ಕೊಪ್ಪಳ: ಕಾಲೇಜೊಂದರ ಅತಿಥಿ ಉಪನ್ಯಾಸಕನೊಬ್ಬ ಪ್ರೀತಿಸುವ ನಾಟಕವಾಡಿ ವಿದ್ಯಾರ್ಥಿನಿಗೆ ವಂಚಿಸಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಯಲಬುರ್ಗಾ ಮೂಲದ ಬಾಳಪ್ಪ ಹಡಪದ ವಂಚಿಸಿದ ಉಪನ್ಯಾಸಕನಾಗಿದ್ದು, ಹೊನ್ನತೆಮ್ಮ (20) ಮೋಸ ಹೋದ ವಿದ್ಯಾರ್ಥಿನಿ. ಕೊಪ್ಪಳ ನಗರದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕನಾಗಿರೋ ಬಾಳಪ್ಪ ಕಳೆದ ಮೂರು ವರ್ಷದಿಂದ ವಿದ್ಯಾರ್ಥಿನಿಯನ್ನು ಮದುವೆಯಾಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ.
ಇದನ್ನೂ ಓದಿ: ಮುಖ್ಯಶಿಕ್ಷಕನಿಂದ ಲೈಂಗಿಕ ಕಿರುಕುಳ ಆರೋಪ- ಸಹಶಿಕ್ಷಕಿ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನ
ಆದ್ರೆ ಇದೀಗ ಬಾಳಪ್ಪ ಬೇರೊಂದು ಮದುವೆಯಾಗಿದ್ದಾನೆ. ಹೀಗಾಗಿ ಇದೀಗ ವಿದ್ಯಾರ್ಥಿನಿ ಆತ ತನ್ನನ್ನು ಪಿಯುಸಿಯಲ್ಲಿದ್ದಾಗಿನಿಂದ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಅಂತ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ಸದ್ಯ ಮೋಸ ಮಾಡಿದ ಅತಿಥಿ ಉಪನ್ಯಾಸಕನ ವಿರುದ್ಧ ಕೊಪ್ಪಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.