ಬೆಂಗಳೂರು: ನಮ್ಮ ಜೊತೆ ಬನ್ನಿ…ಇಲ್ಲ ಮಠ ಬಿಡಿ…! ಇಂಥದೊಂದು ಘೋಷ ವಾಕ್ಯ ಇಟ್ಟುಕೊಂಡು ಲಿಂಗಾಯತ ಮುಖಂಡರು ಹೋರಾಟ ಆರಂಭಿಸಲು ತೀರ್ಮಾನಿಸಿದ್ದಾರೆ.
ಪ್ರತ್ಯೇಕ ಧರ್ಮದ ವಿಚಾರವಾಗಿ ಅಕ್ಟೋಬರ್ 4ರಂದು ಮತ್ತೆ ಸಭೆ ಸೇರಲು ಲಿಂಗಾಯತ – ವೀರಶೈವ ಮುಖಂಡರು ತೀರ್ಮಾನಿಸಿದ್ದಾರೆ. ಸಚಿವ ಶರಣ್ ಪ್ರಕಾಶ್ ಪಾಟೀಲ್ ಕರೆದಿರೋ ಈ ಸಭೆಯಲ್ಲಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, ವಿನಯ್ ಕುಲಕರ್ಣಿ, ಬಸವರಾಜ್ ಹೊರಟ್ಟಿ ಸೇರಿದಂತೆ ಎಲ್ಲಾ ಲಿಂಗಾಯಿತ ಮುಖಂಡರು ಭಾಗವಹಿಸಲು ತೀರ್ಮಾನಿಸಿದ್ದಾರೆ.
Advertisement
ಇದಲ್ಲದೇ ಪ್ರತ್ಯೇಕ ಧರ್ಮಕ್ಕೆ ಒಪ್ಪಿಗೆ ನೀಡದೇ ಇದ್ರೆ ನಮ್ಮ ಪಾಡಿಗೆ ನಾವು, ನಿಮ್ಮ ಪಾಡಿಗೆ ನೀವು ಅನ್ನೋ ಸಂದೇಶ ರವಾನಿಸಲು ಕೂಡ ನಿರ್ಧರಿಸಿದ್ದಾರೆ. ಪದೇ ಪದೇ ಮೀಟಿಂಗ್ ಸೇರಿ ಗೊಂದಲ ಸೃಷ್ಟಿಯಾಗೋದನ್ನು ತಡೆಯಲು ಲಿಂಗಾಯತ ಮುಖಂಡರು ಈ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ.
Advertisement
ಲಿಂಗಾಯಿತ ಪ್ರತ್ಯೇಕ ಧರ್ಮದ ವಿಚಾರಕ್ಕೆ ಬಿಜೆಪಿ ಶಾಸಕರು ಪರೋಕ್ಷವಾಗಿ ಬೆಂಬಲಕ್ಕೆ ನಿಂತಿದ್ದಾರೆ ಎನ್ನಲಾಗಿದೆ. ಧರ್ಮದ ವಿಚಾರವಾಗಿ ತುಟಿಕ್‍ಪಿಟಿಕ್ ಅನ್ನ ಬಾರದು ಅನ್ನೋ ಆರ್‍ಎಸ್‍ಎಸ್ ಕಟ್ಟಾಜ್ಞೆ ಒಂದು ಕಡೆಯಾದ್ರೇ ಹೇಗಾದ್ರು ಸರಿ ನಮ್ಮ ಸಮುದಾಯ ಮತ್ತು ಸಮುದಾಯದ ಮತಗಳನ್ನು ಉಳಿಸಿಕೊಳ್ಳಬೇಕು ಅಂತ ಬಿಜೆಪಿ ಶಾಸಕರು ಶತಾಯಗತಾಯ ಹೋರಾಟಕ್ಕೆ ನಿಂತಿದ್ದಾರಂತೆ.
Advertisement
Advertisement
ಲಿಂಗಾಯತ ಸಮಾವೇಶ ಎಲ್ಲಿ ನಡೆದರೂ ಕೂಡ ಪರೋಕ್ಷವಾಗಿ ಬಿಜೆಪಿ ಶಾಸಕರು ಸಾರಿಗೆ ವ್ಯವಸ್ಥೆ ಮಾಡಿಕೊಡ್ತಾ ಇದ್ದಾರೆ ಎನ್ನಲಾಗಿದೆ. ಪ್ರತಿ ಸಮಾವೇಶಕ್ಕೂ 30 ರಿಂದ 40 ಬಸ್‍ಗಳಲ್ಲಿ ತಮ್ಮ ಸಮುದಾಯದ ಮುಖಂಡರನ್ನು ಕಳುಹಿಸಿಕೊಡ್ತಿದ್ದು, ಈ ವಿಚಾರ ಎಲ್ಲಿಯೂ ಕೂಡ ಬಹಿರಂಗಪಡಿಸಬೇಡಿ. ಉಳಿದಕ್ಕೆ ನಮ್ಮ ಬೆಂಬಲವಿದೆ ಅನ್ನೋ ಸಂದೇಶ ಲಿಂಗಾಯತ ಮುಖಂಡರಿಗೆ ರವಾನಿಸಿದ್ದಾರೆ ಎಂದು ಹೇಳಲಾಗಿದೆ. ಬಿಜೆಪಿ ಶಾಸಕರ ಈ ನಡೆ ಬಿಎಸ್‍ವೈ ಮತ್ತು ಶೆಟ್ಟರ್ ಅವರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.