ಜೈಪುರ: ಉದಯಪುರದ ಟೈಲರ್ ಕನ್ಹಯ್ಯ ಲಾಲ್ ಅವರ ಶಿರಚ್ಛೇದದ ಮೂಲಕ ನಡೆಸಿರು ಭೀಕರ ಹತ್ಯೆಯ ಬೆನ್ನಲ್ಲೇ ಇದೀಗ ಇನ್ನೊಂದು ಬೆದರಿಕೆ ಪತ್ರ ಸಿಕ್ಕಿದೆ. ಪತ್ರದಲ್ಲಿ ದೇವಾಲಯದ ಅರ್ಚಕರಿಗೆ ದೇವಾಲಯ ತೊರೆಯುವಂತೆ ಹೇಳಲಾಗಿದ್ದು, ಇಲ್ಲವೆಂದರೆ ಶಿರಚ್ಛೇದ ಮಾಡುವುದಾಗಿ ಬೆದರಿಕೆ ಒಡ್ಡಲಾಗಿದೆ.
ರಾಜಸ್ಥಾನದ ಭರತ್‌ಪುರ ಜಿಲ್ಲೆಯ ಎಂಎಸ್‌ಜೆ ಕಾಲೇಜು ಆವರಣದಲ್ಲಿ ನಿರ್ಮಿಸಲಾಗಿರುವ ದೇವಸ್ಥಾನದ ಅರ್ಚಕರಿಗೆ ಬೆದರಿಕೆ ಒಡ್ಡಲಾಗಿದೆ. ದೇವಸ್ಥಾನದಲ್ಲಿ ಪತ್ತೆಯಾದ ಬೆದರಿಕೆ ಪತ್ರದಲ್ಲಿ ದೇವಸ್ಥಾನದ ಅರ್ಚಕ ದೇವಾಲಯ ತೊರೆಯದಿದ್ದರೆ 10 ದಿನಗಳಲ್ಲಿ ತಲೆ ಕಡಿಯುವುದಾಗಿ ಬರೆಯಲಾಗಿದೆ. ನಮ್ಮ ಮಾತಿಗೆ ಮಣಿಯದೇ ಹೋದಲ್ಲಿ ಅದರ ಪರಿಣಾಮವನ್ನು ಅರ್ಚಕನೇ ಎದುರಿಸಬೇಕಾಗುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಗರ್ಭಪಾತ ಬೇಡ, ಮಗುವಿಗೆ ಜನ್ಮ ನೀಡಿ ದತ್ತು ಕೊಡಿ – ದೆಹಲಿ ಹೈಕೋರ್ಟ್
Advertisement
Advertisement
ಈ ವಿಷಯ ಬೆಳಕಿಗೆ ಬರುತ್ತಲೇ ಜಿಲ್ಲೆಯ ಹಿಂದೂ ಸಂಘಟನೆಗಳು ಭಾರೀ ಅಸಮಾಧಾನ ವ್ಯಕ್ತಪಡಿಸಿವೆ. ಭರತ್‌ಪುರದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಆರೋಪಿಗಳನ್ನು ಶೀಘ್ರವೇ ಹಿಡಿಯಬೇಕಾಗಿ ಜನರು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.
Advertisement
ಕಾಲೇಜಿನಲ್ಲಿರುವ ದೇವಸ್ಥಾನದ ಅರ್ಚಕರಿಗೆ ಈ ರೀತಿಯಾಗಿ ಸಾರ್ವಜನಿಕವಾಗಿ ಬೆದರಿಕೆ ಹಾಕಿರುವುದು ತಿಳಿದುಬರುತ್ತಲೇ ವಿದ್ಯಾರ್ಥಿ ಸಂಘಟನೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ಕಾಲೇಜು ಗೇಟ್‌ಗೆ ಬೀಗ ಹಾಕಿ, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದೆ. ಇದನ್ನೂ ಓದಿ: ಇನ್ಮುಂದೆ ಸರ್ಕಾರಿ ಕಚೇರಿಗಳಲ್ಲಿ ಫೋಟೋ, ವೀಡಿಯೋ ಮಾಡುವಂತಿಲ್ಲ
Advertisement
ಇದೀಗ ಸ್ಥಳೀಯ ಪೊಲೀಸ್ ಠಾಣೆ ಈ ಬಗ್ಗೆ ದೂರನ್ನು ಸ್ವೀಕರಿಸಿದ್ದು, ದೇವಾಲಯದ ಗೋಡೆಯಲ್ಲಿ ಅಂಟಿಸಿದ್ದ ಪತ್ರವನ್ನು ತೆಗೆದು, ತನಿಖೆ ಪ್ರಾರಂಭಿಸಿದೆ. ಪಕ್ಕದಲ್ಲಿಯೇ ಇದ್ದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.