ನವದೆಹಲಿ: ಮದ್ಯ ಸೇವಿಸಿ ವಾಹನ ಚಾಲನೆ ಮಾಡಿದರೆ ವಿಧಿಸುವ ದಂಡದ ಮೊತ್ತವನ್ನು ಕಡಿಮೆ ಮಾಡದಂತೆ ಸಾರ್ವಜನಿಕರಿಂದ ಅಭಿಪ್ರಾಯ ಬಂದಿದೆ. ಈ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದು ಸಾರಿಗೆ ಸಚಿವ, ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಅವರು, ಸಂಚಾರ ನಿಯಮ ಉಲ್ಲಂಘಿಸುವ ವಾಹನ ಚಾಲಕರು ಹಾಗೂ ಸವಾರರ ಮೇಲೆ ವಿಧಿಸುವ ದಂಡವನ್ನು ಕಡಿಮೆ ಮಾಡಲಾಗುವುದು. ಈ ವಿಚಾರವಾಗಿ ಪ್ರಕ್ರಿಯೆ ನಡೆದಿದ್ದು, ಮೂರು ದಿನಗಳಲ್ಲಿ ಎಲ್ಲವೂ ಸರಿ ಹೋಗುತ್ತದೆ. ಬಳಿಕ ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸುತ್ತೇವೆ ಎಂದು ತಿಳಿಸಿದರು.
Advertisement
ಗುಜರಾತ್ ಮಾದರಿಯಲ್ಲಿ ರಾಜ್ಯದಲ್ಲಿಯೂ ದಂಡ ಕಡಿಮೆ ಮಾಡಲಾಗುವುದು. ಈ ಸಂಬಂಧ ಗುಜರಾತ್ ಸರ್ಕಾರವು ಶುಕ್ರವಾರ ಅಧಿಸೂಚನೆ ಹೊರಡಿಸಿದೆ. ಆ ಆದೇಶವನ್ನು ತರಿಸಿಕೊಂಡಿದ್ದೇವೆ. ಅದರ ಮೇಲೆ ಕಾನೂನು ಇಲಾಖೆ ಸಲಹೆ ಪಡೆಯಲಾಗುವುದು. ಆದರೆ ಡ್ರಂಕ್ ಅಂಡ್ ಡ್ರೈವ್ಗೆ ದಂಡ ಕಡಿಮೆ ಮಾಡದಿರುವ ಬಗ್ಗೆ ಕೂಡ ಚರ್ಚೆ ಮಾಡುತ್ತೇವೆ. ಕುಡಿದು ಗಾಡಿ ಚಲಾಯಿಸುವವರ ಬಗ್ಗೆ ಕರುಣೆ ಯಾಕೆ ಎಂದು ಪ್ರಶಿಸಿದ್ದಾರೆ.
Advertisement
Advertisement
ಮದ್ಯ ಸೇವಿಸಿ ವಾಹನ ಓಡಿಸುತ್ತಿದ್ದ ಸವಾರರು ಹಾಗೂ ಚಾಲಕರಿಗೆ ಈ ಹಿಂದೆ 2,500 ರೂ. ದಂಡ ವಿಧಿಸಲಾಗುತ್ತಿತ್ತು. ಆದರೆ ಸೆಪ್ಟೆಂಬರ್ 4ರಿಂದ ಜಾರಿಗೆ ಬಂದ ಆದೇಶದ ಪ್ರಕಾರ ಈ ದಂಡದಲ್ಲಿ 7,500 ರೂ. ಹೆಚ್ಚಳವಾಗಿದೆ. ಹೀಗಾಗಿ ಡ್ರಂಕ್ ಅಂಡ್ ಡ್ರೈವ್ ಕೇಸ್ನಲ್ಲಿ ಸಿಕ್ಕಿಬಿದ್ದ ಚಾಲಕರು ಹಾಗೂ ಸವಾರರು ಒರೋಬ್ಬರಿ 10 ಸಾವಿರ ರೂ. ದಂಡ ಪಾವತಿಸಬೇಕಾಗುತ್ತದೆ.
Advertisement
ಹಳೆಯ ದಂಡ:
ಹಳೆಯ ದಂಡದಲ್ಲಿ ರಸ್ತೆ ನಿಯಮ ಉಲ್ಲಂಘನೆಗೆ 100 ರೂ., ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಚಾಲನೆಗೆ 100 ರೂ, ಪರವಾನಿಗೆ ಇಲ್ಲದೆ ವಾಹನ ಚಾಲನೆಗೆ 1,000 ರೂ., ಡ್ರೈವಿಂಗ್ ಲೈಸೆನ್ಸ್ ಇಲ್ಲದಿದ್ದರೆ 500 ರೂ. ಹಾಗೂ ಅತಿವೇಗಕ್ಕೆ 400 ರೂ. ವಿಧಿಸಲಾಗುತ್ತಿತ್ತು. ಜೊತೆಗೆ ಮದ್ಯ ಸೇವಿಸಿ ವಾಹನ ಚಾಲನೆಗೆ 2,500 ರೂ., ವೇಗ ಮತ್ತು ರೇಸಿಂಗ್ಗೆ 500 ರೂ., ಸೀಟ್ ಬೆಲ್ಟ್ 100 ರೂ. ಹಾಗೂ ಇನ್ಸೂರೆನ್ಸ್ ಇಲ್ಲದಿದ್ದರೆ 1000 ರೂ. ದಂಡದ ಮೊತ್ತವಿತ್ತು.