ಭೋಪಾಲ್: `ಗಾಲ್ವಾನ್ ಹಾಯ್’ ಎಂದು ಟ್ವೀಟ್ ಮಾಡುವ ಮೂಲಕ ಭಾರತೀಯ ಸೇನೆಗೆ (Indian Army) ಅಪಮಾನ ಮಾಡಿದ್ದಾರೆಂದು ಟೀಕೆಗೆ ಗುರಿಯಾಗಿರುವ ನಟಿ ರಿಚಾ ಚಡ್ಡಾಗೆ (Richa Chadha) ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ (Narottam Mishra) ಚಳಿ ಬಿಡಿಸಿದ್ದಾರೆ. ಅಲ್ಲದೇ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.
@BediSaveena pic.twitter.com/EYHeS75AjS
— RichaChadha (@RichaChadha) November 24, 2022
ರೀಲ್ ಲೈಫ್ – ರಿಯಲ್ ಲೈಫ್‌ಗೂ ವ್ಯತ್ಯಾಸ ಇರೋದನ್ನ ಅರ್ಥ ಮಾಡಿಕೊಳ್ಳಬೇಕು. ಇದು ಸೇನೆಯೇ ಹೊರತು ಸಿನಿಮಾವಲ್ಲ ಎಂದು ನಟಿಯನ್ನು ತರಾಟೆಗೆ ತೆಗದುಕೊಂಡಿದ್ದಾರೆ. ಇದನ್ನೂ ಓದಿ: ಭಾರತೀಯ ಸೈನ್ಯಕ್ಕೆ ಅಪಮಾನ: ನಟಿ ರಿಚಾ ಚಡ್ಡಾ ಕ್ಷಮೆಯಾಚನೆ
.@RichaChadha जी आप सेना का सम्मान करना सीखें। यह सेना है, सिनेमा नहीं।
‘टुकड़े-टुकड़े’ वाली मानसिकता से प्रेरित आपके बयान से अनेकों राष्ट्रभक्तों को पीड़ा पहुंची है।
मेरे पास आपके खिलाफ़ शिकायत आई है। उचित कार्रवाई को लेकर हम कानून विशेषज्ञों से राय ले रहे हैं। pic.twitter.com/EVe8klXyCm
— Dr Narottam Mishra (@drnarottammisra) November 26, 2022
ಪಾಕ್ ಆಕ್ರಮಿತ ಕಾಶ್ಮೀರ ವಶಕ್ಕೆ ಸೇನೆ ಸಿದ್ಧವಾಗಿದೆ ಎಂದು ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ (General Dwivedi) ಹೇಳಿಕೆ ನೀಡಿದ್ದರು. ಅದನ್ನು ಅವಮಾನಿಸುವಂತೆ ರಿಚಾ ಟ್ವೀಟ್ ಮಾಡಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಯಿತು. ಅಕ್ಷಯ್ ಕುಮಾರ್ ಸೇರಿದಂತೆ ಹಲವರು ರಿಚಾ ನಡೆಯನ್ನು ಖಂಡಿಸಿದ್ದರು. ಇದರ ಬೆನ್ನಲ್ಲೇ ನಟಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದರು. ಇದರ ಹೊರತಾಗಿಯೂ ಮಿಶ್ರಾ ಅವರು ರಿಚಾ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಚಡ್ಡಾ ಹೇಳಿಕೆಯಿಂದ ಹಲವು ದೇಶಭಕ್ತರಿಗೆ ನೋವಾಗಿದೆ. ನಿಮ್ಮ ವಿರುದ್ಧ ದೂರುಗಳು ಕೇಳಿಬಂದಿದೆ. ಆದ್ದರಿಂದ ಸೂಕ್ತ ಕ್ರಮಕ್ಕಾಗಿ ಕಾನೂನು ತಜ್ಞರ ಅಭಿಪ್ರಾಯ ತೆಗೆದುಕೊಳ್ಳುತ್ತಿದ್ದೇವೆ ಎಂದು ಮಿಶ್ರಾ ಹೇಳಿದ್ದಾರೆ. ಇದನ್ನೂ ಓದಿ: ವಸಿಷ್ಠ ಸಿಂಹ ಜೊತೆ ಹಸೆಮಣೆ ಏರಲು ಸಜ್ಜಾದ ಹರಿಪ್ರಿಯಾ – ಸೂಪರ್ ಜೋಡಿ ಅಂದ್ರು ಫ್ಯಾನ್ಸ್
ರಿಚಾ ಜೀ ಅದು ಸಿನಿಮಾ (Cinema) ಅಲ್ಲ, ಸೈನ್ಯ. ಕೆಲವೊಮ್ಮೆ ಮೈನಸ್ 30 ರಿಂದ 45 ಡಿಗ್ರಿ ಸೆಲ್ಸಿಯಸ್ ಇರುತ್ತೆ. ಇನ್ನೂಮ್ಮೆ 45 ಡಿಗ್ರಿ ತಾಪಮಾನ ಇರುತ್ತೆ, ನಿಮಗೆ ಸಾಮರ್ಥ್ಯವಿದ್ದರೆ ಅಲ್ಲಿ ಉಳಿಯಲು ಪ್ರಯತ್ನಿಸಿ. ಆಗ ನಿಮಗೆ ರೀಲ್ ಲೈಫ್ – ರಿಯಲ್ ಲೈಫ್‌ಗೂ ವ್ಯತ್ಯಾಸ ತಿಳಿಯುತ್ತದೆ. ಸೈನಿಕರ ಶ್ರಮ ಮತ್ತು ತ್ಯಾಗ ಅರ್ಥವಾಗುತ್ತದೆ ಎಂದು ಹೇಳಿದ್ದಾರೆ. ಈ ವೀಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.