ಅಂಬರೀಶ್ ಅವರ ನಂತರ ಕನ್ನಡ ಚಿತ್ರರಂಗದಲ್ಲಿ ಸಮರ್ಥ ನಾಯಕತ್ವದ ಕೊರತೆ ಎದ್ದು ಕಾಣುತ್ತಿದೆ. ಈ ಬಗ್ಗೆ ಆಗಾಗ ಕೂಗು ಕೇಳಿಬರುತ್ತಲೇ ಇದೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಅಂಬರೀಶ್ ಅವರವರೆಗೂ ಸಮರ್ಥವಾಗಿ ನಾಯಕತ್ವ ವಹಿಸಿಕೊಂಡು ಮುನ್ನಡೆಸಿಕೊಂಡು ಬರಲಾಗಿದೆ. ಅಂಬರೀಶ್ ಅವರ ಕಾಲನಂತರ ಲೀಡರ್‌ಶಿಪ್ ಕೊರತೆ ಎದ್ದು ಕಾಣ್ತಿದೆ.
ಈ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಗಳು ನಡಿದಿವೆ. ಕನ್ನಡ ಚಿತ್ರರಂಗದ ಹಿರಿಯ ಕಲಾವಿದರು ಈ ಬಗ್ಗೆ ಮಾತಾಡುತ್ತಿದ್ದಾರೆ. ಒಬ್ಬ ಸೂಕ್ತ ವ್ಯಕ್ತಿ ಕನ್ನಡ ಚಿತ್ರರಂಗದ ನಾಯಕತ್ವವನ್ನ ವಹಿಸಿಕೊಳ್ಳಬೇಕು ಅಂತಾ ಮಾತುಕತೆ ನಡೆಯುತ್ತಿವೆ ಎಂದು ನಟಿ ಹಾಗೂ ಮಾಜಿ ಸಂಸದೆ ಸುಮಲತಾ ಅಂಬರೀಷ್ ಹೇಳಿದ್ದಾರೆ.ಇದನ್ನೂ ಓದಿ:ರೆಬೆಲ್ ಸ್ಟಾರ್ ಅಂಬರೀಶ್ ಪುಣ್ಯಸ್ಮರಣೆ – ಸಮಾಧಿಗೆ ಕುಟುಂಬಸ್ಥರಿಂದ ಪೂಜೆ
ರೆಬೆಲ್‌ಸ್ಟಾರ್ ಅಂಬರೀಷ್ ಅವರ 7ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಕಂಠೀರವ ಸ್ಟುಡಿಯೋದಲ್ಲಿರುವ ಅಂಬರೀಷ್ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಬಳಿಕ ಮಾಧ್ಯಮಗಳಿಗೆ ಮಾತ್ನಾಡಿರುವ ಸುಮಲತಾ, ಅಂಬರೀಶ್ ಕಾಲವಾದ ಬಳಿಕ ಚಿತ್ರರಂಗದಲ್ಲಿ ಲೀಡರ್‌ಶಿಪ್ ಯಾರೂ ವಹಿಸಿಕೊಂಡಿಲ್ಲ ಎಂಬರ್ಥದಲ್ಲಿ ಹೇಳಿದ್ದಾರೆ. ಇದರ ಜೊತೆಗೆ ಸಕ್ರೀಯ ರಾಜಕಾರಣದ ಬಗ್ಗೆ ಮಾತಾಡಿರುವ ಸುಮಲತಾ ಕ್ಷೇತ್ರದ ಜನರ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದೇನೆ ಎಂದಿದ್ದಾರೆ.
