ಚಿಕ್ಕಬಳ್ಳಾಪುರ: ಠಾಣೆ ಎದುರು ಅಮರಣಾಂತ ಉಪವಾಸ ಸತ್ಯಾಗ್ರಹಕ್ಕಿಳಿದ ಉಪನ್ಯಾಸಕನನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಎದುರು ನಡೆದಿದೆ.
ಖಾಸಗಿ ಕಾಲೇಜಿನ ಉಪನ್ಯಾಸಕ ಪ್ರದೀಪ್ ಈಶ್ವರ್ ಪೊಲೀಸರು ವಶಕ್ಕೆ ಪಡೆದಾತ. ಅಂದಹಾಗೆ ರಾಜಕೀಯ ಮುಖಂಡ ನವೀನ್ ಕಿರಣ್ ಬೆಂಬಲಿಗ ಉಪನ್ಯಾಸಕ ಪ್ರದೀಪ್ ಈಶ್ವರ್ ಹಾಗೂ ಶಾಸಕ ಸುಧಾಕರ್ ಬೆಂಬಲಿಗ ನಗರಸಭಾ ಸದಸ್ಯ ಗಜೇಂದ್ರ ನಡುವೆ ನಗರಸಭಾ ಆವರಣದಲ್ಲೇ ಗಲಾಟೆ ಆಗಿತ್ತು.
Advertisement
Advertisement
ಈ ಪ್ರಕರಣದಲ್ಲಿ ಪರಸ್ಪರರು ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ ಗಲಾಟೆಯ ಸಂಪೂರ್ಣ ಚಿತ್ರಣ ನಗರಸಭೆ ಸಿಸಿಟಿವಿಯಲ್ಲಿ ವಿಡಿಯೋ ರೆಕಾರ್ಡ್ ಆಗಿದ್ದು, ಆ ಸಿಸಿಟಿವಿ ಫೂಟೇಜ್ ಬಿಡುಗಡೆ ಮಾಡುವಂತೆ ಹಾಗೂ ನಗರಸಭಾ ಸದಸ್ಯ ಗಜೇಂದ್ರನನ್ನ ಬಂಧಿಸುವಂತೆ ಉಪನ್ಯಾಸಕ ಪ್ರದೀಪ್ ಆಗ್ರಹಿಸಿ ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದರು. ಅಮರಣಾಂತ ಸತ್ಯಾಗ್ರಹಕ್ಕೆ ಅವಕಾಶ ಮಾಡಿಕೊಡದ ಪೊಲೀಸರು ಪ್ರದೀಪ್ ಈಶ್ವರನನ್ನ ವಶಕ್ಕೆ ಪಡೆದುಕೊಂಡರು.
Advertisement
Advertisement
ಈ ವೇಳೆ ಮಾತನಾಡಿದ ಪ್ರದೀಪ್, ಶಾಸಕ ಸುಧಾಕರ್ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಮತ್ತೊಂದೆಡೆ ಓರ್ವ ಉಪನ್ಯಾಸಕ ಪ್ರತಿಭಟನೆಗೆ ಮುಂದಾದರೆ ಚಿಕ್ಕಬಳ್ಳಾಪುರ ಪೊಲೀಸರು 50 ಕ್ಕೂ ಹೆಚ್ಚು ಮಂದಿ ಬಂದೋಬಸ್ತ್ ಗೆ ನಿಯೋಜನೆಗೊಂಡಿದ್ದರು. ಚಿಕ್ಕಬಳ್ಳಾಪುರ ನಗರ, ಮಹಿಳಾ ಪೊಲೀಸ್ ಠಾಣೆಯ ಸಿಬ್ಬಂದಿ ಅಲ್ಲದೆ ಹೆಚ್ಚುವರಿಯಾಗಿ ಶಿಡ್ಲಘಟ್ಟ ನಗರ ಠಾಣಾ ಪಿ ಎಸ್ ಐ ಹಾಗೂ ಗ್ರಾಮಾಂತರ ಠಾಣಾ ಪಿ ಎಸ್ ಐ ಸೇರಿದಂತೆ ಸಿಬ್ಬಂದಿಯನ್ನ ಸಹ ಕರೆಸಿಕೊಂಡಿದ್ದರು. ಇವರು ಸಾಲದೂ ಅಂತ ಒಂದು ಡಿ ಆರ್ ವ್ಯಾನ್ ತುಕಡಿಯೊಂದಿಗೆ ಸಿಬ್ಬಂದಿಯನ್ನ ನಿಯೋಜನೆಗೊಳಿಸಿದ್ದರು.
ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಎದುರು ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತೇನೆ ಅಂತ ಉಪನ್ಯಾಸಕ ಪ್ರದೀಪ್ ಅಂಬೇಡ್ಕರ್ ಭಾವಚಿತ್ರ ಹಿಡಿದು ಕೂತು ಪ್ರತಿಭಟನೆ ನಡೆಸಿದ್ದರು. ಇತ್ತ ಪೊಲೀಸ್ ಠಾಣೆ ಬಳಿ ಬಂದ ಚಿಕ್ಕಬಳ್ಳಾಪುರ ವೃತ್ತ ನಿರೀಕ್ಷಕ ಸುದರ್ಶನ್ 50ಕ್ಕೂ ಹೆಚ್ಚು ಮಂದಿ ಪೊಲೀಸರೊಂದಿಗೆ ಪರಿಸ್ಥಿತಿ ನಿಭಾಯಿಸಿ, ಪ್ರದೀಪ್ ಈಶ್ವರ್ ನನ್ನ ವಶಕ್ಕೆ ಪಡೆದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv