ಲೀಲಾವತಿ ಜನ್ಮದಿನ- ಸಮಾಧಿ ಬಳಿ ಕೇಕ್ ಕತ್ತರಿಸಿದ ವಿನೋದ್ ರಾಜ್

Public TV
1 Min Read
vinod raj 1 5

ಹಿರಿಯ ನಟಿ ಲೀಲಾವತಿ (Leelavathi) ಅವರ ಜನ್ಮದಿನಾಚರಣೆ ಪ್ರಯುಕ್ತ ಇಂದು ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿ ತೋಟದ ಅಮ್ಮನ ಸಮಾಧಿ ಬಳಿ ವಿನೋದ್ ರಾಜ್ (Vinod Raj) ಜನ್ಮದಿನ ಆಚರಣೆ ಮಾಡಿದ್ದಾರೆ. ನೂರಾರು ಜನ ಅಭಿಮಾನಿಗಳ ಸಮ್ಮುಖದಲ್ಲಿ ನಟ ವಿನೋದ್ ಕೇಕ್ ಕತ್ತರಿಸಿದ್ದಾರೆ.

vinod raj 1 4

ಕನ್ನಡ ಚಿತ್ರರಂಗ ತಾರೆ ಲೀಲಾವತಿ ಸಾವಿನ ನೋವಿನ ಗಾಯ ಹಾಗೆ ಇದೆ. ಇದರ ನಡುವೆ ಅಮ್ಮನ 87 ವರ್ಷದ  ಜನ್ಮದಿನವನ್ನ ವಿನೋದ್ ರಾಜ್ ಆಚರಿಸಿದ್ದಾರೆ. ಇದನ್ನೂ ಓದಿ:ತಮಿಳು ಜನಪ್ರಿಯ ಹಾಸ್ಯನಟ ಬೋಂಡಾ ಮಣಿ ನಿಧನ

ತಾಯಿಯ ನೆನಪು ಮಾಡಿಕೊಂಡು ಕಣ್ಣೀರಿಟ್ಟು ಹಾಡು ಹಾಡಿ, ವಿನೋದ್ ರಾಜ್ ಭಾವುಕರಾಗಿದ್ದಾರೆ. ಅಮ್ಮನಿಲ್ಲದ ನೆನಪಿನೊಂದಿಗೆ ಸಮಾಧಿ ಬಳಿ ಜನ್ಮದಿನ ಆಚರಣೆ ಮಾಡಿದ್ದು, ಅಭಿಮಾನಿಗಳಿಗೆ ಅನ್ನಸಂತರ್ಪಣೆ ಮಾಡಿದ್ದಾರೆ.

Share This Article