ದಾಗ ಕ್ಯಾಪಿಟಲಿಸಂ ಹೊಗಳಿ ಎಡ ಪಂಥೀಯರ ಧೋರಣೆಗಳನ್ನು ಟೀಕಿಸುತ್ತಿದ್ದರು. ಬಂಗಾಳದಲ್ಲಿ ಎಡ ಪಂಥೀಯ ಧೋರಣೆಯ ಜ್ಯೋತಿ ಬಸು ಅವರ ಮಗ ಕಾರ್ಖಾನೆ ನಡೆಸುವ ಬಂಡವಾಳಶಾಹಿಯಾಗಿದ್ದಾನೆ. ನಾನು ಗಮನಿಸಿದಂತೆ ಈ ಲೆಫ್ಟಿಸ್ಟ್‌ಗಳೆಲ್ಲಾ ಅಪ್ರಾಮಾಣಿಕರಾಗಿದ್ದಾರೆ. ನನ್ನನ್ನು ಕ್ಯಾಪಿಟಲಿಸ್ಟ್ ಎನ್ನುತ್ತಾರೆ. ಆದರೆ ದೇಶ ಬೆಳೆಯಬೇಕಾದರೆ ಕ್ಯಾಪಿಟಲಿಸಂ ಅಗತ್ಯ ಎಂದು ವಾದಿಸುತ್ತಿದ್ದರು. ಇದನ್ನೂ ಓದಿ: ಬಾಲ್ಯದಲ್ಲೇ ಪ್ಲೇಗ್‌ಗೆ ತುತ್ತು, ತಮ್ಮನ ಶವ ಹೊತ್ತು ಅಂತ್ಯಸಂಸ್ಕಾರ ಮಾಡಿದ್ದ ಭೈರಪ್ಪ
ಭೈರಪ್ಪನವರು ಹಲವು ವೇದಿಕೆಗಳಲ್ಲಿ ನರೇಂದ್ರ ಮೋದಿ (Narendra Modi) ಅವರ ಆಡಳಿತಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾಮಾಣಿಕ ಬ್ಯುಸಿನೆಸ್‌ಮ್ಯಾನ್. ಅವರು ಹಣಕ್ಕಾಗಿಯಲ್ಲ, ದೇಶಕ್ಕಾಗಿ ಈ ಧೋರಣೆ ಹೊಂದಿದ್ದಾರೆ. ಸಿಎಂ ಪಟ್ಟದಿಂದ ಇಳಿದು ಗುಜರಾತ್‌ನಿಂದ ದೆಹಲಿಗೆ ಬಂದಾಗ ಅವರ ಬಳಿ 23 ಲಕ್ಷ ರೂ. ಇತ್ತು. ಅದನ್ನೂ ಡಿ ದರ್ಜೆ ನೌಕರರ ಮಕ್ಕಳ ಶಿಕ್ಷಣಕ್ಕೆ ಖರ್ಚು ಮಾಡಿದರು. ಹಾಗಾಗಿ ನಾವು ಬಂಡವಾಳ ಧೋರಣೆ ವಿರುದ್ದವಾಗಿ ಮಾತನಾಡಬಾರದು. ಅದರಿಂದ ದೇಶಕ್ಕೆ ಅನಾನುಕೂಲವೇ ಆಗುತ್ತದೆ. ಕಾರು ತಯಾರಿಕೆ ಕಾರ್ಖಾನೆ ಆರಂಭವಾದರೆ ಅದರಿಂದ ಕೇವಲ ಲಾಭವಷ್ಟೇ ಅಲ್ಲದೇ ಸಾಮಾಜಿಕ ಬದಲಾವಣೆಯಾಗುತ್ತದೆ. ಸಾಕಷ್ಟು ಉದ್ಯೋಗ ಸೃಷ್ಟಿಯಾಗುತ್ತದೆ. ಕಾರ್ಮಿಕರ ಮಕ್ಕಳ ಶಿಕ್ಷಣ, ಜೀವನ ಮಟ್ಟ ಸುಧಾರಿಸುತ್ತದೆ. ಬಂಡವಾಳಶಾಹಿಗಳಿಂದ ಸಮಾಜ ಕಟ್ಟುವ ಕೆಲಸವೂ ಆಗುತ್ತಿದೆ ಎಂದು ತಮ್ಮ ಹೇಳಿಕೆಗಳಿಗೆ ಉದಾಹರಣೆ ನೀಡುವ ಮೂಲಕ ಸಮರ್ಥಿಸಿಕೊಳ್ಳುತ್ತಿದ್ದರು.