ಚಿಕ್ಕೋಡಿ: ತಪ್ಪು ಕಲ್ಪನೆಗಳಿಂದ ಭಾರತ ಬಂದ್ ಮಾಡಲಾಗಿದೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಬೆಳಗಾವಿಯಲ್ಲಿ ಹೇಳಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕೃಷಿ ಕಾನೂನು ರೈತರಿಗೆ ಅನುಕೂಲ ಮಾಡಲೆಂದು ಸರ್ಕಾರ ರೂಪಿಸಿದೆ. ದಲ್ಲಾಳಿಗಳಿಗೆ ಬಾರಿ ನಷ್ಟವಾಗುತ್ತಿರುವ ಕಾರಣ ರೈತರಿಗೆ ತಪ್ಪು ಸಂದೇಶ ಸಾರುತ್ತಿದ್ದಾರೆ. 2008ರಿಂದ ಕರ್ನಾಟಕದಲ್ಲಿ ಈ ಕಾನೂನು ಜಾರಿ ಇದೆ. ಕೇಂದ್ರ ಸರ್ಕಾರ ಈಗಷ್ಟೇ ಕಾನೂನು ತಿದ್ದುಪಡಿ ಮಾಡಿದೆ ಎಂದಿದ್ದಾರೆ. ಇದನ್ನೂ ಓದಿ: ಮಗಳ ಹೆಸರು ರಿವೀಲ್ ಮಾಡಿದ ಯವರತ್ನ ನಟಿ ಸಯೇಷಾ
Advertisement
Advertisement
ಹರಿಯಾಣ, ಉತ್ತರ ಪ್ರದೇಶ, ಜಾಖರ್ಂಡ್ ರಾಜ್ಯದಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಾಗಿದೆ. ರೈತರನ್ನು ಅವರು ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿದ್ದಾರೆ. ಅವರಿಗೆ ಭಾರಿ ನಷ್ಟ ಸಂಭವಿಸುವುದರಿಂದ ಕೃಷಿ ಕಾನೂನು ಬಗ್ಗೆ ತಪ್ಪು ಸಂದೇಶ ಸಾರಲಾಗುತ್ತಿದೆ. ರೈತರಿಗೆ ಅನ್ಯಾಯವಾಗುತ್ತದೆ ಎನ್ನುವರು ಬಹಿರಂಗ ಸವಾಲಕ್ಕೆ ಬರಲಿ, ಯಾರಾದರೂ ಸಾಬೀತು ಪಡಿಸಿದರೆ ಕಾನೂನನ್ನು ವಾಪಸ್ ಪಡೆಯುತ್ತೇವೆ ಎಂದು ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಲಕ್ಷ್ಮಣ್ ಸವದಿ ಸವಾಲು ಹಾಕಿದ್ದಾರೆ.