ಚಿಕ್ಕೋಡಿ: ಯತ್ನಾಳಷ್ಟು ನಾನು ದೊಡ್ಡ ವ್ಯಕ್ತಿಯೂ ಅಲ್ಲ, ಅವರಷ್ಟು ಬುದ್ಧಿವಂತಿಕೆಯೂ ನನಗಿಲ್ಲ ಎಂದು ಮಾಜಿ ಸಚಿವ ಲಕ್ಷ್ಮಣ ಸವದಿ (Laxman Savadi) ತಿಳಿಸಿದರು.
ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ (Arun Singh) ನೇತೃತ್ವದಲ್ಲಿ ಚಿಕ್ಕೋಡಿಯ ಕೇಶವ ಕಲಾಭವನದಲ್ಲಿ ಬಿಜೆಪಿ (BJP) ಸಂಕಲ್ಪ ಯಾತ್ರೆ ನಡೆಯಿತು. ಸಭೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಕಾರ್ಯಕರ್ತರು ಸಂಕಲ್ಪ ಮಾಡಬೇಕು ಎಂದು ಸಮಾವೇಶದಲ್ಲಿ ಕರೆ ನೀಡಲಾಯಿತು. ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತಾಡಿದ ಅವರು, ಯತ್ನಾಳ್ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ರಾಜಕಾರಣ ಮಾಡಿದವರಾಗಿದ್ದಾರೆ. ಅವರ ಬಗ್ಗೆ ನಾನು ಚರ್ಚೆ ಮಾಡುವುದು ಹಾಗೂ ಹೇಳಿಕೆಗಳನ್ನು ನೀಡುವುದು ಸಮಂಜಸವಲ್ಲ ಎಂದು ರಾಜ್ಯ ನಾಯಕರ ಬಗ್ಗೆ ಯತ್ನಾಳ ಹಗುರವಾಗಿ ಮಾತಾಡುವ ಕುರಿತು ಪ್ರತಿಕ್ರಿಯೆಗೆ ನಿರಾಕರಿಸಿದರು.
Advertisement
Advertisement
ಬಿಜೆಪಿ ಸಂಕಲ್ಪ ಯಾತ್ರೆ ಬಗ್ಗೆ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಜೆಡಿಎಸ್ ಪ್ರಬಲವಾಗಿರುವ ಸುಮಾರು 100 ಕ್ಷೇತ್ರಗಳನ್ನು ಗುರುತಿಸಿ ಕೆಲಸ ಮಾಡುವ ಉದ್ದೇಶವನ್ನು ಹೊಂದಿದ್ದೇವೆ. ಅಲ್ಲದೇ ಆ ಕ್ಷೇತ್ರವನ್ನೇ ಹೆಚ್ಚು ಟಾರ್ಗೇಟ್ ಮಾಡಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಉದ್ದೇಶವನ್ನು ಹೊಂದಿದ್ದೇವೆ. ಆ ನಿಟ್ಟಿನಲ್ಲಿ ಈಗಾಗಲೇ ಕೆಲಸ ಮಾಡಲಾಗುತ್ತದೆ. ಯಮಕನಮರಡಿ, ಗ್ರಾಮೀಣ ಹಾಗೂ ಚಿಕ್ಕೋಡಿ ಸೇರಿದಂತೆ ಎಲ್ಲ ಕಡೆಗಳಲ್ಲೂ ಸಹ ಓಡಾಡಿ ಪಕ್ಷದ ಕಾರ್ಯಕರ್ತರಿಗೆ ಧೈರ್ಯ ತುಂಬುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ರಾಮಲಿಂಗಾರೆಡ್ಡಿ BJP ಸೇರೋಕೆ ಬಂದಿದ್ರು: ಈಶ್ವರಪ್ಪ
Advertisement
Advertisement
ಬೆಳಗಾವಿಯಲ್ಲಿ ಅರುಣ್ ಸಿಂಗ್ ಅವರು ರಮೇಶ್ ಜಾರಕಿಹೊಳಿ ಹಾಗೂ ಲಕ್ಷ್ಮಣ ಸವದಿ ಅವರನ್ನು ಪ್ರತ್ಯೇಕವಾಗಿ ಕರೆಸಿಕೊಂಡು ಸಭೆ ನಡೆಸಿರುವ ವಿಚಾರವಾಗಿ ಖಾರವಾಗಿ ಪ್ರತಿಕ್ರಿಯಿಸಿ, ಅಥಣಿಯಲ್ಲಿ ನನಗೆ 2 ಕಾರ್ಯಕ್ರಮಗಳಿತ್ತು. ಬೇರೆ ಬೇರೆ ಕಡೆ ಓಡಾಡುತ್ತಿದ್ದೇನೆ. ಹೀಗಾಗಿ ಬರಲು ತಡವಾಯಿತು. ಬಿಜೆಪಿಯ ಛತ್ರದ ಕೆಳಗೆ ಬರುವ ಎಲ್ಲರೂ ಸಹ ಒಂದೇ ಕುಟುಂಬದ ಸದಸ್ಯರಿದ್ದ ಹಾಗೆ ಎಂದರು. ಇದನ್ನೂ ಓದಿ: ಮಳೆಯಿಂದ ಅವಾಂತರ – ಡಿಸಿ ಕಚೇರಿ ಗೇಟ್ ಮುರಿದು ಒಳನುಗ್ಗಿದ ಬೀಡಿ ಕಾಲೋನಿ ನಿವಾಸಿಗಳು