ಚಿಕ್ಕಬಳ್ಳಾಪುರ: ಎಡಪಂಥೀಯರಿಂದ ದೇಶದಲ್ಲಿ ವಿಕೃತಿ ನಿರ್ಮಾಣ ಮಾಡುವ ಪ್ರಯತ್ನಗಳು ನಡೆಯುತ್ತಾ ಬಂದಿವೆ ಎಂದು ಆರ್‌ಎಸ್‌ಎಸ್ (RSS) ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ (Kalladka Prabhakar Bhat) ಕಿಡಿಕಾರಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿಂದು ಆರ್‌ಎಸ್‌ಎಸ್ (RSS) ಪಥ ಸಂಚಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಕೃತಿ ಮೆರೆಯುವವರನ್ನ ಎಡಪಂಥೀಯರು ಅಂತ ಕರೆಯಲಾಗುತ್ತದೆ ಅಥವಾ ಎಡಪಂಥೀಯರಿಂದ ಪ್ರೇರಣೆ ಪಡೆದವರು ಅಂತಲೂ ಕರೆಯಬಹುದು. ನಮ್ಮ ರಾಜ್ಯದ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅಂತಹದ್ದೇ ರೀತಿಯಲ್ಲಿ ಮಾತನಾಡುತ್ತಾ ವಿಕೃತಿ ನಿರ್ಮಾಣ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದ ವಿರುದ್ಧ ಭಾರತ ಗೆದ್ದಿರೋದು ಕೆಲವರಿಗೆ ಬೇಸರ ತರಿಸಿದೆ – ಕಲ್ಲಡ್ಕ ಪ್ರಭಾಕರ್ ಭಟ್
Advertisement
Advertisement
ರಾಷ್ಟ್ರದ ಬಗ್ಗೆ ಹೆಮ್ಮೆ ಪಡುವಂತಹ ವಿಷಯಗಳು ಪಠ್ಯ ಪುಸ್ತಕದಲ್ಲಿ (Text Book) ಬರಬಾರದು ಅಂತ ವಿರೋಧ ಮಾಡುತ್ತಲೇ ಬಂದ್ರು. ಹೊಸ ಪಠ್ಯ ತಿದ್ದುಪಡಿ ವೇಳೆ ಕೆಲ ವಿಷಯಗಳ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿದ್ದರು ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ನಂಗೆ ಎರಡು ಮುಖವಿಲ್ಲ, ಇರೋದು ಒಂದೇ ಮುಖ: ಹೆಚ್‍ಡಿಕೆಗೆ ಸೋಮಣ್ಣ ಟಾಂಗ್
Advertisement
Advertisement
ಇದೇ ವೇಳೆ ನಟ ಕಮಲ್ ಹಾಸನ್ (Kamala Hassan) ಬಗ್ಗೆ ಕಿಡಿಕಾರಿದ ಕಲ್ಲಡ್ಕ, ಕಮಲ್ ಹಾಸನ್ ತುಂಬಾ ಜನರಿಗೆ ಒಳ್ಳೆಯ ನಟ. ಆದ್ರೆ ಅವನೇನು ಆಕ್ಟ್ ಮಾಡಿದ್ದಾನೆ ಅನ್ನೋದು ಗೊತ್ತಿಲ್ಲ. ಚೋಳರ ಕಾಲದಲ್ಲಿ ಚೋಳರು ಹಿಂದೂಗಳೇ ಆಗಿರಲಿಲ್ಲ ಅಂತ ಹೇಳಿದ. ತಲೆಗೆ ಹುಳ ಬಿಟ್ಟು ಸುಮ್ಮನೆ ಕೂತ. ಇಂತಹದ್ದನ್ನೇ ಮಾಡ್ತಾ ಎಡಪಂಥೀಯರು ನಮ್ಮನ್ನ ಕುಗ್ಗಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.