ಕೊಪ್ಪಳ: ಕಾಂಗ್ರೆಸ್‍ನವರಿಗೆ ಕೆಲಸದ ಕೊರತೆ ಇದೆ, ಹಾಗಾಗಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಲಕ್ಷ್ಮಣ ಸವದಿ ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ ಶಿವಕುಮಾರ್ ಅವರು ನೀರಾವರಿ ಮಂತ್ರಿಯಾಗಿದ್ದಾಗ ಕೆಲಸ ಮಾಡಲಿಲ್ಲ. ಈಗ ಪಾದಯಾತ್ರೆ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದ ಅವರು, ಮಹಾದಾಯಿ ವಿಚಾರದ ಬಗ್ಗೆ ಕಾಂಗ್ರೆಸ್‍ನವರು ನಮಗೆ ಹೇಳುವ ಅವಶ್ಯಕತೆಯಿಲ್ಲ. ಮಹಾದಾಯಿ ನಮ್ಮ ಬದ್ಧತೆಯಾಗಿದೆ. ಅದಕ್ಕಾಗಿ ನಾವು ಮಹಾದಾಯಿ ಕೆಲಸ ಮಾಡೇ ಮಾಡುತ್ತೇವೆ ಎಂದರು.
Advertisement
Advertisement
ಕಾಂಗ್ರೆಸ್‍ನವರಿಗೆ ಸ್ವಲ್ಪ ಬಿಪಿ, ಶುಗರ್ ಜಾಸ್ತಿಯಾಗಿದೆ. ನಾಲ್ಕು ವರ್ಷದಿಂದ ಕೂತಲ್ಲೇ ಕೂತಿದ್ದಾರೆ. ಹೀಗಾಗಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಇದನ್ನೂ ಓದಿ: ಶುಭ ಭಾನುವಾರ, ಶುಭ ಗಳಿಗೆಯಲ್ಲಿ ಇಂದು ಪಾದಯಾತ್ರೆಗೆ ಚಾಲನೆ: ಡಿಕೆಶಿ
Advertisement
Advertisement
ಇದೇ ವೇಳೆ ಶಿವಮೊಗ್ಗದಲ್ಲಿ ನಡೆದ ಕೊಲೆಗೆ ಪ್ರತಿಕ್ರಿಯಿಸಿ, ಹರ್ಷ ಕೊಲೆ ಹಿಂದೆ ಇರುವ ಕಾಣದ ಕೈಗಳು ಶೀಘ್ರದಲ್ಲಿ ಬಯಲಾಗಲಿದೆ. ಈಗಾಗಲೇ ಆರೋಪಿಗಳ ಬಂಧನ ಮಾಡಲಾಗಿದೆ. ಕೊಲೆಗೆ ಸಂಚು ರೂಪಿಸಿದವರ ಕುರಿತು ಮಾಹಿತಿ ಹೊರಬರಲಿದೆ. ಹರ್ಷನ ಕುಟುಂಬಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡತ್ತೇವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಚಕ್ಕಲಿ, ನಿಪ್ಪಟ್ಟು ಮಾರಾಟದಿಂದ ಬಂದ ಹಣ ಸಾಲುತ್ತಿಲ್ಲವೆಂದು ಗಾಂಜಾ ಮಾರಿ ಸಿಕ್ಕಿಬಿದ್ರು
ಕಾಂಗ್ರೆಸ್ ಸೇರುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಶಾಸಕನಾಗಬೇಕು, ವಿಧಾನಪರಿಷತ್ ಸದಸ್ಯನಾಗಿರೋದು ಎನ್ನುವುದು ನನ್ನ ವೈಯಕ್ತಿಕ ಅಲ್ಲ. ಅದು ಪಕ್ಷದ ಸೂಚನೆಯಾಗಿದೆ. ನಾನು ಮಾತ್ರ ಕೊಪ್ಪಳ ಜಿಲ್ಲೆಯಿಂದ ಸ್ಪರ್ಧೆ ಮಾಡಲ್ಲ. ಬೆಳಗಾವಿ ಜಿಲ್ಲೆಯಿಂದಾನೇ ಸ್ಪರ್ಧೆ ಮಾಡುತ್ತೇನೆ. ನಾನು ನನ್ನ ಜೀವದ ಕೊನೆ ಉಸಿರು ಇರುವವರೆಗೂ ಬಿಜೆಪಿಯಲ್ಲಿ ಇರುತ್ತೇನೆ ಎಂದು ಹೇಳಿದರು.