ನವದೆಹಲಿ: ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋ ಹಾಕಿದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಯವರನ್ನು ಅವರ ಮಗಳು ಸನಾ ಗಂಗೂಲಿಯವರು ಕಮೆಂಟ್ ಮಾಡುವ ಮೂಲಕ ಕಾಲೆಳೆದಿದ್ದಾರೆ.
ಬಿಸಿಸಿಐ ಅಧ್ಯಕ್ಷರಾಗಿ ನೇಮಕಗೊಂಡ ನಂತರ ಸೌರವ್ ಗಂಗೂಲಿ ಅವರು, ಭಾರತೀಯ ಕ್ರಿಕೆಟ್‍ನಲ್ಲಿ ಹಲವಾರು ಮಹತ್ವದ ಬದಲಾವಣೆಯನ್ನು ತರುತ್ತಿದ್ದಾರೆ. ಈಗ ಭಾರತದ ಮೊದಲ ಐತಿಹಾಸಿಕ ಹಗಲು ಮತ್ತು ರಾತ್ರಿ ಟೆಸ್ಟ್ ಪಂದ್ಯವನ್ನು ಆಯೋಜನೆ ಮಾಡಿ ಸೈ ಎನಿಸಿಕೊಂಡಿದ್ದಾರೆ.
Advertisement
https://www.instagram.com/p/B5QCRbEA_xO/
Advertisement
ಈಡನ್ ಗಾರ್ಡನ್ಸ್ ಮೈದಾನದಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಮೊದಲ ಐತಿಹಾಸಿಕ ಹಗಲು-ರಾತ್ರಿ ಟೆಸ್ಟ್ ಪಂದ್ಯವನ್ನು ಭಾರತ ಗೆದ್ದು ಇತಿಹಾಸ ನಿರ್ಮಿಸಿದೆ. ಭಾರತದ ಮೊದಲ ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನು ಒಂದು ಇನ್ನಿಂಗ್ಸ್ ಮತ್ತು 46 ರನ್ ಗಳಿಂದ ಗೆಲ್ಲುವ ಮೂಲಕ ಬಾಂಗ್ಲಾದೇಶದ ವಿರುದ್ಧದ 2 ಪಂದ್ಯಗಳ ಸರಣಿಯನ್ನು ಭಾರತ ಕ್ಲೀನ್‍ಸ್ವೀಪ್ ಮಾಡಿಕೊಂಡಿದೆ.
Advertisement
ಮೊದಲ ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನು ಯಶಸ್ವಿಯಾಗಿ ಆಯೋಜನೆ ಮಾಡಿ ಸಕ್ಸಸ್ ಕಂಡ ಸೌರವ್ ಗಂಗೂಲಿ ಅವರು, ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಒಂದು ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗೆ ಅವರು ಮಗಳು ಸನಾ ಗಂಗೂಲಿ, ನೀವು ಇಷ್ಟಪಡದೆ ಇರುವುದು ಏನು ಎಂದು ಕಮೆಂಟ್ ಮಾಡಿದ್ದಾರೆ.
Advertisement
ಇದಕ್ಕೆ ಸೌರವ್ ಗಂಗೂಲಿ ಅವರು ರೀಪ್ಲೇ ಮಾಡಿದ್ದು, ನಿನ್ನ ತರಲೆ ನನಗೆ ಇಷ್ಟವಾಗುವುದಿಲ್ಲ ಎಂದು ಬರೆದು ಕೋತಿ ಕಣ್ಣು ಮುಚ್ಚಿಕೊಂಡಿರುವ ಎಮೋಜಿ ಹಾಕಿದ್ದಾರೆ. ಇದಕ್ಕೆ ಮತ್ತೆ ಕಮೆಂಟ್ ಮಾಡಿರುವ ಸನಾ ಗಂಗೂಲಿ ಅವರು, ಅದನ್ನು ನಾನು ಕಲಿತ್ತಿದ್ದೆ ನಿಮ್ಮಿಂದ ಎಂದು ಹೇಳುವ ಮೂಲಕ ಅಪ್ಪ ಸೌರವ್ ಗಂಗೂಲಿ ಅವರನ್ನು ಕಾಲೆಳೆದಿದ್ದಾರೆ.
ಅಕ್ಟೋಬರ್ ನಲ್ಲಿ ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾದ ಗಂಗೂಲಿ ಅವರು, ಕೋಲ್ಕತ್ತಾದಲ್ಲಿ ಭಾರತದ ಮೊದಲ ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನು ಆಯೋಜನೆ ಮಾಡಿದರು. ಮೊದಲ ಟೆಸ್ಟ್ ಪಂದ್ಯವನ್ನು ಹಗಲಿನಲ್ಲೇ ಆಡಿದ ಬಾಂಗ್ಲಾದೇಶವನ್ನು ಎರಡನೇ ಪಂದ್ಯವನ್ನು ಹಗಲು ಮತ್ತು ರಾತ್ರಿ ಪಂದ್ಯವನ್ನಾಗಿ ಆಡಬೇಕು ಎಂದು ಮನವರಿಕೆ ಮಾಡಿಕೊಟ್ಟು ಯಶಸ್ವಿಯಾಗಿ ಮೊದಲ ಪಿಂಕ್ ಬಾಲ್ ಪಂದ್ಯವನ್ನು ಆಡುವಂತೆ ಮಾಡಿದರು.
ಇದೇ ಪಿಂಕ್ ಬಾಲ್ ಪಂದ್ಯಕ್ಕೆ ಗಂಗೂಲಿ ಅವರು ರಾಜಕೀಯ ವ್ಯಕ್ತಿಗಳು ಮತ್ತು ಮಾಜಿ ಕ್ರಿಕೆಟ್ ಆಟಗಾರರು ಹಾಗೂ ಕ್ರೀಡಾಪಟುಗಳನ್ನು ಕರೆಸಿ ಸನ್ಮಾನ ಕೂಡ ಮಾಡಿದರು. ಸೌರವ್ ಗಂಗೂಲಿ ಅವರ ಈ ಪ್ರಯತ್ನಕ್ಕೆ ಕ್ರೀಡಾಭಿಮಾನಿಗಳು ಉತ್ತಮ ಸಾಥ್ ನೀಡಿದ್ದು, ಪಿಂಕ್ ಬಾಲ್ ಪಂದ್ಯ ಯಶಸ್ವಿಯಾಗುವಂತೆ ಮಾಡಿದರು. ಪಂದ್ಯವಾಡಿದ ಆಡಿದ ಮೂರು ದಿನದಲ್ಲೂ ಕ್ರೀಡಾಂಗಣ ಭರ್ತಿಯಾಗಿದ್ದನ್ನು ಕಂಡ ಗಂಗೂಲಿ ಅವರು ಸಂತಸವನ್ನು ವ್ಯಕ್ತಪಡಿಸಿದ್ದರು.