ಬೆಂಗಳೂರು: ನಗರದಲ್ಲಿ ಸಿಕ್ಕ ಸಿಕ್ಕವರ ಆಸ್ತಿಗೆ ಬೇಲಿ ಹಾಕುವ ದೊಡ್ಡ ಗ್ಯಾಂಗೇ ಇದೆ. ಅದರಲ್ಲೂ ಬಿಡಿಎ (BDA) ಆಸ್ತಿ ಲಪಟಾಯಿಸುವವರ ವಿರುದ್ಧ ಎಸ್‌ಪಿ ಲಕ್ಷ್ಮಿ ಗಣೇಶ್ ಸಮರ ಸಾರಿದ್ದಾರೆ. ವಕೀಲ ಪರಮೇಶ್ವರ್ (Lawyer Parameshwar) ಅವರ ಸರ್ಕಾರಿ ಆಸ್ತಿ (Government Property) ಉಳಿಸುವ ಸಂಕಲ್ಪದಿಂದ ಇಂದು ನೂರಾರು ಕೋಟಿಯ ಆಸ್ತಿ ಮತ್ತೆ ಬಿಡಿಎ ಕೈ ಸೇರಿದೆ.
ಮಾಳಗಳ ಗ್ರಾಮದ ಸರ್ವೆ ನಂಬರ್ 9 ರಲ್ಲಿ 7 ಎಕರೆ ಜಾಗವನ್ನ ಈ ಹಿಂದೆ ನಾಗರಬಾವಿ ಬಿಡಿಎ 2ನೇ ಹಂತ ನಿರ್ಮಾಣ ಮಾಡಲು ಅಂತಿಮ ಅಧಿಸೂಚನೆ ಹೊರಡಿಸಿದ್ದರೂ ಸಹ ಅಕ್ರಮ ದಾಖಲಾತಿಗಳನ್ನು ಸೃಷ್ಟಿಸಿಕೊಂಡು ಮಣಿಚೆಟ್ಟಿ, ಗೀತಾ ಮಣಿಚೆಟ್ಟಿ, ಮಂಜುನಾಥ್ ಮಣಿಚೆಟ್ಟಿ, ಮತ್ತು ಇತರರು ಸೇರಿಕೊಂಡು 100 ಕೋಟಿ ರೂ. ಅಧಿಕ ಬೆಲೆಬಾಳುವ ನಿವೇಶನಗಳನ್ನು ಭೂಕಬಳಿಕೆ ಮಾಡಿದ್ದರು. ಇದನ್ನೂ ಓದಿ: ಬಜೆಟ್‌ವರೆಗೆ ಟೈಂ ಕೇಳ್ತಾರಾ ಸಿದ್ದರಾಮಯ್ಯ? ಸಂಕ್ರಾಂತಿಯೊಳಗೆ ಇತ್ಯರ್ಥಕ್ಕೆ ಡಿಕೆ ಪಟ್ಟು!

ಭೂ ಕಬಳಿಕೆದಾರರಾದ ಮಣಿಚೆಟ್ಟಿ ಮತ್ತು ಕುಟುಂಬದವರ ವಿರುದ್ದ ಆರ್. ಪರಮೇಶ್ವರ್ ಸುಮಾರು 3 ವರ್ಷಗಳಿಂದ ಬಿಡಿಎ ನಲ್ಲಿ ಹೋರಾಟ ಮಾಡಿ ನಂತರ ಕರ್ನಾಟಕ ವಿಶೇಷ ಭೂಕಬಳಿಕೆ ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮಾಡಿದ್ದರು. ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಕ್ಯಾಂಪ್‌ನಿಂದ 6 ಸಚಿವರ ದೆಹಲಿ ದಂಡಯಾತ್ರೆ
ಈ ಹೋರಾಟಕ್ಕೆ ಜಯ ಸಿಕ್ಕಿದ್ದು ಇಂದು ಬಿಡಿಎ ಅಧಿಕಾರಿಗಳು ಅಕ್ರಮ ಆಸ್ತಿಯನ್ನು ವಶಕ್ಕೆ ಪಡೆದರು. ಹಿರಿಯ ವಕೀಲರಾದ ಎನ್. ಶಶಿಧರ್ ರವರು ದೂರುದಾರರ ಪರ ವಾದ ಮಂಡಿಸಿದ್ದರು. ಕೋರ್ಟ್ ಆದೇಶದ ಮೇರೆಗೆ ಈ ಹಿಂದೆ 7 ಎಕರೆ ಇವತ್ತು 24 ಕುಂಟೆ ಜಮೀನನ್ನ ಬಿಡಿಎ ತನ್ನ ಸುಪರ್ದಿಗೆ ತೆಗೆದುಕೊಂಡಿದೆ.

