– ತಾಯಿ ಅಂಗಡಿಗೆ ಹೋದಾಗ ದುರಂತ
ನವದೆಹಲಿ: ಮೂರು ವರ್ಷ ವಯಸ್ಸಿನ ಅವಳಿ ಮಕ್ಕಳು ವಾಷಿಂಗ್ ಮಷೀನ್‍ನಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ದೆಹಲಿಯ ರೋಹಿಣಿ ಪ್ರದೇಶದಲ್ಲಿ ನಡೆದಿದೆ.
ಶನಿವಾರ ಮಧ್ಯಾಹ್ನ 12.30ರ ಸುಮಾರಿಗೆ ರೇಖಾ ಎಂಬವರು ಮನೆಯಲ್ಲಿ ಬಟ್ಟೆ ತೊಳೆಯಲು ವಾಷಿಂಗ್ ಮಿಷನ್‍ಗೆ ನೀರು ತುಂಬಿಸಿದ್ದರು. ಆದ್ರೆ ವಾಷಿಂಗ್ ಪೌಡರ್ ಖಾಲಿಯಾಗಿದ್ದು ನೋಡಿ ಇಬ್ಬರು ಮ್ಕಕಳಾದ ನಿಶಾಂತ್ ಮತ್ತು ನಕ್ಷ್ಯನನ್ನು ಮನೆಯಲ್ಲೇ ಬಿಟ್ಟು ವಾಷಿಂಗ್ ಪೌಡರ್ ತರಲು ಅಂಗಡಿಗೆ ಹೋಗಿದ್ದರು. ಈ ವೇಳೆ ವಾಷಿಂಗ್ ಮಷೀನ್ ಪಕ್ಕದಲ್ಲೇ ಇದ್ದ ಬಟ್ಟೆಯ ರಾಶಿಯ ಮೇಲೆ ಏರಿ ಮಕ್ಕಳು ವಾಷಿಂಗ್ ಮಷೀನ್ ಒಳಗೆ ಬಿದ್ದು, ನೀರಿನಲ್ಲಿ ಮುಳುಗಿ ಸಾವನ್ನಪ್ಪಿವೆ.
Advertisement
5 ನಿಮಿಷದ ಬಳಿಕ ರೇಖಾ ಮನೆಗೆ ಹಿಂದಿರುಗಿ ಬಂದು ನೋಡಿದಾಗ ಮಕ್ಕಳು ನಾಪತ್ತೆಯಾಗಿದ್ರು. 20 ನಿಮಿಷಗಳ ಬಳಿಕ ಪೊಲೀಸರಿಗೆ ವಿಷಯ ಮುಟ್ಟಿಸಲಾಯ್ತು. ಮಕ್ಕಳ ತಂದೆ ರವೀಂದ್ರ ಕೂಡ ತಕ್ಷಣವೇ ಮನೆಗೆ ಬಂದು ಮಕ್ಕಳನ್ನು ಹುಡುಕಲು ಶುರು ಮಾಡಿದ್ರು. ಬಳಿಕ 12 ರಿಂದ 15 ಲೀಟರ್ ನೀರು ತುಂಬಿಸಲಾಗಿದ್ದ ವಾಷಿಂಗ್ ಮಷೀನ್‍ನಲ್ಲಿ ಮಕ್ಕಳು ಇದ್ದಿದ್ದು ಪತ್ತೆಯಾಗಿತ್ತು.
Advertisement
Advertisement
ಕೂಡಲೇ ರವೀಂದ್ರ ಮಕ್ಕಳನ್ನು ಹತ್ತಿರದ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆದರೆ ಅಷ್ಟರಲ್ಲಾಗಲೇ ಮಕ್ಕಳು ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ರು. ಆದ್ರೆ ಇದನ್ನು ನಂಬಲಾಗದೆ ರವೀಂದ್ರ ಮತ್ತೆ ಮಕ್ಕಳನ್ನ ಜೈಪುರ್ ಗೋಲ್ಡನ್ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಅಲ್ಲೂ ವೈದ್ಯರು ಮಕ್ಕಳು ಆಗಲೇ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.
Advertisement
ಸದ್ಯ ಮಕ್ಕಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಬಾಬಾ ಸಾಹೇಬ್ ಅಂಬೇಡ್ಕರ್ ಆಸ್ಪತ್ರೆಗೆ ಕಳಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.
ಮಕ್ಕಳನ್ನು ಕಳೆದುಕೊಂಡ ಕುಟುಂಬದಲ್ಲಿ ಆಕ್ರಂದನ ಮುಗಿಲುಮುಟ್ಟಿದೆ.