ಬೆಂಗಳೂರು: ವೇತನ ತಾರತಮ್ಯ ಸೇರಿದಂತೆ 20ಕ್ಕೂ ಹೆಚ್ಚು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪಿಯುಸಿ ಉಪನ್ಯಾಸರ ಹೋರಾಟ ತೀವ್ರಗೊಂಡಿದೆ. ಈಗಾಗಲೇ ಎರಡು ಹಂತದ ಹೋರಾಟ ಮಾಡಿರುವ ಉಪನ್ಯಾಸಕರು ಇಂದು ಮೂರನೇ ಹಂತದ ಹೋರಾಟ ಪ್ರಾರಂಭ ಮಾಡಿದ್ದಾರೆ.
ಇಂದಿನಿಂದ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಗಳು ಪ್ರಾರಂಭವಾಗಿದೆ. ಪರೀಕ್ಷಾ ಕೆಲಸಕ್ಕೆ ಹಾಜರಾಗಿರುವ ಉಪನ್ಯಾಸಕರು ಕಪ್ಪು ಪಟ್ಟಿ ಧರಿಸಿ ಪರೀಕ್ಷೆ ಕೆಲಸ ನಿರ್ವಹಣೆ ಮಾಡ್ತಿದ್ದಾರೆ.
ಫೆಬ್ರವರಿ 24 ವರೆಗೂ ಪರೀಕ್ಷೆ ಗಳು ನಡೆಯಲಿದೆ. ಪರೀಕ್ಷೆ ಮುಗಿಯೋವರೆಗೂ ಕಪ್ಪು ಪಟ್ಟಿ ಧರಿಸಲು ಉಪನ್ಯಾಸರು ನಿರ್ಧಾರ ಮಾಡಿದ್ದಾರೆ. ಸರ್ಕಾರಕ್ಕೆ ಎಚ್ಚರಿಕೆ ಕೊಡೋಕೆ ಕಪ್ಪು ಪಟ್ಟಿ ಧರಿಸಿದ್ದು, ಇದಕ್ಕೂ ಸರ್ಕಾರ ಬಗ್ಗದೇ ಹೋದ್ರೆ ಏಪ್ರಿಲ್ ನಲ್ಲಿ ಪ್ರಾರಂಭ ಆಗಲಿರುವ ದ್ವೀತಿಯ ಪಿಯುಸಿ ಮೌಲ್ಯಮಾಪನ ಬಹಿಷ್ಕಾರ ಮಾಡೋದಾಗಿ ಉಪನ್ಯಾಸಕರು ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಆದಷ್ಟು ಬೇಗ ಸರ್ಕಾರ ಉಪನ್ಯಾಸಕರ ಸಂಘದ ಜೊತೆ ಮಾತುಕತೆ ನಡೆಸಬೇಕು ಅಂತ ಆಗ್ರಹಿಸಿದ್ದಾರೆ.
ಉಪನ್ಯಾಸಕರ ಪ್ರಮುಖ ಬೇಡಿಕೆಗಳು
– ವೇತನ ತಾರತಮ್ಯ ನಿವಾರಣೆಗೆ ಕುಮಾರ್ ನಾಯಕ್ ವರದಿ ಜಾರಿಗೆ ಆಗ್ರಹ
– ಉಪನ್ಯಾಸಕರಿಗೆ ನೀಡಬೇಕಾದ 2ನೇ ಇನ್ಕ್ರಿಮೆಂಟ್ ಕೂಡಲೇ ಬಿಡುಗಡೆಗೊಳಿಸಬೇಕು.
– ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ತರಬೇಕು.
– ಕಾಲ್ಪನಿಕ ವೇತನ ಸಮಸ್ಯೆ ಪರಿಹಾರ ಮಾಡಬೇಕು.
– ಉಪನ್ಯಾಸಕರಿಗೆ ನಿಗದಿ ಮಾಡಿರುವ ಬೋಧನಾ ಅವಧಿ ಕಡಿಮೆ ಮಾಡಬೇಕು.