ಲಸಿಕೆ ಹಾಕಿಸಿಕೊಂಡರೆ ವಾಷಿಂಗ್ ಮಶಿನ್, ಫ್ರಿಡ್ಜ್, ಟಿವಿ ಬಹುಮಾನ

Public TV
1 Min Read
Vaccine 1 1

ಮುಂಬೈ: ಕೋವಿಡ್ ಲಸಿಕೆ ಪಡದುಕೊಳ್ಳುವಂತೆ ಜನರನ್ನು ಉತ್ತೇಜಿಸಲು ಮಹಾರಾಷ್ಟ್ರದ ಚಂದ್ರಾಪುರ ನಗರಸಭೆ ಲಕ್ಕಿಡ್ರಾ ಬಹುಮಾನವನ್ನು ಘೋಷಿಸಿದೆ.

FRIDGE

ಎಲ್‍ಇಡಿ ಟಿವಿ, ರೆಫ್ರಿಜರೇಟರ್, ವಾಷಿಂಗ್ ಮಶೀನ್ ಉಡುಗೊರೆಯಾಗಿ ನೀಡಲಾಗುವುದು ಎಂದು ಘೋಷಿಸಿದೆ. ನವೆಂಬರ್ 12 ರಿಂದ 24ರವರೆಗೆ ಲಸಿಕಾ ಕೇಂದ್ರಗಳಿಗೆ ಬಂದು ಲಸಿಕೆ ಪಡೆಯುವವರು ಈ ಉಡುಗೊರೆ ಪಡೆಯಬಹುದಾದಿದೆ. ಇದನ್ನೂ ಓದಿ  ಲಸಿಕೆ ಪಡೆಯದಿದ್ದರೆ ರೇಷನ್, ಗ್ಯಾಸ್‌, ಪೆಟ್ರೋಲ್‌ ಇಲ್ಲ2015 07 25 1437813969 9907014 watchingtvtelevisionremote scaled

ಈ ಅವಧಿಯಲ್ಲಿ ಲಸಿಕೆ ಪಡೆಯುವವರು ಲಕ್ಕಿ ಡ್ರಾನಲ್ಲಿ ಭಾಗವಹಿಸಬಹುದು. ಮೊದಲ ಬಹುಮಾನವಾಗಿ ರೆಫ್ರಿಜರೇಟರ್, 2ನೇ ಬಹುಮಾನವಾಗಿ ವಾಷಿಂಗ್ ಮಶೀನ್ ಮತ್ತು ಮೂರನೇ ಬಹುಮಾನವಾಗಿ ಎಲ್‍ಇಡಿ ಟಿವಿಗಳನ್ನು ಗೆಲ್ಲಬಹುದು. ಸಮಾಧಾನಕರ ಬಹುಮಾನವಾಗಿ 10ಜನರಿಗೆ ಮಿಕ್ಸರ್-ಗ್ರೈಂಡರ್ ನೀಡಲಾಗುವುದು ಎಂದು ಚಂದ್ರಾಪುರ ನಗರಸಭೆ ಪ್ರಕಟಣೆಯಲ್ಲಿ ತಿಳಿಸಿದೆ. ಚಂದ್ರಾಪುರದಲ್ಲಿ 1.93ಲಕ್ಷ ಜನ ಮೊದಲ ಡೋಸ್, 99000 ಜನ ಎರಡೂ ಡೋಸ್ ಲಸಿಕೆ ಪಡೆದಿದ್ದಾರೆ. ಇದನ್ನೂ ಓದಿ: ಹಿಂದೂ ಪುರಾತನ ದೇವಾಲಯವನ್ನು ಪುನರ್‌ನಿರ್ಮಿಸಲು ಆದೇಶಿದ ಪಾಕ್ ನ್ಯಾಯಮೂರ್ತಿ

Share This Article
Leave a Comment

Leave a Reply

Your email address will not be published. Required fields are marked *