ಬೆಂಗಳೂರು: ಸೆಂಟ್ರಲ್ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರೈ ಪತ್ನಿ ಪೋನಿ ವರ್ಮಾ ಅವರು ಪ್ರಧಾನಿ ನರೇಂದ್ರ ಮೋದಿಯವರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ನಿಮ್ಮ ಚುನಾವಣೆಗೋಸ್ಕರ ಚಿತ್ರೋದ್ಯಮವನ್ನು ಬಳಸಬೇಡಿ. ಹೀಗಾಗಿ ದಯಾಮಾಡಿ ಚಿತ್ರರಂಗವನ್ನು ಬಿಟ್ಟು ಬಿಡಿ ಎಂದು ಟ್ವೀಟ್ ಮಾಡುವ ಮೂಲಕ ಪೋನಿ ವರ್ಮಾ ಮೋದಿಯವರಲ್ಲಿ ಮನವಿ ಮಾಡಿಕೊಂಡಿದ್ದಾರೆ.
Advertisement
Advertisement
ಟ್ವಿಟ್ ನಲ್ಲೇನಿದೆ?:
ಮಿಸ್ಟರ್ ಮೋದಿಯವರೇ ನಿಮ್ಮ ಚುನಾವಣೆಗೋಸ್ಕರ ಚಿತ್ರೋದ್ಯಮವನ್ನು ಬಳಕೆ ಮಾಡಿಕೊಳ್ಳಬೇಡಿ. ನಿಮ್ಮ ಪರಿಸ್ಥಿತಿ ನನಗೆ ಅರ್ಥವಾಗುತ್ತದೆ. ಅವರಿಗೆ ಇಷ್ಟವಿಲ್ಲದಿದ್ದರೂ ನೀವು ಹೇಳಿದಾಗ ಅದನ್ನು ಇಲ್ಲ ಎನ್ನಲು ಅವರಿಗೆ ಮನಸ್ಸಾಗಲ್ಲ. ಇತ್ತೀಚೆಗೆ ನಟ ಅಕ್ಷಯ್ ಕುಮಾರ್ ಜೊತೆ ನಡೆದ ನಿಮ್ಮ ಸಂದರ್ಶನ ನೋಡಿ ನಿಜಕ್ಕೂ ನನನಗೆ ಅಚ್ಚರಿಯಾಯ್ತು. ಹೀಗಾಗಿ ಮುಂದೊಂದು ದಿನ ನೀವು ಖಾನ್ ಗಳ ಜೊತೆ ಕುಳಿತು ಸಂದರ್ಶನ ನಡೆಸಿದರೂ ಅಚ್ಚರಿ ಪಡಬೇಕಾಗಿಲ್ಲ. ಈ ಹಿನ್ನೆಲೆಯಲ್ಲಿ ದಯವಿಟ್ಟು ಬಿಟ್ಟು ಬಿಡಿ ಎಂದು ಬರೆದುಕೊಂಡಿದ್ದಾರೆ.
Advertisement
Advertisement
ಕೆಲದಿನಗಳ ಹಿಂದೆಯಷ್ಟೇ ನಟ ಅಕ್ಷಯ್ ಕುಮಾರ್ ಅವರು ರಾಜಕೀಯ ಹೊರತಾಗಿ ಸಂದರ್ಶನ ಮಾಡಿದ್ದರು. ಚುನಾವಣೆಯ ಹೊತ್ತಲ್ಲೇ ಮಾಡಿರುವ ಈ ಸಂದರ್ಶನ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಪ್ರಕಾಶ್ ರೈ ಪತ್ನಿ ದಯಮಾಡಿ ಸಿನಿಮಾ ರಂಗದವರನ್ನು ಬಿಟ್ಟು ಬಿಟಿ ಎಂದು ಮೋದಿಯವರಲ್ಲಿ ಕೇಳಿಕೊಂಡಿದ್ದಾರೆ.
Requesting Mr. PM to leave our film industry & don’t use them for your elections. I understand their position, even if they don’t want to, how can they say no to you. I won’t be surprised that the last final day you ll have interview done with one of the Khans!!! Plz spare them????????
— pony verma (@PonyPrakashraj) May 2, 2019