ಮುಂಬೈ: ಅನಿಲ್ ಕುಂಬ್ಳೆ ಟೀಂ ಇಂಡಿಯಾದ ಕೋಚ್ ಹುದ್ದೆಗೆ ರಾಜೀನಾಮೆ ನೀಡಲು ವಿರಾಟ್ ಕೊಹ್ಲಿ ಬಿಸಿಸಿಐಗೆ ಕಳುಹಿಸಿದ ಇಮೇಲ್ ಕಾರಣ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಕೊಹ್ಲಿ ಬಿಸಿಸಿಐ ಸಮಿತಿಗೆ ಕಳುಹಿಸಿದ್ದ ಇ-ಮೇಲ್ ಹಾಗೂ ಕೆಲವು ಸಂದೇಶಗಳು ಲಿಕ್ ಆಗಿವೆ. ಅಂದಹಾಗೇ ಅನಿಲ್ ಕುಂಬ್ಳೆ ಕಳೆದ ವರ್ಷ ತಂಡದ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ್ದರು. ಆದರೆ ಕುಂಬ್ಳೆ ಅವಧಿಯಲ್ಲಿ ಆಡಿದ್ದ 17 ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಒಂದು ಪಂದ್ಯದಲ್ಲಿ ಮಾತ್ರ ಸೋಲುಂಡಿತ್ತು. ಕುಂಬ್ಳೆ ಕೋಚಿಂಗ್ ನಲ್ಲಿ ತಂಡ ಉನ್ನತ ಮಟ್ಟದಲ್ಲಿ ಪ್ರದರ್ಶನ ನೀಡುತ್ತಿದ್ದರೂ ಕೋಚ್ ಅವಧಿ ಮುಗಿಯುತ್ತಿದಂತೆ ರಾಜೀನಾಮೆ ನೀಡಿ ಹೊರಬಂದಿದ್ದರು.
Advertisement
Advertisement
ಸದ್ಯ ಮಾಧ್ಯಮ ವರದಿಯಲ್ಲಿ ಕುಂಬ್ಳೆ ಕುರಿತು ನಾಯಕ ವಿರಾಟ್ ಕೊಹ್ಲಿ ಸತತವಾಗಿ ಬಿಸಿಸಿಐ ಮುಖ್ಯ ಕಾರ್ಯದರ್ಶಿ ರಾಹುಲ್ ಜೋಹರಿ ಅವರಿಗೆ ಸಂದೇಶ ರವಾನಿಸುತ್ತಿದ್ದರು. ಆ ಬಳಿಕ ಕೊಹ್ಲಿಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ರವಿಶಾಸ್ತ್ರಿ ಅವರು ಕೋಚ್ ಆಗಿ ನೇಮಕಗೊಂಡಿದ್ದರು.
Advertisement
ಸುಪ್ರೀಂ ನೇಮಕ ಮಾಡಿದ್ದ ಕ್ರಿಕೆಟ್ ಸಲಹಾ ಸಮಿತಿಯಲ್ಲಿದ್ದ ಸಚಿನ್, ವಿವಿಎಸ್ ಲಕ್ಷ್ಮಣ್, ಸೌರವ್ ಗಂಗೂಲಿ ಅವರು ಕುಂಬ್ಳೆ ಅವರನ್ನು ಶಿಫಾರಸ್ಸು ಮಾಡಿದ್ದರು. ಅಲ್ಲದೇ ಒಂದು ವರ್ಷದ ಕಾಲ ತಂಡದ ಕೋಚ್ ಆಗಿದ್ದ ಕುಂಬ್ಳೆ ಮುಂದಾಳತ್ವದಲ್ಲಿ ಟೀಂ ಇಂಡಿಯಾ ಟೆಸ್ಟ್ ಕ್ರಿಕೆಟಿನಲ್ಲಿ ನಂ.1 ಪಟ್ಟಕ್ಕೆರಿತ್ತು. ಕುಂಬ್ಳೆ ಕೂಡ ತಮ್ಮ ರಾಜೀನಾಮೆ ಬಳಿಕ ತಂಡದ ನಾಯಕ ಹಾಗೂ ತಮ್ಮ ಶೈಲಿ ಹೊಂದಾಣಿಕೆ ಆಗುತ್ತಿಲ್ಲ ಎಂದು ತಿಳಿಸಿದ್ದರು.
Advertisement
ಈ ಹಿಂದೆ ಕೂಡ ಅನಿಲ್ ಕುಂಬ್ಳೆ ರಾಜೀನಾಮೆ ಕುರಿತು ಪ್ರತಿಕ್ರಿಯೆ ನೀಡಿದ್ದ ಟೀಂ ಇಂಡಿಯಾ ಮಾಜಿ ಆಟಗಾರ ಬಿಶನ್ ಸಿಂಗ್, ತಂಡದಲ್ಲಿ ಒಬ್ಬರ ಮಾತು ಮಾತ್ರ ನಡೆಯುತ್ತಿದ್ದು, ಅದು ನಾಯಕ ವಿರಾಟ್ ಕೊಹ್ಲಿ ಅವರದ್ದು ಮಾತ್ರ. ಅವರು ತಂಡದಲ್ಲಿ ಒಂದು ರೀತಿಯಲ್ಲಿ ರಾಜನಂತೆ ವರ್ತಿಸುತ್ತಿದ್ದಾರೆ. ಅದ್ದರಿಂದಲೇ ಕುಂಬ್ಳೆ ರಾಜೀನಾಮೆ ನೀಡಿದ್ದಾರೆ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv